ಗದಗ

ಕಸ ವಿಲೇವಾರಿ ಮಾಡಿ: ಆಗ್ರಹ

Published On :

ಗಜೇಂದ್ರಗಡ: ಸ್ಥಳೀಯ ಪುರಸಭೆ ಆಡಳಿತದ ನಿರ್ಲಕ್ಷ್ಯದಿಂದ ಕಸ ವಿಲೇವಾರಿಯ ಕಂಟೇನರ್ ತುಂಬಿ ರಸ್ತೆಯಲ್ಲಿ ಚೆಲ್ಲಾಡಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿಯ ಜೊತೆಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೂಡಲೇ ಕಸ ವಿಲೇವಾರಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರತಿಷ್ಠಿತ ವಾಣಿಜ್ಯ ಕೇಂದ್ರ ಭಾಗವಾದ ಕಾಲಕಾಲೇಶ್ವರ ವೃತ್ತದ ಬಳಿ ಪುರಸಭೆ ವತಿಯಿಂದ ಕಸ ಸಂಗ್ರಹಣೆಗಾಗಿಟ್ಟ ಕಂಟೇನರ್ ತುಂಬಿ ತಿಂಗಳಾಗಿದೆ. ಇದು ಪುರಸಭೆ ಆಡಳಿತ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದರು.
ಮುಖ್ಯ ರಸ್ತೆಯ ಕಥೆಯೇ ಹೀಗಾದರೆ ಇನ್ನು ಪಟ್ಟಣದ 23 ವಾರ್ಡ್‌ಗಳ ಸ್ಥಿತಿ ಹೇಗಿರಬೇಕೆಂಬುದು ಊಹಿಸಲು ಅಸಾಧ್ಯ. ಪಟ್ಟಣದ ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ಇನ್ನಿತರ ಮೂಲ ಸಮಸ್ಯೆಗಳ ಸೂಕ್ತ ನಿರ್ವಹಣೆಗಾಗಿ ಪುರಸಭೆಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಪಟ್ಟಣದ ಅಭಿವೃದ್ಧಿ ಜೊತೆಗೆ ಸೂಕ್ತ ಆಡಳಿತ ನಿರ್ವಹಿಸಲು ಪುರಸಭೆ ಆಡಳಿತಕ್ಕೆ ನಿರ್ದೇಶನ ನೀಡಲು ಮುಂದಾಗದಿದ್ದಲ್ಲಿ ಸಾರ್ವಜನಿಕರು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಮಹೇಶ ಪಾಟೀಲ, ಅಂಬಾಸಾ ರಾಯಬಾಗಿ, ಪರಶುರಾಮ ಗುಗಲೋತ್ತರ, ರಮೇಶ ಕುಷ್ಟಗಿ, ಬಸವರಾಜ ಕಿಲ್ಲೇದಾರ, ಸುನೀಲ ನಾಯ್ಕ, ಶಿವರಾಜ ರೊಟ್ಟಿ, ಪ್ರಶಾಂತ ನೆಲ್ಲೂರ, ಶಂಬಯ್ಯ ಬೆಳವಣಕಿಮಠ, ಉಮೇಶ ಗದಗ, ರಾಮು ಸಂಗಳದ, ವೀರೇಶ ಪತ್ತಾರ, ಹರೀಶ ಇಂಜನಿ, ಸಿದ್ದು ವೀರಾಪುರ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.