ಗದಗ

ವೀರಯೋಧ ಬಸವರಾಜ ಯರಗಟ್ಟಿ ಪು ಣ್ಯಸ್ಮರಣೆ

Published On :


ನರಗುಂದ:  ತಾಲೂಕಿನ ಜಗಾಪುರ ಗ್ರಾಮದ ಹುತಾತ್ಮ ವೀರಯೋಧ ಬಸವರಾಜ ಯರಗಟ್ಟಿ ಅವರ ಪುಣ್ಯತಿಥಿಯನ್ನು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಗ್ರಾಮಸ್ಥರು ಗ್ರಾಮದಲ್ಲಿ ಆಚರಿಸಿದರು. 2013ರ ಜೂನ್ 25ರಂದು ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿದ ಜನತೆ ರಕ್ಷಣೆ ಮಾಡಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಯೋಧ ಸಾವನ್ನಪ್ಪಿದ್ದಾನೆ. ಈ ಸಂದರ್ಭದಲ್ಲಿ ಹೆಬ್ಬಳ್ಳಿಯ ವೀರೇಶ ದೇವರು, ವೀರಯೋಧನ ತಾಯಿ ಗಿರಿಜವ್ವ ಯರಗಟ್ಟಿ, ಎನ್.ಡಿ. ಕಿತ್ತೂರ, ಲಕ್ಷ್ಮಣ ಹೂಗಾರ, ಮಲ್ಲಪ್ಪ ಹೂಲಿ, ಶುಂಭು ಜಂಗವಾಡ, ಮಹಾದೇವಪ್ಪ ಬನಪ್ಪನವರ, ಹರೀಶ, ಶಂಭುಲಿಂಗ ಮುಂದಿನಮನಿ, ಎಸ್. ಸಿದ್ದರಾಜ, ಭೀಮಪ್ಪ ಮನೇನಕೊಪ್ಪ ಹಾಜರಿದ್ದರು.

ಹಿಂದಿ ಶಿಕ್ಷಕರಿಗೆ ಸಲಹೆ ಅವಶ್ಯ: ಹುಗ್ಗಿ



ನರಗುಂದ:  ಹಿಂದಿ ಶಿಕ್ಷಕರಿಗೆ ನೂತನ ಪುಸಕ್ತಗಳ ಕುರಿತು ತರಬೇತಿ ಅವಶ್ಯಕ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ಹೇಳಿದರು. ಅವರು ಗುರುವಾರ ಪಟ್ಟಣದ ಬಸವೇಶ್ವರ ಕಂಠಿ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕರ ತರಬೇತಿ ಶಿಬಿರಕ್ಕೆ ಸಸಿಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದವರು. ಲಯನ್ಸ್ ಶಾಲೆ ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ಮಾತನಾಡಿದರು. ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಮುಖ್ಯೋಪಾಧ್ಯಾಯ ಪಿ.ಎಫ್. ಸೊಲ್ಲಾಪುರಿ, ಎಸ್.ಎಂ. ಉಕ್ಕಲಿ, ತಾಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಎಂ. ಖಾಜಿ, ಎಸ್.ಎಂ. ಮಕಂದರ, ಎಸ್.ಎಂ. ಅಂಗಡಿ, ಎಂ. ಅಶೋಕ, ಕೆ.ಬಿ. ಹುಲಗೂರ, ಪಿ.ವೈ. ತೊಂಡಹಾಳ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.