ಮಹಿಳೆಯರು ಸದೃಢರಾಗಿ: ಆಲೂರು
ಗದಗ: ಮಹಿಳೆ ತನ್ನ ದಿನನಿತ್ಯದ ಕೆಲಸಗಳ ಜತೆಗೆ ತನ್ನ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ಸತ್ವಯುತ ಆಹಾರ ಸೇವನೆ, ಹಿತವಾದ ವ್ಯಾಯಾಮ ಮೂಲಕ ಸದೃಢತೆ ಹೊಂದಬೇಕು ಎಂದು ಡಾ. ಪ್ರಾಜೆಕ್ತಾ ಆಲೂರು ಹೇಳಿದರು.
ಗದಗ-ಬೆಟಗೇರಿ ಇನ್ನರವ್ಹೀಲ್ ಕ್ಲಬ್ ವತಿಯಿಂದ ನಗರದ ರೋಟರಿ ಐಕೇರ್ ಸೆಂಟರ್ನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಸ್ತ್ರೀ ಹಾಗೂ ಆರೋಗ್ಯ ಕುರಿತು ಉಪನ್ಯಾಸ ಅವರು ನೀಡಿದರು.
ಬಾಯಿ ರುಚಿ ಹೆಚ್ಚಿಸುವ ಫಾಸ್ಟ್ ಫುಡ್ಗಳ ಪ್ರಭಾವದಿಂದಾಗಿ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಿದ್ದು ಇದನ್ನು ತಡೆಗಟ್ಟಲು ಮಹಿಳೆಯರು ವಿಶೇಷ ಕಾಳಜಿ ವಹಿಸಿ ಕುರುಕಲು ತಿಂಡಿಗಳಿಂದ ಮಕ್ಕಳನ್ನು ದೂರವಿರಿಸಲು ಪ್ರಯತ್ನಿಸಬೇಕು ಎಂದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಶರಣು ಆಲೂರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಇನ್ನರವ್ಹೀಲ್ ಕ್ಲಬ್ನ ಅಧ್ಯಕ್ಷೆ ಅನ್ನಪೂರ್ಣಾ ವರವಿ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮೂವರು ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಗುತ್ತಿದೆ. ಇದೇ ರೀತಿ ಎಲ್ಲ ಮಹಿಳೆಯರು ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು ಎಂದರು. ಗದಗ-ಬೆಟಗೇರಿ ರೋಟರಿ ಕ್ಲಬ್ಗೆ ರು. 1 ಲಕ್ಷಗಳನ್ನು ಉಚಿತ ನೇತ್ರ ಚಿಕಿತ್ಸೆಗೆ ದೇಣಿಗೆ ನೀಡಿದ ಇನ್ನರ್ವ್ಹೀಲ್ ಕ್ಲಬ್ನ ಮಾಜಿ ಅಧ್ಯಕ್ಷೆ ಆಶಾ ಹುಕ್ಕೇರಿ, ಗದಗ ಬೆಟಗೇರಿ ನಗರಸಭೆಗೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರುದ್ರವ್ವ ಕೆರಕಲಮಟ್ಟಿ ಹಾಗೂ ಮರ್ಚಂಟ್ ಬ್ಯಾಂಕ್ಗೆ ನಿರ್ದೇಶಕರಾಗಿ ಆಯ್ಕೆಯಾದ ಶಿವಲೀಲಾ ಕುರಡಗಿ ಅವರನ್ನು ಸನ್ಮಾನಿಸಲಾಯಿತು.
ಪದ್ಮಲತಾ ಮಾನ್ವಿ, ಪ್ರೇಮಾ ಗುಳಗೌಡ್ರ, ಕಸ್ತೂರಿ ಹಿರೇಗೌಡ್ರ, ರಜನಿ ಪಾಟೀಲ, ಪ್ರೇಮಾ ಮೇಟಿ, ಶಾಂತಾ ನಿಂಬಣ್ಣವರ, ಉಮಾ ಕವಳಿಕಾಯಿ, ಶಾಂತಾ ಗೌಡರ, ಆಶಾ ಪಟ್ಟಣಶೆಟ್ಟಿ, ಶ್ರೇಯಾ ಪವಾಡಶೆಟ್ಟರ್, ರಾಜೇಶ್ವರಿ ಬಳ್ಳಾರಿ, ನೀಲಾಂಬಿಕಾ ಉಗಲಾಟದ, ಲಲಿತಾ ಇಂಗಳಳ್ಳಿ, ಸಂಧ್ಯಾ ಕೋಟಿ, ಶೋಭಾ ಪೊಲೀಸ್ಪಾಟೀಲ, ಹೇಮಾ ಪೊಂಗಾಲಿಯಾ, ಸುಮಾ ಪಾಟೀಲ, ಶುಭಾ ಕುಂದಗೋಳ, ನಗರಸಭೆ ಸದಸ್ಯೆ ಖಮರ್ಸುಲ್ತಾನ್ ನಮಾಜಿ, ಮೇಘಾ ಮುದಗಲ್, ಶಿವಲೀಲಾ ಅಕ್ಕಿ, ಕಮಲಾ ಹಾದಿಮನಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

