ಸದೃಢ ಬದುಕಿನ ಆತ್ಮವಿಶ್ವಾಸ ಮೂಡಿಸಬೇಕಿದೆ: ಡಾ. ರಾಧಿಕಾ
ಗದಗ: ಇಂದು ಮಹಿಳೆಯ ಮೇಲೆ ಎಲ್ಲೆಡೆ ನಡೆಯುತ್ತಿರುವ ದೌರ್ಜನ್ಯಗಳು ಅವಳ ಮಾನಸಿಕ ಸ್ಥೈರ್ಯ ಕುಗ್ಗಿಸುತ್ತಿವೆ. ಮಹಿಳೆ ಸದೃಢತೆಯಿಂದ ಗಟ್ಟಿತನದ ಬದುಕು ನಡೆಸಲು ಆಕೆಗೆ ಆತ್ಮವಿಶ್ವಾಸ ಮೂಡಿಸಬೇಕಿದೆ ಎಂದು ಡಾ. ರಾಧಿಕಾ ಕುಲಕರ್ಣಿ ಹೇಳಿದರು.
ಅವರು ಮಂಗಳವಾರ ಗದುಗಿನ ಎಸ್ಎಸ್ಕೆ ಮಹಿಳಾ ಮಂಡಳ ಜಗದಂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವತಿಯರು ಪಾಶ್ಚಾಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ವಿಷಾದದ ಸಂಗತಿ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆ ಸಂರಕ್ಷಿಸಿ ಪರಿಪಾಲಿಸಿಕೊಂಡು ಮುನ್ನಡೆಯಬೇಕಿದೆ ಎಂದರು. ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಎಸ್ಎಸ್ಕೆ ಮಹಿಳಾ ಮಂಡಳದ ಅಧ್ಯಕ್ಷೆ ಲಲಿತಾ ಬಾಕಳೆ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಮುನ್ನಡೆಯಬೇಕು ಎಂದರು.
ಮಹಿಳಾ ದಿನಾಚರಣೆಯ ಅಂಗವಾಗಿ ಎಸ್ಎಸ್ಕೆ ಸಮಾಜದ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ರಂಗೋಲಿ, ಮೇಹಂದಿ, ಕೇಶಾಲಂಕಾರ, ಆಟೋಟ ಮತ್ತು ಫ್ಯಾಶನ್ ಶೋ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಬಿಕಾ ಬುರಬುರೆ ಸ್ವಾಗತಿಸಿದರು. ಶಕುಂತಲಾ ಮೇರವಾಡೆ ನಿರೂಪಿಸಿದರು. ಸ್ನೇಹಲತಾ ಕಬಾಡಿ ವಂದಿಸಿದರು. ಬೆಟಗೇರಿಯ ಎಸ್ಎಸ್ಕೆ ಮಹಿಳಾ ಮಂಡಳದ ಅಧ್ಯಕ್ಷೆ ಇಂದುಮತಿ ಬದಿ, ಅಂಬುಬಾಯಿ ಬೇವಿನಕಟ್ಟಿ, ಭಾರತಿ ಬದಿ, ರೇಣುಕಾ ಕಲಬುರ್ಗಿ, ಶಾಂತಾಬಾಯಿ ಸಿದ್ಲಿಂಗ್, ಗೀತಾ ಬಾಂಢಗೆ, ಶಕುಂತಲಾ ಕಬಾಡಿ, ಶಾಂತಾ ಬಾಕಳೆ, ಉಮಾ ಬೇವಿನಕಟ್ಟಿ, ರೇಖಾ ಖಟವಟೆ, ಲಕ್ಷ್ಮಿಬಾಯಿ ಖಟವಟೆ, ಸುನಂದಾ ಹಬೀಬ, ಪುಷ್ಪಾ ಖಟವಟೆ ಪಾಲ್ಗೊಂಡಿದ್ದರು.
--
ಸನ್ಮಾರ್ಗಕ್ಕೆ ಸಹಕಾರ ಅಡಿಪಾಯ: ಬಂಡಿ
ಗದಗ: ಮಾನವ ಸಂಘ ಜೀವಿ ಸಹಕಾರದಿಂದ ಬದುಕಿದರೆ ಸನ್ಮಾರ್ಗಕ್ಕೆ ಅಡಿಪಾಯವಾಗುತ್ತದೆ ಎಂದು ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಶಿವಯೋಗಿ ಬಂಡಿ ಹೇಳಿದರು. ಅವರು ಈಚೆಗೆ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಸಹಕಾರಿ ಪತ್ತಿಗೆ ಆಯ್ಕೆಯಾದ ಮಹನೀಯರಿಗೆ ಸನ್ಮಾನಿಸಿ ಮಾತನಾಡಿ, ಹೊಂದಾಣಿಕೆಯ ಮನೋಭಾವದಿಂದ ಸರ್ವರೂ ಸಂತೋಷದಿಂದ ಜೀವನ ಸಾಗಿಸಬಹುದು ಎಂದರು. ಇದೇ ಸಂದರ್ಭದಲ್ಲಿ ಹುಲಕೋಟಿ ವಿಭಾಗದ ಶಿಕ್ಷಕರ ಪತ್ತು ಬೆಳೆಸುವ ಸಹಕಾರ ಸಂಘಕ್ಕೆ ಆಯ್ಕೆಯಾದ ಎ.ವಿ. ಪ್ರಭು ಮತ್ತು ಎಸ್.ಎಚ್. ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಗುರುಮಾತೆ ಎಲ್.ಎಲ್. ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ವಿ.ಬಿ. ಪೊಲೀಸ್ಪಾಟೀಲ, ಸಹಕಾರ್ಯದರ್ಶಿ ಕೆ.ಎಫ್. ಹಳ್ಯಾಳ, ಸಿಆರ್ಪಿ ಕೆ.ಎಸ್. ದಿಂಡಿ, ಎಸ್.ಬಿ. ಪಾಟೀಲ, ಎಸ್.ಎಸ್. ಹೂಗಾರ, ಎಸ್.ಎಂ. ರಡ್ಡೇರ, ಮಂಜುಳಾ ಮಾದರ ಮುಂತಾದವರು ಹಾಜರಿದ್ದರು. ಶಿಕ್ಷಕ ಎಂ.ಎಚ್. ಮುಳಗುಂದ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

