ಸರಳ ವಿವಾಹ ಮಾಡಿ: ಶಿವಸಿದ್ಧೇಶ್ವರ
ಗಜೇಂದ್ರಗಡ: ಸಾಮೂಹಿಕ ವಿವಾಹಗಳು ಸರ್ವ ಧರ್ಮೀಯರನ್ನು ಒಗ್ಗೂಡಿಸುವ ಜತೆಗೆ ಬಡ ಕುಟುಂಬಗಳನ್ನು ಸಾಲದಿಂದ ಮುಕ್ತಿ ಮಾಡಲಿವೆ. ಆಡಂಬರದ ಮದುವೆಗೆ ತಿಲಾಂಜಲಿ ನೀಡಿ, ಸರಳ ವಿವಾಹಕ್ಕೆ ಆದ್ಯತೆ ನೀಡಿ ಎಂದು ಕನಕಗುರುಪೀಠ ಶಿವಸಿದ್ಧೇಶ್ವರ ಶ್ರೀ ಹೇಳಿದರು.
ಅವರು ಸಮೀಪದ ರಾಜೂರ ಗ್ರಾಮದ ಬೀರಲಿಂಗೇಶ್ವರ ದೇಗುಲ ಆವರಣದಲ್ಲಿ ರಸ್ತಾಪುರಿ ಭೀಮಕವಿ ವಿರಚಿತ ಗುರು ಬೀರಲಿಂಗೇಶ್ವರ ಪುರಾಣ ಮಹಾಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಲ್ಲಿವರೆಗೆ ವರದಕ್ಷಿಣೆ ಕೊಡುವರು ಇರುವರೊ ಅಲ್ಲಿಯವರೆಗೆ ವರದಕ್ಷಣೆ ಪಡೆಯುವರು ಇರುತ್ತಾರೆ. ಈ ಪಿಡುಗನ್ನು ತೊಲಗಿಸಲು ಸಾಮೂಹಿಕ ಮದುವೆಯೇ ಸಹಕಾರಿಯಾಗಬಲ್ಲದು ಎಂದರು. ನ್ಯಾಯವಾದಿ ವಿ.ಆರ್. ಗುಡಿಸಾಗರ, ಮಿಥುನ್ ಪಾಟೀಲ್, ತೇಜಯ್ಯ ಗುರುವಿನ, ಫಕೀರಪ್ಪ ಹೆಬಸೂರ, ಸೋಮಣ್ಣ ಬೆಟಗೇರಿ, ಬಿ.ವೈ. ಕುದರಿ, ಶಶಿಧರ ಹೂಗಾರ, ಸೋಮಣ್ಣ ರಾಠೋಡ, ರಾಮಚಂದ್ರ ಹುದ್ದಾರ, ಶಿವರುದ್ರಪ್ಪ ಹಾದಿಮನಿ, ಬನ್ನೆಪ್ಪ ಗೂಳಿ, ಯಲ್ಲಪ್ಪ ಹಾದಿಮನಿ, ನಿಂಗಪ್ಪ ಹುಡೇದ, ಶರಣಪ್ಪ ಹಾದಿಮನಿ, ಹನಮಂತ ಹಿತ್ತಲಮನಿ, ಎಂ.ಎಂ. ಕಮ್ಮಾಟ್ರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

