ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ
ರೋಣ: ಬಾಲ್ಯದಲ್ಲಿನ ಸಂಸ್ಕಾರ ಕೊರತೆಯಿಂದ ಮಕ್ಕಳು ಭವಿಷ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಸಂಸ್ಕಾರ ಅತ್ಯಗತ್ಯವಾಗಿದ್ದು, ಸಂಸ್ಕಾರವಿಲ್ಲದ ಶಿಕ್ಷಣ ನಿಜವಾಗಿಯೂ ವ್ಯರ್ಥ ಎಂದು ಗುರುಕುಲ ಯೋಗಿ, ಶಿಕ್ಷಕ ಸಂತ ಬಿ.ಜಿ. ಅಣ್ಣಿಗೇರಿ ಹೇಳಿದರು.
ಅವರು ಈಚೆಗೆ ಪಟ್ಟಣದ ಸಿದ್ರಾಮೇಶ್ವರ ವಿದ್ಯಾದಾನ ಸಂಸ್ಥೆಯ ಗ್ರೀನ್ವುಡ್ ಇಂಟರ್ನ್ಯಾಶನಲ್ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ವಾರ್ಷಿಕ ಹರ್ಷೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಿಜವಾದ ಶಿಕ್ಷಣ ಉತ್ತಮ ಸಂಸ್ಕಾರ, ಆಚಾರ, ವಿಚಾರ, ನೈತಿಕತೆ, ಸಾತ್ವಿಕತೆ, ಉಧಾತತೆ, ಪರೋಪಕಾರಿ ಗುಣಗಳನ್ನು ಹೊಂದಿರಬೇಕು. ನಾಲ್ಕು ಗೋಡೆಯ ಮದ್ಯ ಮಕ್ಕಳ ಭವಿಷ್ಯ ನಿರ್ಧಾರವಾಗದು, ಮಗು ವಿಕಸನ ಹೊಂದಲು ವಿಶಾಲವಾದ ಶಿಕ್ಷಣ ಅಗತ್ಯವಿದೆ. ಇತರರೊಂದಿಗೆ ಕೂಡಿ ಕಲಿಯುವುದು, ನೋಡಿ ಕಲಿಯುವುದು, ಅನುಭವಿಸಿ ಕಲಿಯುವುದು, ಗ್ರಹಿಸಿ, ವಿವೇಚಿಸುವುದರೊಂದಿಗೆ ತಾರ್ಕಿಕ ಗುಣಗಳನ್ನು ಹೊಂದುವಲ್ಲಿ ಮಗುವಿಗೆ ಮುಕ್ತ ಅವಕಾಶ ಮಗುವಿಗೆ ದೊರಕಬೇಕು. ಮಗುವಿನಲ್ಲಿನ ಸೂಕ್ತ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕ ತರಬೇತಿ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಬಾಲೇಹೊಸೂರ ಕುಮಾರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ತಂದೆ, ತಾಯಿಗಳ ಮಕ್ಕಳಿಗೆ ಓದಿನಲ್ಲಿ ಮುಂದೆ ಬರಲಿ ಎಂದು ಒತ್ತಡ ಹೇರಬಾರದು. ಮುಕ್ತವಾಗಿ ಕಲಿಯಲು ವೇದಿಕೆ ಕಲ್ಪಿಸಬೇಕು. ದೇಶದಲ್ಲಿ ಸಾಧನೆ ಮಾಡಿದ ಸಾಧಕರ ಜೀವನ ಚರಿತ್ರೆ, ಅವು ನಡೆದು ಬಂದು ಹಾದಿ, ಸಾಧನೆ ಕುರಿತು ವಿವರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಗುರುಕುಲ ಯೋಗಿ, ಶಿಕ್ಷಕ ಸಂತ ಬಿ.ಜಿ. ಅಣ್ಣಿಗೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶೇಖರ ಸಾಲಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸುಬೋಧ ರಾಬಾ ಶಾಲೆಯ ವಾರ್ಷಿಕ ವರದಿ ವಾಚನ ಮಾಡಿದರು. ಪುರಸಭೆ ಸದಸ್ಯ ಅಜ್ಜಪ್ಪ ರಡ್ಡೇರ, ಸಿದ್ದನಗೌಡ ಪಾಟೀಲ, ಪ್ರೌಢ ಶಾಲೆ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ವಿ.ಎನ್. ಅಮಾತಿಗೌಡ್ರ, ಶಿವು ಹುಲ್ಲೂರ, ಸುಭಾಸ ನೀಲಗಾರ, ಜಗದೀಶ ಅಳ್ಳೊಳ್ಳಿ, ವೀರೇಶ ಸಂಗಳದ ಮುಂತಾದವರು ಇದ್ದರು. ಅವಿನಾಶ ಸಾಲಮನಿ ಸ್ವಾಗತಿಸಿದರು. ಸುನಿತಾ ರಾಬಾ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

