ಗದಗ

ವೈದ್ಯ ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ: ಮೂರಶಿಳ್ಳಿನ

Published On :

ಗದಗ: ಭಾರತದ ಪ್ರಾಚೀನ ಇತಿಹಾಸದ ಚರಿತ್ರೆಯಲ್ಲಿ ವೈದ್ಯಶಾಸ್ತ್ರ ತನ್ನದೆಯಾದ ಮಹತ್ವವಾದ ಮತ್ತು ವಿಶಿಷ್ಟವಾದ ಸ್ಥಾನ ಪಡೆದುಕೊಂಡಿದೆ ಎಂದು ಮಲ್ಲಸಮುದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಕೆ.ಡಿ. ಮೂರಶಿಳ್ಳಿನ ಹೇಳಿದರು. ಸ್ಥಳೀಯ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ವೈದ್ಯ ಸಾಹಿತ್ಯ ಕುರಿತು ಮಾತನಾಡಿದರು. ಆಯುರ್ವೇದ ಶಾಸ್ತ್ರದಲ್ಲಿ ಮನಸ್ಸು ಮತ್ತು ದೇಹಕ್ಕೆ ಸಂಬಂಧಪಟ್ಟ ಅನೇಕ ಉಲ್ಲೇಖಗಳಿವೆ. ಶುಶ್ರೂತ್, ಚರಕ ಮುಂತಾದವರು ತಮ್ಮ ಆಯುರ್ವೇದ ಶಾಸ್ತ್ರದಲ್ಲಿ ಸ್ವಾಸ್ಥ್ಯ ಆರೋಗ್ಯಕ್ಕೆ ಹಲವಾರು ಉಪಯುಕ್ತ ಸಲಹೆ ನೀಡಿದ್ದಾರೆ. ಅವುಗಳನ್ನು ಪಾಲಿಸಿದರೆ ಸದೃಢ ಆರೋಗ್ಯ ಹೊಂದಲು ಸಾದ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ನರಗುಂದದ ಶಿಕ್ಷಕ ಶಂಕರ ಕಲ್ಲಿಗನೂರ ಅಳಲು ಎಂಬ ಸ್ವರಚಿತ ಕವನ ವಾಚಿಸಿ ಜನಮನ ಸೆಳೆದರು. ರೋಣ ತಾಲೂಕು ಅಧ್ಯಕ್ಷ ಡಾ. ಶಿವರಾಜ ಗುರಿಕಾರ, ಗೌರವ ಕೋಶಾಧ್ಯಕ್ಷ ಕೆ.ಎಸ್. ಕಳಕಣ್ಣವರ, ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಕೆ.ಎಚ್. ಬೇಲೂರ, ಎ.ಬಿ. ಹಿರೇಮಠ, ಸಿ.ಜಿ. ಹುಡೇದಗಡ್ಡಿ, ಶಕುಂತಲಾ ಸಿಂಧೂರ, ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ, ಸಿ.ಕೆ. ಕೇಸರಿ, ರೇಣುಕಾ ಬಣಕಾರ, ಜಯಶ್ರೀ ಅಂಗಡಿ, ರಾಜಶೇಖರ ಕರಡಿ, ಗುಲಾಬಸಿಂಗ್ ದಢೇಕರ, ಜಿ.ಎಸ್. ಯತ್ನಟ್ಟಿ, ಅ.ದ. ಕಟ್ಟಿಮನಿ, ಕನಕರಾಯ ಜಿಗಳೂರು, ರಾಜಶೇಖರ ಕಾಲವಾಡಮಠ, ಬಸವರಾಜ ವಾರಿ, ಶರಣಪ್ಪ ಬಾಲಣ್ಣವರ, ಮಲ್ಲಿಕಾರ್ಜುನ ಪೂಜಾರ, ಎಂ.ಪಿ. ರಮೇಶ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.