ಸಲೀಂ ಅಹ್ಮದ್ ಗೆಲವು ಖಚಿತ
ಮುಂಡರಗಿ: ಯುವಕರು ಸಲೀಂ ಅಹ್ಮದ್ರನ್ನು ಬೆಂಬಲಿಸುವುದರಿಂದ ಹಾವೇರಿ ಕ್ಷೇತ್ರ ನಾವೆಂದೂ ಊಹಿಸಿಕೊಳ್ಳದಷ್ಟು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಮಂಗಳವಾರದಂದು ಸ್ಥಳೀಯ ಕೋಟೆ ಭಾಗದಿಂದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಲೀಂಅಹ್ಮದ್ ಪರವಾಗಿ ಮತಯಾಚನೆಗೆ ಚಾಲನೆ ನೀಡಿ ಮಾತನಾಡಿದರು. ಶಿವಕುಮಾರ ಉದಾಸಿಯವರು ತಮ್ಮ ಐದು ವರ್ಷದ ಆಡಳಿತದಲ್ಲಿ ಜನಪರ ಕಾರ್ಯ ಮಾಡಲಾಗಲಿಲ್ಲ. ಸರ್ಕಾರದ ಜಾಗೆಯಲ್ಲಿ ಸಾರ್ವಜನಿಕರಿಗೆ ಬಹು ಪ್ರಾಮುಖ್ಯವಾದ ಅಂಚೆ ಕಚೇರಿಯ ನಿರ್ಮಾಣ ಮಾಡಲಾಗಲಿಲ್ಲ. ಮುಂಡರಗಿ ಮಾರ್ಗವಾಗಿ ಹರಿಹರಕ್ಕೆ ರೈಲು ಸಂಚಾರದ ಸೌಕರ್ಯಮಾಡಿಕೊಡದಂತ ಬೇಜವಾಬ್ದಾರಿಯುತ ಆಡಳಿತ ಉದಾಸಿಯವರು ಮಾಡಿದ್ದಾರೆ. ಹಾಗಾಗಿ, ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಮೆಚ್ಚಿದ ಜನರು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ರವರನ್ನು ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಚುನಾಯಿಸುತ್ತಾರೆ ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ ಮಾತನಾಡಿದರು. ಕೊಟ್ರೇಶ ಅಂಗಡಿ, ಬಿ.ಎಸ್. ಮೇಟಿ, ಎಸ್.ಡಿ. ಮಕಾಂದರ, ನಬೀಸಾಬ ಕೆಲೂರ, ಅಬ್ದುಲ್ ಹಣಗಿ, ಡಿ.ಎಲ್. ಕಲ್ಲಕುಟ್ಟಗರ, ನೂರಜಾನ ತಳಗಡೆ, ರೇಣುಕಾ ಹಂದ್ರಾಳ, ಮೋದಿನಸಾಬ್ ಡಂಬಳ, ಪಾಲಾಕ್ಷಿ ಗಣದಿನ್ನಿ, ಎ.ಪಿ. ದಂಡಿನ, ಶರಣಪ್ಪ ಕುಬಸದ, ದೃವಕುಮಾರ ಹೊಸಮನಿ, ಬಸವರಾಜ ರಾಮೇನಹಳ್ಳಿ, ವೀರೇಶ ಸಜ್ಜನ, ಶೇಖರಾಜ ಜುಟ್ಲಣ್ನವರ, ಶೇಖರಾಜ ಹೊಸಮನಿ, ರಾಮು ಭಜಂತ್ರಿ, ರಾಘವೇಂದ್ರ ಕುರಿಯವರ, ಮುದಿಯಪ್ಪ ಕುಂಬಾರ, ವಿಜಯ ಶಿಳ್ಳಿನ, ರವೀಂದ್ರ ಉಪ್ಪಿನಬೇಟಗೇರಿ, ಶಿವನಗೌಡ್ರ ಗೌಡ್ರ, ಬಸವರಾಜ ಹೂಗಾರ, ಅಶೋಕ ಹುಬ್ಬಳ್ಳಿ, ಶೀರಿ, ವಿಶ್ವ ಕುಂಬಾರ, ರಾಜಾಬಕ್ಷಿ ಬೆಟಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

