ಗದಗ

ಶಾಸ್ತ್ರೀಯ ಸಂಗೀತಕ್ಕೆ ಉತ್ತೇಜನ ನೀಡಲಿ: ಜಗದೀಶ ಕನಕೇರಿ

Published On :

ಗಜೇಂದ್ರಗಡ: ಗ್ರಾಮೀಣ ಪ್ರದೇಶದಲ್ಲಿ ನಾಟಕ, ಜಾನಪದ, ಕಲೆಗಳಿಗೆ ಸಿಗುತ್ತಿರುವ ಪ್ರೋತ್ಸಾಹದಂತೆ ಶಾಸ್ತ್ರೀಯ ಸಂಗೀತಕ್ಕೂ ಉತ್ತೇಜನ ನೀಡಬೇಕಾಗಿದೆ ಎಂದು ಔಷಧ ವರ್ತಕರ ಸಂಘದ ಜಗದೀಶ ಕನಕೇರಿ ಹೇಳಿದರು.
ಸ್ಥಳೀಯ ಕೆಳಗಲ ಪೇಟೆಯ ಆಂಜನೇಯ ದೇಗುಲ ಆವರಣದಲ್ಲಿ ಶಾರಂಗದೇವ ಸಂಗೀತ ಪಾಠಶಾಲೆ ವತಿಯಿಂದ ಈಚೆಗೆ ಜರುಗಿದ ಗುರುವಂದನಾ ಮತ್ತು ಸಂಗೀತ ಸಂಜೆ, ಮನೆ, ಮನಗಳಿಗೆ ಸಂಗೀತ ಸುಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಾದ್ಯಂತ ಅನೇಕ ಜನರ ಮನ ಗೆಲ್ಲುವಲ್ಲಿ ಪ್ರಮುಖ ಮಾತ್ರ ವಹಿಸಿರುವ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮನಸ್ಸನ್ನು ಅರಳಿಸುತ್ತದೆ. ಎಲ್ಲ ಭಾಷೆಗಳ ಮಾತೃ ಸ್ಥಾನ ಹೊಂದಿರುವ ಸಂಗೀತ ವಿಶ್ವರೂಪಿಯಾದರೂ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ವಿಶಿಷ್ಟ ಸ್ಥಾನಮಾನ ಪಡೆದಿದೆ. ಬದಲಾಗುತ್ತಿರುವ ಕಾಲಮಾನದಲ್ಲಿ ಸಂಗೀತ ಮನುಷ್ಯನ ಪ್ರಜ್ಞೆಯನ್ನು ವಿಕಾಸಗೊಳಿಸುವ ಕಲೆಗಳಲ್ಲಿ ಒಂದಾಗಿರುವುದು ಮಾತ್ರವಲ್ಲ, ಅದು ಸೃಜನಶೀಲತೆಯ ಅಭಿವ್ಯಕ್ತಿಯಾಗಿರುವ ಮಾಧ್ಯಮವೂ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಬದುಕಿನ ಅಲ್ಪ ಸಮಯವನ್ನಾದರೂ ಸಂಗೀತದ ಆಲನೆಗೆ ಒತ್ತು ನೀಡುವ ಅವಶ್ಯಕತೆ ಇದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಬಾಬು ನಾವಡೆ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಪ್ರಾಚಾರ್ಯ ಕಳಕಪ್ಪ ಕವಡಿಮಟ್ಟಿ, ನೇಮಾಸಾ ಬಾಕಳೆ, ಶೇಖರಪ್ಪ ಕವಡಿಮಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಿದ್ಧು ಗೌಡರ, ಭೀಷ್ಮಾಸಾ ಬಾಕಳೆ, ಕೃಷ್ಣಾ ಕುಲಕರ್ಣಿ, ಬಿ.ಕೆ. ಮಾದಿ, ಬಸನಗೌಡ ಪಾಟೀಲ, ಮಂಜುನಾಥ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.