ಹೆಸ್ಕಾಂಗೆ ಬೀಗ ಜಡಿದು ಪ್ರತಿಭಟನೆ
ಶಿರಹಟ್ಟಿ: ಕಳಪೆ ಗುಣಮಟ್ಟದ ವಿದ್ಯುತ್ ಪರಿವರ್ತಕ ಅಳವಡಿಸಿದ್ದರಿಂದ ಪದೇ ಪದೇ ಸುಟ್ಟು ಬೆಳೆಗಳು ಒಣಗುತ್ತಿವೆ. ಕೂಡಲೇ ಗುಣಮಟ್ಟದ ಹೊಸ ಟಿಸಿ ಅಳವಡಿಸಬೇಕೆಂದು ಆಗ್ರಹಿಸಿ ಗುರುವಾರ ಮಾಗಡಿ ಗ್ರಾಮದ ರೈತರು ಮತ್ತೆ ಹೆಸ್ಕಾಂ ಸಿಬ್ಬಂದಿ ಹೊರ ಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ವಿಷ್ಣು ಬಾಲರಡ್ಡಿ, ಮಹಾಂತೇಶ ಬಿಡನಾಳ ಮಾತನಾಡಿ, ಸುಮಾರು 70-80 ಎಕರೆ ಪ್ರದೇಶದಲ್ಲಿ ನೀರಾವರಿ ಆಶ್ರಯದಲ್ಲಿ ರೈತರು ಬೆಳೆ ಬೆಳೆದಿದ್ದು, ಟಿಸಿ ಪದೇ ಪದೇ ದುರಸ್ತಿಗೆ ಬರುತ್ತಿರುವುದರಿಂದ ಈರುಳ್ಳಿ, ಬಿಟಿ ಹತ್ತಿ, ಶೇಂಗಾ, ಗೋವಿನ ಜೋಳ ಬೆಳೆ ಒಣಗುತ್ತಿದ್ದು, ರೈತರಿಗೆ ನಷ್ಟವಾಗುತ್ತಿದೆ. ಇದಕ್ಕೆ ಹೆಸ್ಕಾಂ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದರು.
ರೈತರ ಸಮಸ್ಯೆ ಕುರಿತು ಅಧಿಕಾರಿ ಬಿ. ಆಂಜನಪ್ಪ ಮಾತನಾಡಿ, ಈಗಾಗಲೇ ನೀರಾವರಿ ಪ್ರದೇಶದ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದು, ಅನಧಿಕೃತವಾಗಿಯೂ ರೈತರು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ವಿದ್ಯುತ್ ಪರಿವರ್ತಕಕ್ಕೆ ಹೆಚ್ಚಿಗೆ ಲೋಡ್ ಬೀಳುತ್ತಿದೆ.
ಸದ್ಯ ಜಿಲ್ಲಾ ಕೇಂದ್ರದಲ್ಲಿ ಒಂದೇ ಟಿಸಿ ದುರಸ್ತಿ ಕೇಂದ್ರವಿರುವುದರಿಂದ ವಿಳಂಬವಾಗುತ್ತಿದೆ. ರೋಣ ಮತ್ತು ಲಕ್ಷ್ಮೇಶ್ವರದಲ್ಲೂ ರಿಪೇರಿ ಕೇಂದ್ರ ತೆರೆಯಲು ಟೆಂಡರ್ ಕರೆದಿದ್ದು, 4-5 ದಿನದಲ್ಲಿ 63 ವ್ಯಾಟ್ ಸಾಮರ್ಥ್ಯದ 2 ಹೊಸ ಟಿಸಿ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಪ್ರತಿಭಟನಾ ಸ್ಥಳಕ್ಕಾಗಮಿಸಿ ರೈತರ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮಲ್ಲಪ್ಪ ಗುಂಜಳ, ಅಶೋಕ ಶೆಟರಡ್ಡಿ, ರಮೇಶ ಮಾಯಣ್ಣವರ, ಸುರೇಶ ತಳವಾರ, ಹುಸೇನಸಾಬ ಕುರ್ತಕೋಟಿ, ವೆಂಕಟೇಶ ವಡವಿ, ಶಿವಾನಂದ ಕುಂದಿ, ನಾರಾಯಣಗೌಡ್ರ ಯರಗಟ್ಟಿ, ಪ್ರವೀಣ ಹೂಗಾರ, ಗುರುಶಿದ್ದಪ್ಪ ಮರಿಹುಚ್ಚಣ್ಣವರ, ಹೇಮಣ್ಣ ಬಾಲರಡ್ಡಿ ರೈತರು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

