ಲಕ್ಷ್ಮೇಶ್ವರ: ಕಸ, ಚರಂಡಿ ಕಿರಿಕಿರಿ
ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಅನೇಕ ಕಸದ ತೊಟ್ಟಿಗಳು ತುಂಬಿ ಕಸ ಹೊರಸೂಸುತ್ತಿದೆ. ಕಸದ ತೊಟ್ಟಿಗಳು ದುರ್ನಾತ ಬೀರುವ ತಾಣಗಳಾಗಿವೆ. ಪಟ್ಟಣದ ಪ್ರಮುಖ ರಸ್ತೆಯಾಗಿರುವ ಪಾಲಾ ಬಾದಾಮಿ ರಸ್ತೆಯ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮುಖ್ಯ ಅಂಚೆ ಕಚೇರಿ ಮುಂದಿರುವ ಕಸದ ತೊಟ್ಟಿ ತುಂಬಿ ಚೆಲ್ಲಾಡುತ್ತಿದ್ದರೂ ವಿಲೇವಾರಿ ಮಾಡುವ ಪ್ರಯತ್ನ ನಡೆದಿಲ್ಲ. ಪೋಸ್ಟ್ ಆಫೀಸ್ಗೆ ಬರುವವರು ಕಸ ತುಳಿದುಕೊಂಡು ಒಳಗೆ ಬರಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಹಲವು ಬಾರಿ ಮನವಿ: ಪಟ್ಟಣದ ಬಾನು ಮಾರುಕಟ್ಟೆ ಪ್ರಾಂಗಣದಲ್ಲಿ ತರಕಾರಿಗಳ ತಾಜ್ಯ ಕೊಳೆತು ಗಬ್ಬೆದ್ದು ನಾರುತ್ತಿದೆ. ತರಕಾರಿ ಮಾರುಕಟ್ಟೆ ಪ್ರಾಂಗಣದ ಒಳಗೆ ಬೀಳುತ್ತಿರುವ ಮಳೆಯ ನೀರನ್ನು ಹೊರಗೆ ಬೀಳುವಂತೆ ಮಾಡಲು ಕಬ್ಬಿಣದ ಕಂಚಿ ನಿರ್ಮಿಸಿ ಪ್ಲಾಸ್ಟಿಕ್ ತಗಡಿನ ಹೊದಿಕೆ ಹಾಕಿ ಮಳೆ ನೀರು ಹೊರಗೆ ಹೋಗುವ ವ್ಯವಸ್ಥೆ ಮಾಡುವಂತೆ ಇಲ್ಲಿನ ವ್ಯಾಪಾರಸ್ಥರು ಪುರಸಭೆ ಆಡಳಿತ ಮಂಡಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮಳೆ ನೀರು ಮಾರುಕಟ್ಟೆ ಪ್ರಾಂಗಣದಲ್ಲಿ ಬಿದ್ದು ತರಕಾರಿ ತಾಜ್ಯ ಕೊಳೆತು ತರಕಾರಿ ಮಾರುವವರು ಹಾಗೂ ಗ್ರಾಹಕರು ಮೂಗು ಮುಚ್ಚಿಕೊಂಡು ವ್ಯವಹಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆ ಪ್ರಾಂಗಣದ ಮೇಲಿನ ಭಾಗವು ಪಾಳು ಬಿದ್ದಿರುವುದರಿಂದ ಅನೈತಿಕ ಚಟುವಟಿಕೆ ನಡೆಯುವ ತಾಣವಾಗುತ್ತಿದೆ. ಹಲವಾರು ಬಾರಿ ಈ ಕುರಿತು ತಿಳಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಇಲ್ಲಿನ ವ್ಯಾಪಾರಸ್ಥರ ಅಳಲಾಗಿದೆ.
ಸಫಾಯಿ ಕರ್ಮಚಾರಿಗಳ ಕೊರತೆ: ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಹಿಂದೆ ಇರುವ ಶೌಚಾಲಯ ಹತ್ತಿರದ ಕಸದ ತೊಟ್ಟಿ ಸದಾ ಕಾಲ ತುಂಬಿ ಬೊಜ್ಜು ಬಂದಿರುವ ಹೊಟ್ಟೆಯಂತಾಗಿದೆ. 15 ದಿನಕ್ಕೊಮ್ಮೆ ಕಸ ಹೊರ ಹಾಕುತ್ತಾರೆ. ಹೀಗಾಗಿ ಕಸದ ತೊಟ್ಟಿ ತುಂಬಿ ಹೊರ ಚೆಲ್ಲಿರುತ್ತದೆ. ಹಂದಿಗಳು ಕಸದ ರಾಶಿ ಮನೆಯನ್ನಾಗಿ ಮಾಡಿಕೊಂಡಿವೆ. ಅಲ್ಲದೆ ರಸ್ತೆ ಮೇಲೆ ಕಸ ಬೇಕಾಬಿಟ್ಟಿಯಾಗಿ ಹರಡಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿ 3-4 ದಿನ ಕಳೆದರೂ ವಿಲೇವಾರಿ ಮಾಡದಿರುವುದರಿಂದ ಮತ್ತೆ ಚರಂಡಿ ಸೇರುವುದು ಮಾಮೂಲಾಗಿದೆ. ಇದೆಲ್ಲ ಸ್ಥಿತಿಗೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿಗಳು ಅವಶ್ಯಕತೆಗಿಂತ ಕಡಿಮೆ ಇರುವುದು ಸಮಸ್ಯೆಗೆ ಮೂಲ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.
-ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

