ಗದಗ

ನಿಯಮ ಉಲ್ಲಂಘಿಸಿ ರು. ಲಕ್ಷ ದಾನ: ಪ್ರತಿಭಟನೆ

Published On :

ಗಜೇಂದ್ರಗಡ: ಪುರಸಭೆ ಅಧ್ಯಕ್ಷರು ಸದಸ್ಯರಿಗೆ ತಿಳಿಸದೆ ನಿಯಮ ಉಲ್ಲಂಘಿಸಿ ಸಂಘಟನೆಯೊಂದಕ್ಕೆ ರು. 1 ಲಕ್ಷ ದಾನ ನೀಡಿ ದಾಖಲೆ ಸಮೇತ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಪೌರಾಡಳಿತ ನಿಯಮ ಗಾಳಿಗೆ ತೂರಿ ಜನರ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಕಾಮಗಾರಿ ಅಥವಾ ಇನ್ನಾವುದೆ ಕೆಲಸಕ್ಕೆ ಹಣ ಖರ್ಚು ಮಾಡಲು ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಜಿಲ್ಲಾಧಿಕಾರಿ ಗಮನಕ್ಕೆ ತರುವುದು ನಿಯಮ. ಸರ್ಕಾರದ ಪ್ರಕ್ರಿಯೆ ಅನುಸರಿಸದೆ ಫೆ. 22ರಂದು ಪುರಸಭೆ ಅಧ್ಯಕ್ಷರು ರು. 1 ಲಕ್ಷ ದಾನ ನೀಡಿದ್ದು ಅಕ್ಷಮ್ಯ ಅಪರಾಧ. ಜನ ಪಾವತಿಸಿದ ತೆರಿಗೆ ಹಣ ಸಂಪೂರ್ಣ ದುರ್ಬಳಕೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಮಾತನಾಡಿ, ಮಾರ್ಚ್ 13ರಂದು ಕರ್ನಾಟಕ ಜನಹಿತ ವೇದಿಕೆಗೆ ರು. 1 ಲಕ್ಷ ದಾನ ನೀಡಿದ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಈಗ ನೀಡಿರುವ ದೃಢೀಕರಣ ಪತ್ರದಲ್ಲಿ ಯಾವೊಬ್ಬ ಸದಸ್ಯರಿಂದಲೂ ಸಹಿ, ಜಿಲ್ಲಾಧಿಕಾರಿ ಒಪ್ಪಿಗೆ ಪತ್ರ ಪಡೆದಿಲ್ಲ. ಮೇ 17ರಂದು ದೃಢೀಕರಣ ಪತ್ರ ಪಡೆದ ಬಳಿಕ ತರಾತುರಿಯಲ್ಲಿ ಮೇ 18ರಂದು ಅಧಿಕಾರಿಗಳು ಎಲ್ಲ ಸದಸ್ಯರ ಮನೆಗೆ ತೆರಳಿ ಹಿಂದಿನ ದಿನಾಂಕ ನಮೂದಿಸಿ ದಾಖಲೆ ಸೃಷ್ಟಿಸುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲೂ ಇಂಥ ಪ್ರಸ್ತಾವನೆ ಮಾಡಿಲ್ಲ. ಎಲ್ಲವೂ ಅಕ್ರಮವಾಗಿ ನಡೆಯುತ್ತಿದೆ ಎಂದು ಆಪಾದಿಸಿದರು.
ಜನರ ಹಣ ಯಾರಿಗೆ ಬೇಕೋ ಅವರಿಗೆ ಹಂಚುವುದಾಗಲಿ, ದಾನ ಕೊಡುವುದಾಗಲಿ ಪೌರಾಡಳಿತ ನಿಯಮದಲ್ಲಿ ಅವಕಾಶವಿಲ್ಲ. ಪುರಸಭಾಧ್ಯಕ್ಷರು ಈ ನಿಯಮ ಲೆಕ್ಕಿಸದೆ ರು. 1 ಲಕ್ಷ ಚೆಕ್ ಮೂಲಕ ದಾನ ಕೊಟ್ಟಿದ್ದಾರೆ. ಇದನ್ನು ಮುಚ್ಚಿ ಹಾಕಲು ಅಧಿಕಾರಿಗಳು ಈಗ ಯತ್ನಿಸುತ್ತಿದ್ದಾರೆ. ಪಟ್ಟಣದ ಹಲವು ಬಡಾವಣೆಯಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಮೂಲ ಸಮಸ್ಯೆಗಳಿಂದ ಜನ ತತ್ತರಿಸುತ್ತಿದ್ದಾರೆ. ಅಂಥ ಸಮಸ್ಯೆ ಪರಿಹಾರ ಮಾಡದೆ ಹೀಗೆ ಹಣವನ್ನು ಪೋಲು ಮಾಡುತ್ತಿದ್ದಾರೆಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.