ಗದಗ

ವಿದ್ಯಾರ್ಥಿಗಳಿಗೆ ಸಾಮಾಜಿಕ ಪ್ರಜ್ಞೆ ಅಗತ್ಯ: ಗಾಣಿಗೇರ

Published On :

ರೋಣ: ಪ್ರತಿಯೊಬ್ಬ ಮನುಷ್ಯನಿಗೂ ಸ್ವಯಂ ಶಿಸ್ತು, ಮಾನವೀಯ ಮೌಲ್ಯಗಳು, ಸಹಕಾರ ಮನೋಭಾವ ಮತ್ತು ಸಾಮಾಜಿಕ ಪ್ರಜ್ಞೆ ಅಗತ್ಯವಾಗಿದೆ. ಇವುಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ, ಹೊಳೆ ಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಹೇಳಿದರು.
ಭಾನುವಾರ ತಾಲೂಕಿನ ಹೊನ್ನಿಗನೂರ ಗ್ರಾಮದಲ್ಲಿ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿಇಡಿ) ಪ್ರಸಕ್ತ ಸಾಲಿನ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪೌರತ್ವ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ರಾಷ್ಟ್ರೀಯ ಭಾವೈಕ್ಯತೆ, ಜ್ಯಾತ್ಯತೀತ ಗುಣಗಳನ್ನು ಬೆಳುವುದರೊಂದಿಗೆ, ಸೃಜನಶೀಲತೆ, ಕ್ರಿಯಾತ್ಮಕತೆ ಹೊರ ಹಾಕಿ ನಿತ್ಯ ಸಾಮಾಜಿಕ ಕಾರ್ಯಗಳಲ್ಲಿ ತೋಡಗಿಸುವಲ್ಲಿ ಸಹಕಾರಿಯಾಗುತ್ತವೆ. ಆದ್ದರಿಂದ ಶಿಬಿರಾರ್ಥಿಗಳು ಶಿಬಿರದ ಉದ್ದೇಶ ಸಾರ್ಥಕಪಡಿಸುವಲ್ಲಿ ಆಸಕ್ತಿ ಹೊಂದಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಚೇರ್‌ಮನ್ ಮಿಥುನ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಪರಶುರಾಮ ಅಳಗವಾಡಿ, ಶಿಬಿರ ಸಂಯೋಜಕ ಸಿದ್ದಪ್ಪ ಪಿ., ಮಾತನಾಡಿದರು. ಕುಬೇರಪ್ಪ ಬೇನಹಾಳ, ಸಂಗಮೇಶ ಸವಡಿ, ಸಂಗು ನವಲಗುಂದ, ಎ.ಬಿ. ಮೇಟಿ, ಹನುಮಂತ ಸುಳಿಬಾವಿ, ವೀರನಗೌಡ ಮೂಲಿಮನಿ, ಎಸ್.ಆರ್. ಐವಳ್ಳಿ, ಎಸ್.ಎಸ್. ಗೌಡರ, ಮೌನೇಶ ಬಡಿಗೇರ, ಕೆ.ಕೆ.ಅವಾರಿ, ಎಸ್.ಬಿ. ಮುತ್ತಿನ, ಅನುಸೂಯಾ ಬೇವಿನಗೀಡದ, ರವಿ ಕೊಪ್ಪದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.