ಗದಗ

ಇಂದು ಧಾರವಾಡ ಹಾಲು ಒಕ್ಕೂಟ ಚುನಾವಣೆ

Published On :

ಧಾರವಾಡ: ಧಾರವಾಡ ಸಹಕಾರಿ ಹಾಲು ಒಕ್ಕೂಟದ 12 ಕ್ಷೇತ್ರಗಳಿಗೆ ಐದು ವರ್ಷದ ಅವಧಿಗಾಗಿ ಮೇ 26ರಂದು ಒಕ್ಕೂಟದ ಕೇಂದ್ರ ಸ್ಥಾನದಲ್ಲಿ ಚುನಾವಣೆ ನಡೆಯಲಿದೆ.
ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಈ ಒಕ್ಕೂಟಕ್ಕೆ ಒಟ್ಟು 12 ಕ್ಷೇತ್ರಗಳಾಗಿ ಮಾಡಲಾಗಿದೆ. ಮೂರು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಸೋಮವಾರ ಉಳಿದ ಒಂಭತ್ತು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಹುಬ್ಬಳ್ಳಿ-ಕುಂದಗೋಳ ಮತ ಕ್ಷೇತ್ರದ ಗಂಗಪ್ಪ ಮೂಕಪ್ಪ ಮೊರಬದ, ಹಾವೇರಿ-ರಾಣಿಬೆನ್ನೂರು-ಬ್ಯಾಡಗಿ ಮತಕ್ಷೇತ್ರದ ಬಸವರಾಜ ನೀಲಪ್ಪ ಅಬರಗೊಂಡ, ಗದಗ-ನರಗುಂದ ಕ್ಷೇತ್ರದ ಹನುಮಂತಗೌಡ ಹಿರೇಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾದವರಲ್ಲಿ ಬಸವರಾಜ ಅರಬಗೊಂಡ ಈ ಹಿಂದಿನ ಅವಧಿಯಲ್ಲಿ ಒಕ್ಕೂಟದ ಅಧ್ಯಕ್ಷರಾಗಿದ್ದರು. ಶಂಕರಪ್ಪ ವೀರಪ್ಪ ಮುಗದ, ಗಂಗಪ್ಪ ಮೂಕಪ್ಪ ಮೊರಬದ ಈ ಹಿಂದಿನ ಅವಧಿಗೆ ನಿರ್ದೇಶಕರಾಗಿದ್ದರು.
9 ಸ್ಥಾನಗಳಿಗೆ 20 ಅಭ್ಯರ್ಥಿಗಳು: ಪ್ರಸ್ತುತ ಒಂಭತ್ತು ಕ್ಷೇತ್ರಗಳಿಗೆ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಧಾರವಾಡ-ನವಲಗುಂದ ಕ್ಷೇತ್ರಕ್ಕೆ 2 ಅಭ್ಯರ್ಥಿಗಳು, ಕಲಘಟಗಿ-2, ಶಿಗ್ಗಾವಿ-ಸವಣೂರು-3, ಹಿರೇಕೆರೂರು-ಹಾನಗಲ್-3, ರೋಣ-2, ಮುಂಡರಗಿ-ಶಿರಹಟ್ಟಿ-2, ಶಿರಸಿ-2, ನಾಲ್ಕು ತಾಲೂಕುಗಳನ್ನೊಳಗೊಂಡ ಸಿದ್ದಾಪುರ-ಕುಮಟಾ-ಹೊನ್ನಾವರ-ಭಟ್ಕಳ ಕ್ಷೇತ್ರಕ್ಕೆ-2, ಆರು ತಾಲೂಕುಗಳನ್ನೊಳಗೊಂಡ ಯಲ್ಲಾಪುರ-ಹಳಿಯಾಳ-ಮುಂಡಗೋಡ-ಅಂಕೋಲಾ-ಜೋಯಿಡಾ-ಕಾರವಾರ ಕ್ಷೇತ್ರಕ್ಕೆ 2 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಸೋಮವಾರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಮತದಾನ ಮುಗಿದ ಬಳಿಕವೇ ಮತ ಎಣಿಕೆ ನಡೆಯಲಿದೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 753 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, ಒಂದು ಸಂಘದ ಎಲ್ಲ ಸದಸ್ಯರು ಕೂಡಿ ಚರ್ಚಿಸಿ ಪ್ರತಿನಿಧಿಯಾಗಿ ತಮ್ಮ ಸಂಘದಿಂದ ಒಬ್ಬ ಮತದಾರರನ್ನು ಆರಿಸಿ ಮತದಾನಕ್ಕೆ ಕಳಿಸಬೇಕು. ಸಂಘದ ಕಾರ್ಯದರ್ಶಿ ಅಧಿಕೃತ ಮುದ್ರೆ ಹಾಕಿದ ಗುರುತಿನ ಚೀಟಿ ತಂದು ಮತ ಹಾಕಬೇಕು. ಒಂದು ಸಂಘದಿಂದ ಒಬ್ಬ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ಚುನಾವಣಾಧಿಕಾರಿ ಮಹೇಶ ಕರ್ಜಗಿ ಪತ್ರಿಕೆಗೆ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.