ಗದಗ

ಪರೀಕ್ಷೆಯಲ್ಲಿ ನಕಲು ತಡೆಗೆ ಸಿಸಿ ಕ್ಯಾಮೆರಾ

Published On :

-ಶಿವಕುಮಾರ ಕುಷ್ಟಗಿ
ಗದಗ: ನಕಲು ತಡೆಗೆ ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ನಕಲು ನಡೆಯುತ್ತಿರುವ ಪ್ರಕರಣಗಳ ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಆದರೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೋಣ ತಾಲೂಕಿನ ನರೇಗಲ್ಲ ಪಟ್ಟಣದ ಅನ್ನದಾನೀಶ್ವರ ಪಪೂ ಕಾಲೇಜು ಪ್ರತಿ ಪರೀಕ್ಷಾ ಕೊಠಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿದೆ.
ಅನ್ನದಾನೀಶ್ವರ ಕಾಲೇಜು ಆವರಣದ ಪರೀಕ್ಷಾ ಕೇಂದ್ರದಲ್ಲಿ ಆತಿಥೇಯ, ಸರ್ಕಾರಿ ಪದವಿಪೂರ್ವ ಕಾಲೇಜು, ಕೆಎಸ್‌ಎಸ್ ಪದವಿಪೂರ್ವ ಕಾಲೇಜುಗಳ 865 ವಿದ್ಯಾರ್ಥಿಗಳು 16 ಬ್ಲಾಕ್‌ಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲೆಯ 23 ಕೇಂದ್ರಗಳಲ್ಲಿ ಇದೇ ಪ್ರಥಮ.
ಗದಗ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯುವುದಕ್ಕಾಗಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ 23 ಕೇಂದ್ರ ಆರಂಭಿಸಿದೆ. ಈ ಪೈಕಿ ನರೇಗಲ್ಲ ಅನ್ನದಾನೀಶ್ವರ ಮಹಾವಿದ್ಯಾಲಯ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿದೆ. ಜಿಲ್ಲೆಯಲ್ಲಿ ಹಲವಾರು ಖಾಸಗಿ ಕಾಲೇಜುಗಳಿದ್ದರೂ, ಅವು ನಕಲು ತಡೆದೆ ಸಿಸಿ ಕ್ಯಾಮೆರಾದಂಥ ನೂತನ ತಂತ್ರಜ್ಞಾನದ ಮೊರೆ ಹೋಗಿಲ್ಲ. ಇಂಥ ಕಠಿಣ ನಿರ್ಧಾರ ಕೈಗೊಂಡರೆ ಫಲಿತಾಂಶ ಎಲ್ಲಿ ಕೈಕೊಡುವುದೋ ಎಂಬ ಆತಂಕ ಇರುವುದೂ ಇದಕ್ಕೆ ಕಾರಣ ಎಂದು ಹಲವರು ಹೇಳುತ್ತಿದ್ದಾರೆ.
ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ, ನಮ್ಮ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹೆಚ್ಚಿನ ಗುಣಮಟ್ಟ ಹೊಂದಲಿ, ನಕಲು ಮಾಡದೆ ಪಾಸಾಗಿ, ಉತ್ತಮ ಜೀವನ ನಡೆಸಲಿ ಎಂಬ ಉದ್ದೇಶ ಅನ್ನದಾನೀಶ್ವರ ಶಿಕ್ಷಣ ಸಂಸ್ಥೆಯದ್ದು.
4 ವರ್ಷದಿಂದ...: ಈ ಮಾದರಿಯಲ್ಲಿ (ಸಿಸಿ ಕ್ಯಾಮೆರಾ) ಅನ್ನದಾನೀಶ್ವರ ಕಾಲೇಜಿನಲ್ಲಿ 4 ವರ್ಷಗಳಿಂದ ಪರೀಕ್ಷೆ ನಡೆಸುತ್ತಾ ಬಂದಿದ್ದಾರೆ. ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಆತಂಕವೇ ಇಲ್ಲ. ವರ್ಷಪೂರ್ತಿ ಓದಿದ್ದನ್ನು ಸರಾಗವಾಗಿ ಬರೆಯಲು ಅಧ್ಯಾಪಕ ವೃಂದ ಶ್ರಮಿಸಿದೆ. ಫಲಿತಾಂಶ ಸುಧಾರಿಸುತ್ತಲೇ ಸಾಗಿದೆ ಎಂಬುದು ಗಮನಾರ್ಹ ಅಂಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.