ವಸಂತ ಹೊರಟ್ಟಿ ಗೆಲವಿಗೆ ಶ್ರಮಿಸಲು ಕೊಣ್ಣೂರ ಕರೆ
ಗದಗ: ಪಶ್ಚಿಮ ಪಧವೀಧರರ ಮತಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವ ವಸಂತ ಹೊರಟ್ಟಿ ಒಬ್ಬ ಉತ್ಸಾಹಿ ಯುವಕನಾಗಿದ್ದು ಅವರಿಗೆ ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಕಾರಣ ಚುನಾವಣೆಯಲ್ಲಿ ಅವರ ಗೆಲವಿಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ಕೊಣ್ಣೂರ ಹೇಳಿದರು.
ಅವರು ಗುರುವಾರ ಲಕ್ಷ್ಮೇಶ್ವರದಲ್ಲಿ ವಸಂತ ಹೊರಟ್ಟಿಯವರ ಅಭಿಮಾನಿಗಳು ಹಾಗೂ ಪದವೀಧರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ವಸಂತ ಹೊರಟ್ಟಿ ವಿದೇಶದಲ್ಲಿ ಉನ್ನತ ಪದವಿ ವ್ಯಾಸಂಗವನ್ನು ಮಾಡಿದವರು. ಅವರಿಗೆ ಪದವೀಧರರ ಸಮಸ್ಯೆಗಳು ಗೊತ್ತು. ಅವುಗಳನ್ನು ಪರಿಹರಿಸುವ ಬಗ್ಗೆ ಸಮಗ್ರವಾಗಿ ಚಿಂತನೆಯನ್ನು ಮಾಡುವಂತಹ ಇಚ್ಛಾಶಕ್ತಿಯುಳ್ಳರಾಗಿದ್ದಾರೆ. ಅವರನ್ನು ಈ ಚುನಾವಣಿಯಲ್ಲಿ ಗೆಲ್ಲಿಸಿ ಪದವೀಧರರ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ಮಾಡಿಕೊಡೋಣ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್. ಕೊಟಗಿ, ಭಜಂತ್ರಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಟಿ. ಬ್ಯಾಕೋಡ, ಎಂ.ಕೆ. ಲಮಾಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

