ಉದಾಸಿ ಗೆಲವು: ಮಹಿಳಾ ಮೋರ್ಚಾ ಸಂತಸ
ಗದಗ: ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಯವರ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಸದಸ್ಯರು ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಮಮತಾ ಉದಯ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ, ಭಾರತಿ ಜಂಬಗಿ ಸಭೆ ನೇತೃತ್ವ ವಹಿಸಿದ್ದರು. ಬಿಜೆಪಿ ಹಿರಿಯ ಮುಖಂಡ ವಂದನಾ ವೆರ್ಣೇಕರ, ಸುಶೀಲಾ ಶೀರಿ, ಕಮಲಾಕ್ಷಿ ಗೊಂದಿ, ಶಾರದಾ ಸಜ್ಜನ, ದೀಪಾ ಗೋಯಲ್ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಜಯಶ್ರೀ ಉಗಲಾಟ, ಎಂ.ಎಸ್. ಕರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಬಸವರಾಜ ಶೀರಿ, ನಿರ್ಮಲಾ ಜಿಗಳೂರ, ಅಶ್ವಿನಿ ಜಗತಾಪ, ಪ್ರೇಮಾ ಕಡೇಮನಿ, ಪದ್ಮಾ ಯಗಪಲ್ಲೆ, ಪೂಜಾ ಬೇವೂರ, ರೇಣುಕಾ ಆಸಂಗಿ, ಪುಷ್ಪಾ ಪತ್ತಾರ, ಜಯಶ್ರೀ ಅಣ್ಣಿಗೇರಿ, ಅಂದಮ್ಮ ಹೊಟ್ಟಿನ, ಸಾವಿತ್ರಿ ಬಸವನಗೌಡ್ರ, ದೇವಕ್ಕ ಉಪ್ಪಿನ, ನಿರ್ಮಲಾ ಸಜ್ಜನ, ಕವಿತಾ ಜಾಲಿಹಾಳ, ಜ್ಯೋತಿ ಹಾನಗಲ್ಲ, ಸುಮಂಗಲಾ ಹಲಗಲಗಿ, ಸುಧಾ ಬಡಿಗೇರ ಹಾಜರಿದ್ದರು.
ಆನ್ಲೈನ್ ಅರ್ಜಿ ಆಹ್ವಾನ
ಗದಗ: 2014-15ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ವೃಂದದ ವರ್ಗಾವಣೆಗಳನ್ನು 2014ಕ್ಕೆ ಸೀಮಿತಿಗೊಳಿಸಿ ಮೇ, ಜೂನ್ ತಿಂಗಳಲ್ಲಿ ನಡೆಸಲಾಗುವುದು. ವರ್ಗಾವಣೆ ಬಯಸುವವರು ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕಾಗುತ್ತದೆ. ಖುದ್ದಾಗಿ ಅಥವಾ ಟಪಾಲು ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ ಡಿಡಿಠ//ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

