ರಕ್ತದಾನದಿಂದ ಕೊಬ್ಬಿನಾಂಶ ಕಡಿಮೆ
ಮುಂಡರಗಿ: ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ದೇಹದಲ್ಲಿ ಹೊಸ ರಕ್ತದ ಚಲನೆಯಿಂದ ಕಾರ್ಯತತ್ಪರತೆ ಮತ್ತು ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ ಎಂದು ವೈದ್ಯ ಡಾ. ಅನ್ನದಾನಿ ಮೇಟಿ ಹೇಳಿದರು. ಶನಿವಾರ ಪಟ್ಟಣದ ಜ. ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಗದಗ, ಮುಂಡರಗಿ ಸರ್ಕಾರಿ ತಾಲೂಕು ಆಸ್ಪತ್ರೆ, ಔಷಧಿ ವ್ಯಾಪಾರಸ್ಥರ ಸಂಘ, ಬಸವ ಜಾಗೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಕನ್ನಡ ಕ್ರಾಂತಿ ಸೇನೆ, ಕನ್ನಡ ಜನಾಭಿವೃದ್ಧಿ ವೇದಿಕೆ, ವಿವೇಕ ಜಾಗೃತ ಬಳಗ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ತಾಲೂಕು ಆಸ್ವತ್ರೆ ವೈದ್ಯಾಧಿಕಾರಿ ಡಾ.ಪಿ.ಬಿ. ಹಿರೇಗೌಡರ, ಪ್ರಾ. ಎಸ್.ಜಿ. ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಚಾಲಕರಾಗಿ ಸರ್ಕಾರಿ ಆಸ್ಪತ್ರೆ ಆಪ್ತ ಸಮಾಲೋಚಕ ಮಂಜುನಾಥ, ಜಿಲ್ಲಾ ಸಂಯೋಜಕ ಬಿ.ಬಿ. ಲಾಲಗಟ್ಟಿ, ಕನ್ನಡ ಕ್ರಾಂತಿ ಸೇನೆ ಮಂಜುನಾಥ ಇಟಗಿ, ಮಂಜುನಾಥ ಮುಧೋಳ, ಕಾಲೇಜಿನ ಅಧ್ಯಾಪಕರಾದ ವಿ.ಬಿ. ತಂಗೋಡ, ಎ.ವೈ. ನವಲಗುಂದ, ಸೌಮ್ಯ, ಬನ್ನಿಕೊಪ್ಪ, ಅಂದಾನಗೌಡರ, ಡಾ.ಆರ್.ಎಚ್. ಜಂಗನವಾರಿ, ಮಾಯಮ್ಮನವರ, ಮಂಜುನಾಥ ಕಟ್ಟಿಮನಿ ಇದ್ದರು. ರಕ್ತದಾನದ ಜವಾಬ್ದಾರಿಯನ್ನು ಗದುಗಿನ ವೈದ್ಯ ಡಾ. ಪವಾಡಶೆಟ್ಟರು ತಂಡದೊಂದಿಗೆ ನೇರವೇರಿಸಿದರು. ಡಾ. ರಿಯಾಜ್ ಪಾಷ ಸ್ವಾಗತಿಸಿದರು. ಎಂ.ಬಿ. ಬದನಿಕಾಯಿ ನಿರೂಪಿಸಿದರು. ಮಲ್ಲವ್ವ ಜಲರಡ್ಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

