ಗದಗ

ಗಾಡಾ ಸ್ಪರ್ಧೆ: ಶರಣಪ್ಪಗೆ ಬಹುಮಾನ

Published On :

ಗದಗ: ಗಂಜೀ ಬಸವೇಶ್ವರ ಜಾತ್ರಾ ಸಮಿತಿ ಹಾಗೂ ಗದಗ ಒಕ್ಕಲಗೇರಿ ಓಣಿಯ ರೈತ ಮುಖಂಡರು ಬುಧವಾರ ಗದುಗಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಖಾಲಿ ಗಾಡಾ (ಚಕ್ಕಡಿ) ಓಡಿಸುವ ಸ್ಪರ್ಧೆಯಲ್ಲಿ ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಶರಣಪ್ಪ ಕರಡಿ ಅವರ ಗಾಡಾ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅವರಿಗೆ ಎಲ್.ಎಸ್. ಶಿಗ್ಲಿಮಠ ಪ್ರಾಯೋಜಿಸಿದ 10 ಗ್ರಾಂ ಬಂಗಾರವನ್ನು ನೀಡಲಾಯಿತು. ದ್ವಿತೀಯ ಬಹುಮಾನವನ್ನು ಗದಗ ತಾಲೂಕಿನ ಹೊಂಬಳದ ಶಿವಪ್ಪ ಯಾತಗೇರಿ ಪಡೆದುಕೊಂಡಿದ್ದಾರೆ. ಅವರಿಗೆ ಪಿ.ಸಿ. ಶಾಬಾದಿಮಠ ಹಾಗೂ ಪರ್ವತಪ್ಪ ಕಮತರ ಜಂಟಿಯಾಗಿ ಪ್ರಾಯೋಜಿಸಿದ 5 ಗ್ರಾಂ ಚಿನ್ನವನ್ನು ಬಹುಮಾನವಾಗಿ ನೀಡಲಾಯಿತು. ತೃತೀಯ ಬಹುಮಾನವನ್ನು ರೋಣ ಪಟ್ಟಣದ ತಿಪ್ಪಣ್ಣ ಜಿಗಳೂರ ಪಡೆದುಕೊಂಡಿದ್ದು ಅವರಿಗೆ ವಿ.ಎಸ್. ಮಾನ್ವಿ, ಎಸ್.ವಿ. ಹಲವಾಗಲಿ ಪ್ರಾಯೋಜಿಸಿದ 2.5 ಗ್ರಾಂ ಚಿನ್ನ ಬಹುಮಾನವಾಗಿ ನೀಡಲಾಯಿತು.
4ನೇ ಬಹುಮಾನ ಪಡೆದ ರೋಣದ ಹನುಮಂತಪ್ಪ ಗೌಡರಗೆ ಶಿವಪ್ಪ ಗಾಳಪ್ಪನವರ (ಉಳ್ಳಿಗೌಡ್ರ) ಹಮ್ಮಿಗಿ ಪ್ರಾಯೋಜಿಸಿದ ಬೆಳ್ಳಿ ಕೊಡನ್ಸ್‌ಗಳನ್ನು ನೀಡಲಾಯಿತು. 5ನೇ ಬಹುಮಾನವನ್ನು ರೋಣ ತಾಲೂಕಿನ ನರೇಗಲ್ ಪಟ್ಟಣದ ಶಿವಪ್ಪ ರೋಣದ ಪಡೆದುಕೊಂಡಿದ್ದು, ಅವರಿಗೆ ಹನುಮಂತಪ್ಪ ಮುಂಡರಗಿ, ಪ್ರವೀಣ ವಾರಕರ, ವೀಣಾ ಟ್ರೇಡಿಂಗ್ ಕಂಪನಿ ಹಾಗೂ ಎಂ.ಎಸ್. ಶಾಬಾದಿಮಠ ಪ್ರಾಯೋಜಿಸಿದ ಬೆಳ್ಳಿ ಕಡಗ ನೀಡಲಾಯಿತು. ಮನೋಜಸಿಂಗ್ ರಜಪೂತ, ಬಸಪ್ಪ ಕಲಬಂಡಿ, ವಿರೂಪಾಕ್ಷಗೌಡ್ರ ದೇಸಾಯಿಗೌಡ್ರ, ಕರಬಸಯ್ಯ ನಾಲತ್ವಾಡಮಠ, ವಿರೂಪಾಕ್ಷಪ್ಪ ಶಿಗ್ಲಿ, ಬಸವರಾಜ ಹುಬ್ಬಳ್ಳಿ, ನಿಂಗಪ್ಪ ಪಡಗದ ಮುಂತಾದವರು ಬಹುಮಾನದೊಂದಿಗೆ ನೆನಪಿನ ಕಾಣಿಕೆ ನೀಡಿ, ವಿಜೇತರನ್ನು ಗೌರವಿಸಿದರು. ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಜೋಡಿ ಎತ್ತುಗಳ ಗಾಡಾಗಳು ಪಾಲ್ಗೊಂಡಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.