ಗದಗ

ಮಕ್ಕಳಿಗೆ ಉತ್ತಮ ಸಂಸ್ಕಾರ: ಕೌಜಲಗಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಮೇ 3
ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಿದರೆ ಸಮಾಜ ಪರಿವರ್ತನೆ ಹೊಂದುವ ಜತೆಗೆ ದೇಶ ಸುಧಾರಣೆ ಕಾಣಲು ಸಾಧ್ಯ ಎಂದು ಕಸಾಪ ಹುಬ್ಬಳ್ಳಿ ಘಟಕಾಧ್ಯಕ್ಷ ಕೆ.ಎಸ್. ಕೌಜಲಗಿ ಹೇಳಿದರು.
ಅವರು ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧೇಶ್ವರ ಮಠದಲ್ಲಿ ಆಯೋಜಿಸಲಾಗಿದ್ದ 2ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸಕ ನೀಡಿದರು. 12ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಎಲ್ಲರೂ ಸಮಾನರಾಗಿ ಬದುಕಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಸಾಧ್ಯ ಎಂದು ಹೇಳಿದ್ದರು. ಆದರೆ ಇಂದಿನ ಸಮಾಜದಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಿದೇ ಇರುವುದರಿಂದ ಸಮಾಜದಲ್ಲಿ ಮಕ್ಕಳಿಂದ ನಾವು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ಸಾನ್ನಿಧ್ಯ ವಹಿಸಿದ್ದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಕಲ್ಯಾಣಮ್ಮ ತಾಯಿ, ಪ್ರೊ. ಎಸ್.ಬಿ. ಕುಷ್ಟಗಿ, ಡಾ. ಎಂ. ಹಂಚಿನಾಳವರು ಮುಂತಾದವರು ಮಾತನಾಡಿದರು. ಸಾಧಕರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಎಸ್.ಆರ್. ಪಾಟೀಲ್, ವೆಂಕನಗೌಡ ಹನುಮಂತಗೌಡ್ರ, ಶಿದ್ರಾಮಪ್ಪ ಅಂಗಡಿ, ಶಿವಗಂಗಮ್ಮ ಅಂಗಡಿ, ಚಂದ್ರಕಾಂತ ಮಾಳವಾಡ, ಎಸ್.ಬಿ. ಗೋಣೆ, ಗುರುನಾಥಗೌಡ ಕೆಂಚನಗೌಡ್ರ, ದಾಂಡೇಲಿ ಅರಣ್ಯಾಧಿಕಾರಿ ಮಹೇಶ ಹಿರೇಮಠ, ಪಂಚಪ್ಪ ಬೆಳವಟಿಗಿ, ಶಿವಪ್ಪ ಬೋಳಶೆಟ್ಟಿ, ಶ್ರೀನಿವಾಸ ಬೋನಗೇರ, ಗೋವಿಂದರಾಜ ಗುಡಿಸಾಗರ, ವಿಠಲ ಶಿಂದೆ, ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿ, ಹಿರೇಗೌಡರ, ಶ್ರೀಪಾದ ಆನೇಗುಂದಿ, ಸಿ.ಎಸ್. ಸಾಲೂಟಿಗಿಮಠ, ಶಾಂತಕುಮಾರ ಭಜಂತ್ರಿ, ಮಣ್ಣೂರಮಠ, ಎಂ.ಡಿ. ಮಾದರ ಮುಂತಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.