ಕಾಂಗ್ರೆಸ್ ದುರಾಡಳಿತದಿಂದ ಜನ ತತ್ತರ
ಹಾನಗಲ್ಲ: ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೊಂಡು ಜನತೆ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಹಾವೇರಿ ಕ್ಷೇತ್ರದ ಲೋಕಸಭೆ ಚುನಾವಣಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ತಾಲೂಕಿನ ಕಂಚಿನೆಗಳೂರ ಗ್ರಾಮದಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ಉತ್ತಮ ಆರ್ಥಿಕ ತಜ್ಞರೆಂದು ಹೆಸರು ಪಡೆದಿದ್ದ ಪ್ರಧಾನಿ ಡಾ. ಮನಮೋಹನಸಿಂಗ್ ಅವರು ಇಡೀ ಭಾರತದ ಆರ್ಥಿಕ ಸ್ಥಿತಿಯನ್ನು ಕೆಳಮಟ್ಟಕ್ಕೆ ತಳ್ಳಿರುವುದು ಈ ದೇಶದ ದುರಂತವಾಗಿದೆ. ಸಾಮಾಜಿಕ ಬದ್ಧತೆ, ದೃಢ ನಿರ್ಧಾರ, ದೇಶದ ಭದ್ರತೆ, ಉದ್ಯೋಗ ಸೃಷ್ಟಿ, ರಾಜಕೀಯ ಇಚ್ಛಾಶಕ್ತಿ ಕೊರತೆ ಸೇರಿದಂತೆ ನೂರೆಂಟು ರಂಗಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲಗೊಂಡಿದೆ ಎಂದ ಅವರು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ದೇಶಕ್ಕೆ ಸಮಗ್ರ ಸಮೃದ್ಧಿ ಒದಗಿಸಬಲ್ಲದು ಎಂದರು. ಜಿಪಂ ಸದಸ್ಯ ಬಸವರಾಜ ಹಾದಿಮನಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಸಂಸದರಾಗಿ ಕಾರ್ಯನಿರ್ವಹಿಸಿದ ಶಿವಕುಮಾರ ಉದಾಸಿ ಒಬ್ಬ ಒಳ್ಳೆಯ ಸಂಸದೀಯ ಪಟುವಾಗಿ ಹೊರಹೊಮ್ಮಿದ್ದಾರೆ. ಜನಸೇವಕ ಎಂಬುವವರು ಹೇಗೆ ಇರಬೇಕು ಎಂಬುದಕ್ಕೆ ಶಿವಕುಮಾರ ಒಂದು ಒಳ್ಳೆಯ ಉದಾಹರಣೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಈರಣ್ಣ ನಿಂಬಣ್ಣನವರ, ಮಾಜಿ ತಾಪಂ ಉಪಾಧ್ಯಕ್ಷ ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ಭೊಜಪ್ಪ ಲಂಗಟಿ, ಎನ್. ಬಿ. ಪೂಜಾರ, ಭರಮಣ್ಣ ಶಿವೂರ, ಶಿವಪುತ್ರಪ್ಪ ಮಾಳಗಿ, ಶಿವಪುತ್ರಪ್ಪ ಕರ್ಜಗಿ, ಡಾ. ಕೃಷ್ಣರಾವ ಕುಲಕರ್ಣಿ, ಹಾಲಪ್ಪ ಮಾಳಗಿ, ಗೋಪಾಲ ಗಿರೆಣ್ಣನವರ, ಎಂ.ಎಫ್. ಕಠಾರಿ, ಸುರೇಶ ಅರಳೇಶ್ವರ, ಮಲ್ಲಪ್ಪ ಗಿರಿಯಣ್ಣನವರ, ಸಿದ್ಧಪ್ಪ ಕನವಳ್ಳಿ, ಎಂ.ಬಿ. ಕತ್ತಿ, ಪಿ.ಬಿ. ಕಲ್ಲೇಗೌಡರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

