ಮತದಾನ ಜಾಗೃತಿ ಸೈಕಲ್ ಜಾಥಾ
ರೋಣ: ಏಪ್ರಿಲ್ 17ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಮತದಾರ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಅದು ಪ್ರತಿಯೊಬ್ಬ ಪ್ರಜೆಯ ಮುಖ್ಯ ಕರ್ತವ್ಯವಾಗಿದೆ ಎಂದು ಶನಿವಾರ ಪಟ್ಟಣದಲ್ಲಿ ಶಾಲಾ ಮಕ್ಕಳು ಸೈಕಲ್ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಹಮ್ಮಿಕೊಂಡು ಮತದಾನ ಜಾಗೃತಿ ಮೂಡಿಸಿದರು.
ಪಟ್ಟಣದ ವಿ.ಎಫ್. ಪಾಟೀಲ ಪ್ರೌಢಶಾಲೆಯಿಂದ ಡಿಡಿಪಿಐ ರಾಜೇಂದ್ರ ಪ್ರಸಾದ್ ಅವರು ಮಕ್ಕಳ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಪಟ್ಟಣದ ಪೋತದಾರ ರಾಜನಕಟ್ಟೆ, ಮುಲ್ಲಾನಬಾವಿ ವೃತ್ತ, ಸೂಡಿ ವೃತ್ತ, ಸಿದ್ದಾರೂಢಮಠ, ಬಸ್ ನಿಲ್ದಾಣ ಸೇರಿದಂತೆ ಮುಂತಾದೆಡೆ ಸೈಕಲ್ ಮೂಲಕ ಸಂಚರಿಸಿ ವಿವಿಧ ಘೋಷಣೆಗಳ ಮೂಲಕ ಜನರಲ್ಲಿ ಮತದಾನ ಜಾಗೃತಿ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಬಿಇಒ ಡಿ.ಐ. ಅಸುಂಡಿ, ಸಿಡಿಪಿಒ ಬಿ.ಎಸ್. ಮೋಕಾಸಿ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಯಡಳ್ಳಿ, ಮುಖ್ಯೋಪಾಧ್ಯಾಯ ಎ.ಬಿ. ಹೊನ್ನವಾಡ, ಎಚ್.ಆರ್. ಓಲಿಕಾರಿ, ಅತ್ತಿಗೇರಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಪಿ.ಬಿ. ಪಾಟೀಲ, ಎಸ್.ಐ. ದಿಂಡೂರ ಇದ್ದರು.
ಚಿಕ್ಕಹಂದಿಗೋಳದಲ್ಲಿ ಮತದಾನ ಜಾಗೃತಿ
ಗದಗ: ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದಲ್ಲಿ ಸ್ಥಳೀಯ ಗ್ರಾಪಂ ಹಾಗೂ ವೆಂಕಟೇಶ್ವರ ಪ್ರೌಢಶಾಲೆಯ ಆಶ್ರಯದಲ್ಲಿ ಜಾಥಾ ಮೂಲಕ ಗ್ರಾಮದ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ಜಾಥಾ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ನಮ್ಮ ಹಕ್ಕು ಹಾಗೂ ವಿವಿಧ ಜಯ ಘೋಷಣೆ ಕೂಗುತ್ತಾ ಮತದಾರರಿಗೆ ಮತದಾನದ ಹಕ್ಕುನ್ನು ಚಲಾಯಿಸುವ ಕುರಿತು ತಿಳಿವಳಿಕೆ ಹಾಗೂ ಮತದಾನದ ಮಹತ್ವ ಅರಿಯಬೇಕೆಂದು ತಿಳಿಸಲಾಯಿತು. ಚುನಾವಣೆಯಲ್ಲಿ ಧರ್ಮ, ಜಾತಿ, ಜನಾಂಗ, ಇತರ ಪ್ರೇರಣೆಗಳಿಗೆ ಒಳಗಾಗದೇ ಮತ ಚಲಾಯಿಸಬೇಕು ಎಂದು ಮನೆ ಮನೆಗಳಿಗೆ ತೆರಳಿ ತಿಳಿಸಲಾಯಿತು. ಗ್ರಾಪಂ ಪಿಡಿಒ ವೀರಣ್ಣ ಕಲ್ಮನಿ, ಶಾಲಾ ಮುಖ್ಯೋಪಾಧ್ಯಾಯ ಆರ್.ವಿ. ಗೊಂಡಬಾಳ ಸೇರಿದಂತೆ ಗ್ರಾಪಂ ಸಿಬ್ಬಂದಿ, ಶಾಲೆ ಸಿಬ್ಬಂದಿ, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

