ಗದಗ

ಕನ್ನಡ ಸಾಹಿತ್ಯಕ್ಕೆ ಜನಪದ ತಾಯಿಬೇರು

Published On :

ಗದಗ: ಮಾನವನ ಉಗಮದೊಂದಿಗೆ ಜನಪದ ಸಾಹಿತ್ಯ ಹುಟ್ಟಿ ತನ್ನ ವಿಸ್ತಾರವನ್ನು ಜನಪದ ಸಾಹಿತ್ಯ ತೆಲೆಮಾರಿನಿಂದ ತೆಲೆಮಾರಿಗೆ ಸಾಗಿ ಬಂದು ಬದುಕಿನ ನೋವು, ನಲಿವು, ಪ್ರೀತಿ, ಪ್ರೇಮ, ಪ್ರಣಯ, ಭಕ್ತಿ ಕುರಿತು ಅನೇಕ ವಿಚಾರಗಳು ಜನಪದ ಸಾಹಿತ್ಯದಲ್ಲಿದ್ದು, ಕನ್ನಡ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ತಾಯಿಬೇರು ಎಂದು ನಿಡಗುಂದಿಯ ಎಸ್.ಎ  ಪ್ರೌಢಶಾಲೆಯ ಶಿಕ್ಷಕ ಸುರೇಶ ಹಳ್ಳಿಕೇರಿ ಹೇಳಿದರು.
ಅವರು ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ ಕುರಿತು ಮಾತನಾಡಿದರು.
ನಮ್ಮ ಗ್ರಾಮೀಣ ಭಾಗದ ಜನರು ಬೀಸುವಾಗ, ಕುಟ್ಟುವಾಗ, ವ್ಯವಸಾಯ ಮಾಡುವಾಗ ಆಡಿದ ಮಾತೆ ಜನಪದವಾಗಿದೆ. ದೊಡ್ಡಾಟ, ಸಣ್ಣಾಟ, ಕೋಲಾಟ, ಗೀಗೀಪದ, ಡೊಳ್ಳಿನಪದ, ಗಾದೆ, ಉಡುಪುಗಳು, ತೊಗಲು ಗೊಂಬೆ, ಹಂತಿಯ ಹಾಡು ಮುಂತಾದವುಗಳು ಜನಪದ ಸಾಹಿತ್ಯದ ಅಂಶಗಳಾಗಿವೆ. ಕನ್ನಡ ಸಾಹಿತ್ಯದ ಇತಿಹಾಸ ಚರಿತ್ರೆಯಲ್ಲಿ ಜನಪದ ಸಾಹಿತ್ಯ ಮೂಲ ದ್ರವ್ಯವಾಗಿದೆ. ನಾಡಿನ ವಿದ್ವಾಸರಾದ ಹಾ.ಮಾ. ನಾಯಕ, ದೇ.ಜವರೇಗೌಡ, ಡಾ. ಸೋಮಶೇಖರ ಇಮ್ರಾಪುರ, ಸಿಂ.ಪಿ. ಲಿಂಗಣ್ಣ, ಡಾ. ಚನ್ನಣ್ಣ ವಾಲೀಕಾರ. ಡಾ. ಎಚ್.ಎಲ್. ನಾಗೇಗೌಡ ಮುಂತಾದವರು ಜನಪದ ಸಾಹಿತ್ಯವನ್ನು ಕೃಷಿ ಮಾಡಿ ಜನಪದ ಸಾಹಿತ್ಯದ ಹಿರಿಮೆ ಹೆಚ್ಚಿಸಿದ್ದಾರೆ. ಆದ್ದರಿಂದ ಜನಪದ ಸಾಹಿತ್ಯ ಅಂದು ಇಂದು ತನ್ನ ವೈಶಿಷ್ಟತೆ ಮೆರೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಜನಪದ ಸಾಹಿತ್ಯದ ವ್ಯಾಪ್ತಿ ದೊಡ್ಡದು. ಜನಪದ ಸಾಹಿತ್ಯ ಜನರ ಶ್ರಮಮೂಲದಿಂದ ಬಂದ ಸಾಹಿತ್ಯ ಎಂದರು. ಕವಿ ಉಮೇಶ ಶಿಂಪರ ಅಂತರಂಗದ ನೋವು ಎಂಬ ಸ್ವರಚಿತ ಕವನ ವಾಚಿಸಿದರು.
ಕೆ.ಎಚ್. ಬೇಲೂರ, ವಿ.ಬಿ. ಪಠಾಣಿ, ಮಹಾಂತೇಶ ಮದ್ನೂರ, ಬಸಯ್ಯ ನಂದಿಕೋಲಮಠ, ರವಿ ಕಟ್ಟಿಮನಿ, ಆರ್.ಎಂ. ಹಿರೇಮಠ, ಶರಣಪ್ಪ ಬಾಲಣ್ಣವರ, ಸಿ.ಕೆ. ಕೇಸರಿ, ಯಮನೂರಪ್ಪ, ಗಂಗಾಧರ ಗುಡ್ಲಾನೂರ, ಬಿ.ಬಿ. ಹಡಪದ, ಶೋಭಾ ಶಲವಡಿ, ಭಾಗ್ಯಶ್ರೀ ಘಳಗಿ, ರಾಘವೇಂದ್ರ, ವಾಸು ಟಿಕನದಾರ, ಎಂ.ಪಿ. ರಮೇಶ ಮುಂತಾದವರು ಪಾಲ್ಗೊಂಡಿದ್ದರು. ಕನಕರಾಯ ಜಿಗಳೂರ ಪ್ರಾರ್ಥಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ನಿರೂಪಿಸಿದರು. ಡಾ. ಸಂಗಮೇಶ ತಮ್ಮನಗೌಡ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.