ಎನ್.ಡಿ. ಪಾಟೀಲ ಅವಿರೋಧ ಆಯ್ಕೆ
ಗದಗ: ಹುಬ್ಬಳ್ಳಿಯ ಉತ್ತರ ಕರ್ನಾಟಕ ಜೈನ್ ಮಹಾಸಂಘಕ್ಕೆ ನೂತನ ಉಪಾಧ್ಯಕ್ಷರಾಗಿ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಹಿರಿಯ ಎನ್.ಡಿ. ಪಾಟೀಲ ಅವಿರೋಧ ಆಯ್ಕೆಯಾಗಿದ್ದಾರೆ. ಹಿರಿಯ ನಿವೃತ್ತ ಶಿಕ್ಷಕ ಎನ್.ಡಿ.ಪಾಟೀಲರು ಗದಗ ಜಿಲ್ಲಾ ದಿಗಂಬರ ಜೈನ್ ಸಂಘದ ಅಧ್ಯಕ್ಷರಾಗಿ, ಶಿರಹಟ್ಟಿ ತಾಲೂಕು ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಶಿರಹಟ್ಟಿ ತಾಲೂಕು ಶಿಕ್ಷಕರ ಸಂಘದ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರೊಂದಿಗೆ ಮಲ್ಲಸಮುದ್ರದ ಜಿನ ಮಂದಿರದ ಅಧ್ಯಕ್ಷ ಡಾ. ಕೆ.ಡಿ. ಪಾಟೀಲ, ಗದಗ ಜಿಲ್ಲಾ ದಿಗಂಬರ ಜೈನ್ ಸಂಘದ ಮಾಜಿ ಖಜಾಂಚಿ ಎಂ.ಟಿ. ಕಬ್ಬಿಣ ಅವರನ್ನು ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ಉತ್ತರ ಕರ್ನಾಟಕ ಜೈನ್ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಪಾಟೀಲ ಹಾಗೂ ಸರ್ವ ಸದಸ್ಯರು ಗದಗ ವಿಭಾಗದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ವಿಜ್ಞಾನ ಸಮ್ಮೇಳನದಲ್ಲಿ ಪದ್ಮಾ ಹುಂಬಿಗೆ ಸನ್ಮಾನ
ಗದಗ: ಚೆನ್ನೈನಲ್ಲಿ ಈಚೆಗೆ ಜರುಗಿದ ದಕ್ಷಿಣ ಭಾರತದ 5 ರಾಜ್ಯಗಳ ವಲಯ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ವಿಶೇಷ ಶಿಕ್ಷಕಿ ಪ್ರಶಸ್ತಿ ಪಡೆದ ಗದಗ ನಗರದ ಲೋಯಲಾ ಹೈಸ್ಕೂಲ್ನ ಶಿಕ್ಷಕಿ ಪದ್ಮಾ ಹುಂಬಿ ಅವರನ್ನು ಈಚೆಗೆ ಜರುಗಿದ ಗದಗ ಜಿಲ್ಲಾ ಮಟ್ಟದ ಪ್ರೌಢಶಾಲೆ ಶಿಕ್ಷಕರ ಗಣಿತ ಮತ್ತು ವಿಜ್ಞಾನ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಸಿಟಿಇ ಸಹ ನಿರ್ದೇಶಕ ಮಂಟಲಿಂಗಾಚಾರ್, ಡಿಡಿಪಿಐ ಬಿ.ವಿ. ರಾಜೇಂದ್ರಪ್ರಸಾದ, ಗದಗ ಗ್ರಾಮೀಣ ಬಿಇಒ ಶಂಕರ ಹೂಗಾರ, ಗದಗ ಶಹರ ಬಿಇಒ ಐ.ಬಿ. ಬೆನಕೊಪ್ಪ, ಮಂಗಲಾ ತಾಪಸ್ಕರ, ವಿಷಯ ಪರಿವೀಕ್ಷಕ ಎ.ಎ. ಖಾಜಿ ಇತರರು ಉಪಸ್ಥಿತರಿದ್ದರು.
ಇಂದಿನಿಂದ ಶಿವಕುಮಾರ ಉದಾಸಿ ಪ್ರವಾಸ
ರಾಣಿಬೆನ್ನೂರು: ಹಾವೇರಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಕುಮಾರ ಉದಾಸಿ ಮಾ. 14, 15ರಂದು ಎರಡು ದಿನಗಳ ಕಾಲ ತಾಲೂಕಿನ ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟಿರುವ 20 ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಿ ತಾವು ಸಂಸದರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ಮತದಾರರಿಗೆ ತಿಳಿಸುವುದರೊಂದಿಗೆ ಮತಯಾಚಿಸುವರೆಂದು ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾ. 14ರ ಬೆಳಗ್ಗೆ 9 ಗಂಟೆಗೆ ಬೇಲೂರು, 10 ಗಂಟೆಗೆ ಮೇಡ್ಲೆರಿ, 11 ಗಂಟೆಗೆ ಆರೇಮಲ್ಲಾಪುರ, 12.30 ಗಂಟೆಗೆ ಹಿರೇಬಿದರಿ, ಮಧ್ಯಾಹ್ನ 1.30 ಗಂಟೆಗೆ ಐರಣಿ, 2.30 ಗಂಟೆಗೆ ಕೊಡಿಯಾಲ, 3.30ಕ್ಕೆ ಕವಲೆತ್ತು, ಸಂಜೆ 4 ಗಂಟೆಗೆ ಮಾಕನೂರು ಗ್ರಾಮಕ್ಕೆ ಆಗಮಿಸಿ ಸಭೆ ನಡೆಸಲಿದ್ದಾರೆ. ಮಾ. 15ರ ಬೆಳಗ್ಗೆ 9.30ಕ್ಕೆ ತುಮ್ಮಿನಕಟ್ಟಿ, 10.30ಕ್ಕೆ ಮಾಳನಾಯಕನಹಳ್ಳಿ, 11.30ಕ್ಕೆ ನಿಟ್ಟೂರು, 12.30ಕ್ಕೆ ಕುಪ್ಪೆಲೂರು, ಮಧ್ಯಾಹ್ನ 1.30ಕ್ಕೆ ಕೋಟಿಹಾಳ, 2.30ಕ್ಕೆ ಮದೇನೂರು, 3.30ಕ್ಕೆ ಅಂತರವಳ್ಳಿ, ಸಂಜೆ 4.30ಕ್ಕೆ ಹಲಗೇರಿ, 5.30ಕ್ಕೆ ಇಟಗಿ, 6ಕ್ಕೆ ಕರೂರು, 6.30ಕ್ಕೆ ಚಳಗೇರಿ, 7 ಗಂಟೆಗೆ ಕಮದೋಡ ಗ್ರಾಮದಲ್ಲಿ ಮತಯಾಚಿಸುವರೆಂದು ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಕಾರ್ಯದರ್ಶಿ ಕೂಪರ್ಡೆ ತಿಳಿಸಿದ್ದಾರೆ.
ಇಂದು ಬೀಳ್ಕೊಡುಗೆ
ಹಾನಗಲ್ಲ: ನಗರದ ಜಗದ್ಗುರು ಪಂಚಾಚಾರ್ಯ ಪ್ರತಿಷ್ಠಾನದ ಗೌರಮ್ಮ ಬ. ಹಿರೇಮಠ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮಾ. 14ರಂದು ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ನಡೆವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ, ಅಭಿಯಂತ ಬಿ.ವೈ. ಬಂಡಿವಡ್ಡರ, ಕಲಾವಿದ ರವಿ ಲಕ್ಷ್ಮೇಶ್ವರ ಇತರರು ಪಾಲ್ಗೊಳ್ಳುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

