ಸಂಸ್ಥೆಗಳ ಪ್ರಗತಿಗೆ ಸಹಕಾರ ನೀಡಿ
ಕನ್ನಡಪ್ರಭ ವಾರ್ತೆ, ಗದಗ, ಮೇ 1
ಸಂಘ-ಸಂಸ್ಥೆಗಳು ಪ್ರಗತಿಗೆ ಸರ್ವರ ಸಹಕಾರ, ಮಾರ್ಗದರ್ಶನ ಅವಶ್ಯವಿದೆ. ಸಹಕಾರ ತತ್ವದಡಿ ಕಾರ್ಯನಿರ್ವಹಿಸುವ ಸಂಸ್ಥೆ ಪ್ರಗತಿ ಮತ್ತು ಸಾಧನೆ ಮಾಡಲು ಸಾಧ್ಯ ಎಂದು ಲಕ್ಷ್ಮೇಶ್ವರದ ಸೋಮೇಶ್ವರ ಸಹಕಾರಿ ನೂಲಿನ ಗಿರಣಿಗೆ ನೂತನ ಅಧ್ಯಕ್ಷ ಪುಲಿಕೇಶಿ ಉಪನಾಳ ಹೇಳಿದರು.
ಅವರು ಮಂಗಳವಾರ ನಗರದ ಒಕ್ಕಲಗೇರಿಯ ಅಖಿಲ ಕರ್ನಾಟಕ ಕುಡುವಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು. ಯಾವುದೇ ಒಂದು ಸಹಕಾರಿ ಸಂಘ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಆಡಳಿತ ಮಂಡಳಿ, ನಿರ್ದೇಶಕ ಮಂಡಳಿ, ಶೇರುದಾರರು ಮತ್ತು ಸದಸ್ಯರ ಸಹಕಾರ ಮತ್ತು ಮಾರ್ಗದರ್ಶನ ಅವಶ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ಗದಗ ವಿಭಾಗದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಶೆಟ್ಟಿಕೇರಿ ಅವರು ಪದೋನ್ನತಿ ಹೊಂದಿದ ನಿಮಿತ್ತ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಕುಡುವಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಕುಡುವಕ್ಕಲಿಗ ಸಮಾಜವು ಹಿಂದುಳಿದಿದ್ದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಮಾಜ ಬಾಂಧವರು, ಗುರುಹಿರಿಯರು ಚಿಂತನೆ ನಡೆಸಬೇಕಿದೆ. ಜತೆಗೆ ಸಮಾಜದ ಯುವಕರಿಗೆ ಒಳ್ಳೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ. ಇದೆಲ್ಲವೂ ಸಮಾಜ ಸಂಘಟನೆಯಿಂದ ಸಾಧ್ಯ ಎಂದರು.
ಸಂಘದ ರಾಜ್ಯ ಕಾರ್ಯದರ್ಶಿ ಪರಮೇಶ್ವರಪ್ಪ ಜಂತ್ಲಿ, ರಾಜ್ಯ ಖಜಾಂಚಿ ಐ.ಎಂ. ಹೊನಗಣ್ಣವರ, ಜಿಲ್ಲಾಧ್ಯಕ್ಷ ಎಸ್.ಬಿ. ಗೊಜನೂರ, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಟಿ. ಪಾಟೀಲ, ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ತಿಪ್ಪಣ್ಣವರ, ತಾಲೂಕು ಅಧ್ಯಕ್ಷ ಚನ್ನಬಸಪ್ಪ ಹೊನ್ನಪ್ಪನವರ, ಬಸವರಾಜ ಬಿನ್ನಾಳ, ಕೆಂಚಪ್ಪ ನಾಡಗೌಡ್ರ, ಬಸವರಾಜ ಜಂತ್ಲಿ, ಮುತ್ತು ಹೊನಗಣ್ಣವರ, ಮಂಜು ಸಂಗನಾಳ, ಬಸವರಾಜ ಮೊರಬದ, ಮಂಜು ಶೆಲ್ಲಿಕೇರಿ, ಎಂ.ಬಿ. ನಾಡಗೌಡ್ರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

