ಆರೋಗ್ಯ ಕೇಂದ್ರ 24 ಗಂಟೆ ಕಾರ್ಯ
ಗದಗ: ಬೆಟಗೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದಿನದ 24 ಗಂಟೆ ಸೇವೆ ಪ್ರಾರಂಭಿಸಿರುವುದಕ್ಕೆ ಜಾತ್ಯತೀತ ಜನತಾ ದಳದ ಮುಖಂಡರು ಸ್ವಾಗತಿಸಿ, ಅಭಿನಂದಿಸಿದ್ದಾರೆ.
ಜಿಲ್ಲಾ ಜಾತ್ಯತೀತ ಜನತಾದಳ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣು ಅರವಟಗಿ, ಅಲ್ಪಸಂಖ್ಯಾತರ ಶಹರ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನರಸಾಪುರ ನೇತೃತ್ವದಲ್ಲಿ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಬೆಟಗೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಟಗೇರಿ ನಿವಾಸಿಗಳು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರನ್ನು ಅಭಿನಂದಿಸಿದರು.
ಬೆಟಗೇರಿ ಜನರ ತೊಂದರೆ ನಿವಾರಿಸಲು ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮ ಭಾಗದ ಜನರು ತೊಂದರೆ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಹಿಂದೆ ಬೆಟಗೇರಿ ನಿವಾಸದ ಯುವಕ ಮಹೇಶ ನಾಗರಾಳ ವಾಂತಿ, ಭೇದಿಯಿಂದ ನರಳುತ್ತಿದ್ದಾಗ ಜಿಲ್ಲಾಸ್ಪತ್ರೆ ಬೆಟಗೇರಿಯಿಂದ ಸುಮಾರು 10 ಕಿ.ಮೀ. ದೂರವಿದ್ದುದರಿಂದ ದಾರಿ ಮಧ್ಯ ಕೊನೆಯುಸಿರೆಳೆದನು. ಇಂತಹ ಪರಿಸ್ಥಿತಿ ಮುಂದೆ ಯಾರಿಗೂ ಬರದಂತೆ ನಮ್ಮ ನಿಯೋಗ ಕರೆದುಕೊಂಡು ಜಿಲ್ಲಾಧಿಕಾರಿಗೆ ಸಮಸ್ಯೆ ಕುರಿತು ಮನವರಿಕೆ ಮಾಡಲಾಗಿತ್ತು.
ಸುಮಾರು ರು. 95 ಲಕ್ಷ ವೆಚ್ಚದಲ್ಲಿ ಆರೋಗ್ಯ ಕೇಂದ್ರ ನಿರ್ಮಿಸಲಾಗಿದ್ದು, 10 ಹಾಸಿಗೆಯುಳ್ಳ ಆರೋಗ್ಯ ಕೇಂದ್ರ ಉದ್ಘಾಟನೆಗೊಂಡು ಎಲ್ಲ ಸಲರಕಣೆಗಳಿದ್ದರೂ ಫುಡಾರಿಗಳ ತಾಣವಾಗಿತ್ತು. ಇದನ್ನು ಅರಿತ ನಾವು ಹೋರಾಟ ನಡೆಸಿದೆವು. ಆಗ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬಂದು ಆಸ್ಪತ್ರೆಯನ್ನು ಮತ್ತೆ ಪ್ರಾರಂಭಿಸಿದರು. ಈ ಮೊದಲು ಸಂಜೆ 5ರ ವರೆಗೆ ಮಾತ್ರ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿತ್ತು. ರಾತ್ರಿ ವೇಳೆಯಲ್ಲಿ ತೊಂದರೆಗೊಳಗಾಗುವರ ಕುರಿತು ಜಿಲ್ಲಾಧಿಕಾರಿಗೆ ತಿಳಿಸಿದಾಗ ಬೆಟಗೇರಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ದಿನದ 24 ಗಂಟೆ ಸೇವೆ ಪ್ರಾರಂಭಿಸಿ ಅನುವು ಮಾಡಿದ ಜಿಲ್ಲಾಧಿಕಾರಿಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು. ಈ ಸಂದರ್ಭ ಖಾದರ ನರಗುಂದ, ರಫೀಕ್ ನರಗುಂದ, ಸಯ್ಯದ್ ಮಕಾನದಾರ್, ರಫೀಕ್ ಹಳೆಮಸೂತಿ, ಸಂತೋಷ ರೊಟ್ಟಿ ಮಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

