ಪ್ರತಿಭಾನ್ವಿತ ವಿದ್ಯಾರ್ಥಿ ಸಮಾಜದ ಆಸ್ತಿ
ಗದಗ: ಪ್ರತಿಭಾವಂತ ಮಕ್ಕಳು ಶೈಕ್ಷಣಿಕ ರಂಗದಲ್ಲಿ ಉನ್ನತ ಸಾಧನೆಯೊಂದಿಗೆ ಭವಿಷ್ಯ ಉಜ್ವಲಗೊಳಿಸಿಕೊಂಡು ತಂದೆ-ತಾಯಿ, ಪಾಲಕರನ್ನೊಳಗೊಂಡ ತಮ್ಮ ಕುಟುಂಬ ಹಾಗೂ ಸಮಾಜದ ಆಸ್ತಿಯಾಗಿ ಬೆಳೆದು ಬರಬೇಕು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ಸೋಮವಾರ ಸಂಜೆ ನಡೆದ 2173ನೇ ಶಿವಾನುಭವದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದಂತೆ ಸಮಾಜದಲ್ಲಿ ಕೂಡ ಆದರ್ಶ ನಡೆ ನುಡಿಯಿಂದ ಜನರೆಲ್ಲರ ಪ್ರೀತಿ, ವಿಶ್ವಾಸ ಗಳಿಸಬೇಕು. ತಂದೆ-ತಾಯಿ, ಪಾಲಕರಿಗೆ, ಸಮಾಜದ ಋಣ ತೀರಿಸಲು ಪಣತೊಟ್ಟು ನಡೆದಾಗ ಬದುಕಿನ ಸಾರ್ಥಕ ಹೊಂದಲು ಸಾಧ್ಯ ಎಂದರು.
ಬೆಳಗಾವಿಯ ಜೆ.ಎನ್. ವೈದ್ಯಕೀಯ ಕಾಲೇಜಿನ ಸಮುದಾಯ ಆರೋಗ್ಯ ಘಟಕದ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ ಇಷ್ಟಲಿಂಗ ಪೂಜೆ ಕುರಿತು ವೈಜ್ಞಾನಿಕ ವಿವರಣೆಯ ಸ್ಲೈಡ್ ಶೋ ಹಾಗೂ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಜ. ತೋಂಟದಾರ್ಯ ವಿದ್ಯಾಸಂಸ್ಥೆಯ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿ ಮುಗ್ದಾ ಕ್ಯಾಮನಗೌಡರ, ದ್ವಿತೀಯ ಸ್ಥಾನ ಪಡೆದ ಸಹನಾ ಗೌಡರ, ತೃತೀಯ ಸ್ಥಾನ ಪಡೆದ ಕಾವೇರಿ ತಳವಾರ, ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಹೊನ್ನಮ್ಮ ಸಣ್ಣಮನಿ, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅರ್ಪಿತಾ ಬಿರಾದಾರ, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಆದಿತ್ಯ ಅಡಿಗ ಹಾಗೂ ವಿಜ್ಞಾನ ವಿಭಾಗದ ಸಾಧಕಿ ವನಜಾಕ್ಷಿ ಮಾನೇದ ಅವರನ್ನು ಸನ್ಮಾನಿಸಲಾಯಿತು.ತೋಂಟದಾರ್ಯ ಕಲಾ ತಂಡದಿಂದ ವಚನ ಸಂಗೀತ ಜರುಗಿತು. ರೇಖಾ ಮುನವಳ್ಳಿ ಹಾಗೂ ಜಯಲೀಲಾ ಮೊಟಗಿ ಧರ್ಮಗ್ರಂಥ ಪಠಿಸಿದರು. ಡಾ. ಸಿ.ಎಸ್. ಹಸಬಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಭುದೇವ ಹಿರೇಮಠ, ಉಪಾಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ರ, ರತ್ನಕ್ಕ ಪಾಟೀಲ, ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ, ವೀರಣ್ಣ ಜ್ಯೋತಿ, ಚಂದ್ರಶೇಖರ ಅರಳಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

