ಗದಗ

ಭಕ್ತಿಯಿಂದಲೇ ಗುರು ಒಲಿಸಿಕೊಳ್ಳಿ

Published On :

ನರೇಗಲ್ಲ: ಢಾಂಬಿಕ ಭಕ್ತರ ನಡುವೆ ಭಕ್ತಿಯಿಂದಲೇ ಗುರುವನ್ನು ಒಲಿಸಿಕೊಳ್ಳುವವರು ಇನ್ನೂ ಇದ್ದಾರೆ ಎನ್ನುವುದಕ್ಕೆ ವೀರೇಶ ಅರಮನಿ ಮನೆತನದವರು ಹಾಗೂ ನಿಡಗುಂದಿಯ ಭಕ್ತರು ಸಾಕ್ಷಿ ಎಂದು ಶಿವಬಸವ ಶ್ರೀಗಳು ಹೇಳಿದರು.
ಅವರು ಈಚೆಗೆ ಸಮೀಪದ ನಿಡಗುಂದಿ ಗ್ರಾಮದಲ್ಲಿ ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳ 9ನೇ ತುಲಾಭಾರ ಕಾರ್ಯಕ್ರಮದಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದರು. ಹರ ಮುನಿದರೂ ಗುರು ಕಾಯುವನು ಎಂಬ ನಾಣ್ಣುಡಿಯಂತೆ ಬಸವಾದಿ ಪ್ರಥಮರ ಕಾಯಕ ನಿಷ್ಠೆಯನ್ನು ನಮ್ಮಲ್ಲಿ ಅಳವಡಿಸಿಕೊಂಡು ಕಾಯಾ, ವಾಚಾ, ಮನಸಾ ಸಮಾಜ ಸೇವೆ ಮಾಡುವವನೇ ಭಕ್ತ. ಆದ್ದರಿಂದ ಭಕ್ತಿಯ ಪರಾಕಷ್ಠೆ ಮೀರಿರುವ ಇಲ್ಲಿ ಮಳೆ, ಬೆಳೆಗಳು ಚೆನ್ನಾಗಿ ಆಗಲಿವೆ. ಇಲ್ಲಿಯ ಜನತೆ ಸುಖದಿಂದ ಬಾಳಲಿ ಎಂದರು.
ನೇತೃತ್ವ ವಹಿಸಿದ್ದ ಮಹಾರಾಷ್ಟ್ರ ಆಡಿಯ ಸಿದ್ಧೇಶ್ವರ ಶ್ರೀಗಳು ಆಶಿರ್ವಚನ ನೀಡಿದರು. ಮುತ್ತಪ್ಪ ಅರಮನಿ, ವೀರಪ್ಪ ಇಟಗಿ, ದೇವೇಂದ್ರಪ್ಪ ಗುತ್ತೆಪ್ಪನವರ, ವೀರಪ್ಪ ಅಣಗೌಡ್ರ, ಶರಣಪ್ಪ ಅಣಗೌಡ್ರ, ಶರಣಪ್ಪ ಅರಮನಿ, ವೀರಪ್ಪ ಉಳ್ಳಾಗಡ್ಡಿ ಮುಂತಾದವರು ಉಪಸ್ಥಿತರಿದ್ದರು. ಎಸ್.ಎ. ಆರಮನಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.