ಗದಗ

ಮುಂಡರಗಿಯಲ್ಲಿ ಕಪ್ಪತ್ತಗುಡ್ಡ ಅರಿವು: ನಾಳೆ ರಾಜ್ಯ ಮಟ್ಟದ ವಿಚಾರ ಸಂಕಿರಣ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 2
ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮುಂಡರಗಿ, ಕಪ್ಪತಗುಡ್ಡ ವಲಯ ಅರಣ್ಯ ಇಲಾಖೆ ಮತ್ತು ಕಪ್ಪತಗುಡ್ಡ ಪರಿಸರ ಸಂರಕ್ಷಣಾ ವೇದಿಕೆ ಇವುಗಳ ಆಶ್ರಯದಲ್ಲಿ ಮಾ. 4ರಂದು ಬೆಳಗ್ಗೆ 9.30ಕ್ಕೆ ಕೆ.ಆರ್. ಬೆಲ್ಲದ ಕಾಲೇಜಿನ ಸಭಾಭನವದಲ್ಲಿ ಕಪ್ಪತ್ತಗುಡ್ಡ ಅರಿವು- ರಾಜ್ಯ ಮಟ್ಟದ ವಿಚಾರ ಸಂಕಿರಣ ಜರುಗಲಿದೆ.
ಜಿಲ್ಲಾಧಿಕಾರಿ ಎಂ.ಎಸ್. ಪ್ರಸನ್ನಕುಮಾರ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಪ್ಪತಗುಡ್ಡ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಾಲೇಜು ಸ್ಥಾನಿಕ ಕಮಿಟಿ ಕಾರ್ಯಾಧ್ಯಕ್ಷ ಆರ್.ಬಿ. ಡಂಬಳಮಠ ಅಧ್ಯಕ್ಷತೆ ವಹಿಸುವರು. ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಅಶಯ ನುಡಿಗಳನ್ನಾಡಲಿದ್ದಾರೆ. ಅತಿಥಿಯಾಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಪಾಲ್ಗೊಳ್ಳಲಿದ್ದು, ಬೆಳಗ್ಗೆ 11ಕ್ಕೆ ಪ್ರಥಮ ಗೋಷ್ಠಿ ನಡೆಯಲಿದ್ದು, ನಂದಿವೇರಿ ಮಠದ ಶಿವಕುಮಾರ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಕಪ್ಪತ್ತಗುಡ್ಡದಲ್ಲಿನ  ಔಷಧಿಯ ಸಸ್ಯಗಳ ಕುರಿತು ಮಾತನಾಡುವರು. ಗದಗ ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ಎನ್. ಅಘೋರೆ ಕಪ್ಪತಗುಡ್ಡದಲ್ಲಿನ ಅರಣ್ಯ, ಖನಿಜ ಮತ್ತು ಪ್ರಾಣಿ ಸಂಪತ್ತು ಕುರಿತು ಉಪನ್ಯಾಸ ನೀಡುವರು. ಪ್ರೊ. ಸಿ.ಎಸ್. ಅರಸನಾಳ ಕಪ್ಪತಗುಡ್ಡದ ಇತಿಹಾಸ, ಗುಡಿಗುಂಡಾರಗಳು, ಕೆರೆಕಟ್ಟೆಗಳು ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ದ್ವಿತೀಯ ಗೋಷ್ಠಿ ಜರುಗಲಿದ್ದು, ಗದಗ ಡಿಜಿಎಂ ಆಯುರ್ವೇದಿಕ ಮೆಡಿಕಲ್ ಕಾಲೇಜ ಪ್ರಾಚಾರ್ಯ ಜಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿ ಕಪ್ಪತಗುಡ್ಡದ ವಿಶೇಷತೆಗಳ ಕುರಿತು ಮಾತನಾಡುವರು. ಪ್ರಾ. ವಿ.ಎಫ್. ಅಂಗಡಿ ಕಪ್ಪತಗುಡ್ಡದ ಹಿನ್ನೆಲೆಯ ಕಥೆಗಳ ಕುರಿತು ಮಾತನಾಡಲಿದ್ದಾರೆ. ಡಾ.ಪಿ.ಬಿ. ಹಿರೇಗೌಡ್ರ ಕಪ್ಪತಗುಡ್ಡ ಅಂದು-ಇಂದು ಕುರಿತು ಮಾತನಾಡುವರು. ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಕೆ.ಆರ್. ಬೆಲ್ಲದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಬೆಳವಟಗಿ ಅಧ್ಯಕ್ಷತೆ ವಹಿಸಿ ಕಪೋತಗಿರಿ ನಮ್ಮ ಕನಸು ಕುರಿತು ಪ್ರಬಂಧ ಮಂಡಿಸುವರು. ಡಾ. ನಿಂಗು ಸೊಲಗಿ ಅವರು ಕಪೋತಗಿರಿ ಹಿನ್ನೆಲೆಯ ಸಾಹಿತ್ಯ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕಾಂತರಾಜ ಹಿರೇಮಠ ಭಾಗವಹಿಸುವರು. ಶರಣಪ್ಪ ಕುಬಸದ ಹಾಗೂ ದೇವಪ್ಪ ಇಟಗಿಯವರಿಂದ ಕಪ್ಪತ್ತಗುಡ್ಡದ ಹಾಗೂ ಅಲ್ಲಿನ ಔಷಧಿ ಸಸ್ಯಗಳ ಕುರಿತು ಜಾಗೃತಿ ಗೀತೆಗಳನ್ನು ಹಾಡಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.