ಕೋಳಿವಾಡ ಉಚ್ಚಾಟನೆಗಾಗಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 20
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬಾರದಿತ್ತೆಂದ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹಿಸಿ ಪಟ್ಟಣ, ತಾಲೂಕು ಕಲಕೇರಿ ಅಲ್ಪಸಂಖ್ಯಾತ ಸಮುದಾಯ ಮಂಗಳವಾರ ಸ್ಥಳೀಯ ಹೊಸ ಬಸ್ ನಿಲ್ದಾಣ ಬಳಿ ಪ್ರತಿಭಟಿಸಿ ಕೆ.ಬಿ. ಕೋಳಿವಾಡ ಪ್ರತಿಕೃತಿ ದಹಿಸಿದರು.
ಕಲಕೇರಿ ಗ್ರಾಮದ ಎಂ.ಯು. ಮಕಾಂದಾರ ಮಾತನಾಡಿ, ಕೋಳಿವಾಡ ಕಾಂಗ್ರೆಸ್ನಿಂದಲೇ ಶಾಸಕರಾಗಿ ಆಯ್ಕೆಯಾಗಿ ಇಂಥ ಹೇಳಿಕೆ ನೀಡಿದ್ದು ಖಂಡನೀಯ. ಅವರ ಹೇಳಿಕೆಯಿಂದ ಮುಸ್ಲಿಂ ಸಮುದಾಯದವರ ಮನಸ್ಸಿಗೆ ನೋವಾಗಿದೆ. ಇಂಥ ಜಾತಿವಾದಿ ಕೋಳಿವಾಡಗೆ ಮಂತ್ರಿಸ್ಥಾನ ಕೊಡಬಾರದು. ಪಕ್ಷದ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ, ಪಕ್ಷದ ವರಿಷ್ಠರು ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದರು.
ಮುಂಡರಗಿ ಅಲ್ಪಸಂಖ್ಯಾತ ವೇದಿಕೆ ಅಧ್ಯಕ್ಷ ನಬೀಸಾಬ ಕೆಲೂರ ಮಾತನಾಡಿ, ಕೆ.ಬಿ. ಕೋಳಿವಾಡ ಅವರನ್ನು ಶಾಸಕ ಸ್ಥಾನದಿಂದ ಕೈಬಿಡುವವರೆಗೂ ಹೋರಾಟ ಮುಂದುವರಿಸುತ್ತೇವೆ. ವಿಧಾನಸೌಧದ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಬಾಬಾಜಾನ ಅಳವಂಡಿ, ಮೈಬೂಸಾಬ ಮಕಾಂದಾರ, ಎಂ.ಎಚ್. ತಳಗಡೆ, ಯು.ಡಿ. ಮಕಾಂದಾರ, ಅಬ್ದುಲಸಾಬ ಕೊಕ್ಕರಗುಂದಿ, ರಾಜಾಹುಸೇನ ಗದ್ದಿ, ಕತೀಬ್, ಹಾಸೀಂಸಾಬ ಮುಲ್ಲಾ, ಜಾಫರಸಾಬ ಸುಂಕದ, ಬಾಬುಸಾಬ ಕಲಕೇರಿ, ಹುಸೇನಸಾಬ ತಂಬ್ರಳ್ಳಿ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

