'ಭೂ ಕೈಲಾಸ' ಮೆಚ್ಚಿದ ಸ್ವರ್ಣವಲ್ಲೀ ಶ್ರೀ
ಕನ್ನಡಪ್ರಭ ವಾರ್ತೆ, ಶಿರಸಿ, ಮೇ 17
ದೀವಗಿಯ ಶ್ರೀ ರಾಮಾನಂದ ಅವಧೂತರು ಹಾಗೂ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ತಾಲೂಕಿನ ಗೋಳಿಯಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಪ್ರದರ್ಶನಗೊಳ್ಳುತ್ತಿರುವ 'ಭೂ ಕೈಲಾಸ' ಪೌರಾಣಿಕ ನಾಟಕವನ್ನು ಶುಕ್ರವಾರ ರಾತ್ರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗೋಳಿಗರ ಕ್ರಿಯಾಶೀಲತೆ, ಸಾಧನೆಗೆ ತಲೆದೂಗಿ ಮತ್ತಷ್ಟು ಪ್ರವೃದ್ಧಗೊಳ್ಳಲೆಂದು ಹರಸಿದರು. ನಾಟಕ ಪ್ರದರ್ಶನಕ್ಕೆ ಪೂರ್ವ, ಭಾವಿಕೈನ ಶ್ರೀಪಾದ ಹೆಗಡೆ ದಂಪತಿ ಹಾಗೂ ಜಿ.ಆರ್. ಭಟ್ ದೊಣ್ಣೆಮನೆ ದಂಪತಿ ಶ್ರೀಗಳವರ ಪಾದಪೂಜೆ ನೆರವೇರಿಸಿದರು.
ಮತ್ತೆರಡುದಿನ ಪ್ರದರ್ಶನ: 'ಭೂ ಕೈಲಾಸ' ನಾಟಕ ನಾಡಿನಾದ್ಯಂತದ ಕಲಾಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಪ್ರೇಕ್ಷಕರ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಟಿಕೆಟ್ ಅಲಭ್ಯತೆಯಿಂದ ಬಹಳಷ್ಟು ಜನರು ನಿರಾಶರಾಗಿ ಮರಳಬೇಕಾದ ಪ್ರಸಂಗ ಉಂಟಾಯಿತು. ಜನಾಗ್ರಹದ ಮೇರೆಗೆ ನಾಟಕ ಪ್ರದರ್ಶನವನ್ನು ಮೇ 19 ಮತ್ತು ಮೇ 20ರ ರಾತ್ರಿಗೂ ವಿಸ್ತರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

