ಗದಗ

ಪತಿ ಪರ ಪ್ರಚಾರಕ್ಕಿಳಿದ ರೇವತಿ ಉದಾಸಿ

Published On :

ಹಾವೇರಿ: ಚುನಾವಣಾ ಪ್ರಚಾರದ ಅಬ್ಬರ ದಿನದಿಂದ ದಿನಕ್ಕೆ ಏರುತ್ತಿದೆ. ಅಭ್ಯರ್ಥಿಗಳ ಪರವಾಗಿ ಮುಖಂಡರು, ಕಾರ್ಯಕರ್ತರು ಪ್ರಚಾರ ಶುರು ಮಾಡಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಅವರ ಪತ್ನಿ ರೇವತಿ ಉದಾಸಿ  ಶುಕ್ರವಾರ ನಗರದಲ್ಲಿ ಪ್ರಚಾರ ಮಾಡಿದರು.
ಬಿಜೆಪಿ ಶಹರ ಘಟಕದಿಂದ ಮನೆಮನೆಗೆ ಪ್ರಚಾರದಲ್ಲಿ ಪಾಲ್ಗೊಂಡ ರೇವತಿ, ಶಿವಕಾರ ಉದಾಸಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು. ನಗರದ 15, 23, 24, 25, 26ನೇ ವಾರ್ಡ್‌ಗಳ ವ್ಯಾಪ್ತಿಯ ಸುಭಾಸ್ ವೃತ್ತ, ಗದಿಗೇರ ಓಣಿ,  ಕಂದಕ ರಸ್ತೆ, ಚೌಡಮ್ಮ ವೃತ್ತ, ನಡುವಿನ ಮಠ ದಡ್ಡಿ, ಯಾಲಕ್ಕಿ ಓಣಿ, ಪುರದ ಹರಿಜನಕೇರಿ, ಉಪ್ಪಾರ ಓಣಿ, ಪುರದ ಓಣಿ ಮುಂತಾದ ಕಡೆ ಪ್ರಚಾರ ಕೈಗೊಂಡರು. ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ರಾಜ್ಯ ಕಾರ್ಯದರ್ಶಿ ಭಾರತಿ ಜಂಬಗಿ, ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ತಾಲೂಕು ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ನಗರಸಭಾ ಸದಸ್ಯರಾದ ಸುರೇಶ ದೊಡ್ಡಮನಿ, ಹನುಮಂತ ನಾಯಕ ಬದಾಮಿ, ಶಿವಬಸಪ್ಪ ವನ್ನಳ್ಳಿ, ನಜಗುನ್ನಿಸಾ ನದಾಫ್, ಯಲ್ಲವ್ವ ಬೆಂಗಳೂರು, ನಿರಂಜನ ಹೇರೂರ, ಕರಬಸಪ್ಪ ಹಳದೂರ, ಹನುಮಂತಪ್ಪ ದೇವಗಿರಿ, ಸತೀಶ ಹಾವೇರಿ, ಪರಶುರಾಮ ಮೈಲಾರಪ್ಪನವರ, ಇರ್ಫಾನ್ ಪಠಾಣ, ಹನುಮಂತಪ್ಪ ಪೂಜಾರ, ಉಮಾಪತಿ ಹೂಲಿಕಟ್ಟಿ, ಚಂದ್ರು ಏರೇಶೀಮಿ, ಗಂಗವ್ವ ಎರೇಶೀಮಿ, ದಾನಪ್ಪ ಜುಗಾಂವ, ಮಹಿಳಾ ಶಹರ ಮೋರ್ಚಾ ಅಧ್ಯಕ್ಷೆ ಜ್ಯೋತಿ ಸಾತೇನಹಳ್ಳಿ, ಶಿವಲಿಂಗಪ್ಪ ಕಲ್ಯಾಣಿ, ಸವಿತಾ ಉದಾಸಿ, ಭಾರತಿ ನೆಜ್ಜೂರ, ಮಂಜು ಇಟಗಿ, ಸೋಮಶೇಕರ ತಿಪ್ಪಶೆಟ್ಟಿ, ಚಂದ್ರಣ್ಣ ಕ್ಯಾತಣ್ಣನವರ, ಶಿವರಾಜ ಹೇರೂರ, ಗಿರೀಶ ತುಪ್ಪದ, ರೇಖಾ ಅಂಗಡಿ, ನೀಲಮ್ಮ ಅಂಜಗಿ, ಮಂಜುನಾಥ ಪುತಳೆಕರ, ವಿಜಯಕುಮಾರ ಚಿನ್ನಿಕಟ್ಟಿ, ಇಕಲಾಕ್ ಮೊರಟಿ, ವಿರಣ್ಣ ಹೇರೂರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮೂಳ್ಳೂರು, ಪ್ರಶಾಂತ ಅಸುಂಡಿ, ವೆಂಕಟೇಶ ದೈವಜ್ಞ, ಮಧು ನವಲೆ, ಪ್ರವೀಣ ಶೆಟ್ಟರ, ಶೇಖಪ್ಪ ಹತ್ತಿ, ಫಕ್ಕಿರೇಶ ಹುರಳಿಕುಪ್ಪಿ, ತಮ್ಮಣ್ಣ ಕಟ್ಟಿ, ಶ್ರೀಪಾದ ಬೇಟಗೆರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.