ಗದಗ

ಸ್ಪರ್ಧಾತ್ಮಕ ಗುಣ ಬೆಳೆಸಿಕೊಳ್ಳಿ

Published On :

ಗದಗ: ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಯಾಶಿಲರಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಹುಬ್ಬಳ್ಳಿ ಪ್ರಾಧ್ಯಾಪಕಿ ಡಾ. ನಳಿನಿ ಬೆಂಗೇರಿ ಹೇಳಿದರು.
ಅವರು ಶನಿವಾರ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2013-14ನೇ ಸಾಲಿನ ಹಲವು ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರಾಧ್ಯಾಪಕ ಬಸವರಾಜ ಕಂಬಳಿ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಇಂದು ಮನೆ ಬಾಗಿಲಿಗೆ ಸರ್ಕಾರ ಮುಟ್ಟಿಸುತ್ತಿರುವುದು ಶ್ಲಾಘನೀಯ. ಭಾರತದ ಜನಸಂಖ್ಯೆಗೆ ಅನುಸಾರವಾಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ತೃಪ್ತಿಕರವಾಗಿಲ್ಲ ಸರ್ಕಾರವು ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಗಳನ್ನು, ಕಾಲೇಜುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಾರಂಭಿಸಬೇಕಾಗಿದೆ ಎಂದರು.
ಪ್ರಾಚಾರ್ಯ ಡಾ. ಶಿವಪ್ಪ ಕುರಿ, ಚಂದ್ರಪ್ಪ ಎಚ್.ಎಸ್. ಚನ್ನಮ್ಮ ಹೂಗಾರ, ಅನಿತಾ ದಾಮೋದರ, ವೇದಾ ಹುಡೇದ, ನಿಪ್ಪಾಣಿ      ಮಾತನಾಡಿದರು.
ಅಧ್ಯಾಪಕ ಡಾ. ಉಮೇಶ ಅರಹುಣಸಿ, ಗಂಗಾಧರ ಗುಮಗೋಳಮಠ, ಆರ್.ಪಿ. ನದಾಫ, ಫಕೀರಪ್ಪ ಆನಿ, ಡಾ. ಮಾನಪ್ಪ ಹೊನ್ನಕಾಂಬಳೆ, ಸವಿತಾ ಪಾಟೀಲ, ಜಯಶ್ರೀ ಮುತಗಾರ, ಅಣ್ಣಪ್ಪ ರೊಟ್ಟಿಗವಾಡ, ಮುತ್ತಪ್ಪ ಬದ್ನಿಕಾಯಿ, ಮಹಾಂತೇಶ ಕರ್ಲವಾಡ ಮುಂತಾದವರು ಪಾಲ್ಗೊಂಡಿದ್ದರು. ಬಸವರಾಜ ಗೂರನವರ ಪ್ರಾರ್ಥಿಸಿದರು. ನಾಗರಾಜ ಹಾವಿನಾಳ ಸ್ವಾಗತಿಸದರು. ರಂಜನಾ ಭಂಡಾರೆ ನಿರ್ವಹಿಸಿದರು ಬಸವರಾಜ ಅಂಬಿಗೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.