ಶಿವಾಜಿ ಆದರ್ಶ ಪಾಲಿಸಿ: ಮಿಥುನ್ ಪಾಟೀಲ್
ಗಜೇಂದ್ರಗಡ: ಮಹಾನ್ ಸ್ವಾಭಿಮಾನಿ, ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು ಸಾರ್ವಕಾಲಿಕ ಎಂದು ಮಿಥುನ್ ಪಾಟೀಲ್ ಹೇಳಿದರು. ಪಟ್ಟಣದ ಶಿವಾಜಿ ವೃತ್ತದ ಬಳಿ ಗುರುವಾರ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ದಿಂದ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ತಾಯಿಯ ಪ್ರೇರಣೆಯಿಂದ ಧರ್ಮನಿಷ್ಠೆಯಿಂದ ಆಡಳಿತ ನಡೆಸಿ ಮರಾಠ ದೊರೆಯಾಗಿ ಮಿಂಚಿದರು. ಅಂಥ ಮಹಾನ್ ನಾಯಕರ ಆದರ್ಶಗಳನ್ನು ಎಲ್ಲರೂ ಅನುಕರಿಸಬೇಕು. ವೀರವಂಶಸ್ಥರಾದ ಕ್ಷತ್ರಿಯ ಮರಾಠರು ಸಂಘಟಿತರಾಗಿ ಕೂಡಿ ಬಾಳುವ ಭಾರತೀಯ ಸಂಸ್ಕೃತಿ, ಪರಂಪರೆ ಉಳಿವಿಗೆ ಪಣತೊಡಬೇಕು ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಎಸ್.ಟಿ. ಭೈರಪ್ಪನವರ ಮಾತನಾಡಿ, ದೇಶದ ಎಲ್ಲ ಧರ್ಮಗಳನ್ನು ಗೌರವಾದರಗಳಿಂದ ಕಾಣುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ವ್ಯಕ್ತಿತ್ವ, ರಾಷ್ಟ್ರಾಭಿಮಾನವನ್ನು ಮಕ್ಕಳ ಬದುಕಿನಲ್ಲಿ ಅಳವಡಿಸಲು ಪ್ರೇರೇಪಿಸಬೇಕು ಎಂದರು.
ಬೆಳಗ್ಗೆ ಭಗವಾ ಧ್ವಜಾರೋಹಣ, ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಜರುಗಿತು. ಸಂಜೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಬಲರಾಮಗಿರಿ ಗೊಸಾಯಿಮಠ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ವಿರೋಧ ಪಕ್ಷ ನಾಯಕ ಶಿವರಾಜ ಘೋರ್ಪಡೆ, ಅಕ್ಕಮ್ಮ ಜಾನಾಯಿ, ಪುರಸಭೆ ಸದಸ್ಯ ಎಂ.ಎಸ್. ಹಡಪದ, ಡಿ.ಕೆ. ಛಾವಣಿ, ಕೃಷ್ಣಾಜಿ ದುಮ್ಮಾಳ, ಸಮಾಜ ಅಧ್ಯಕ್ಷ ಶೇಖಪ್ಪ ರಾಮಜಿ, ಪರಶುರಾಮ ಕಲ್ಗುಡಿ, ಶಿವಾಜಿ ಹಾಳಕೇರಿ, ಕೃಷ್ಣಾಜಿ ಸೂರ್ಯವಂಶಿ, ಬಾಳಪ್ಪ ಪವಾರ ಪರಸಪ್ಪ ನಿಂಬೋಜಿ, ಯಲ್ಲಪ್ಪ ಕಲ್ಗುಡಿ, ಜಗದೀಶ ಕಲ್ಗುಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

