ಮಹಿಳೆಯರ ರಾಜಕೀಯ ಸಾಮರ್ಥ್ಯ ಹಿಮ್ಮೆಟ್ಟಿಸುವ ಷಡ್ಯಂತ್ರ: ಮೀನಾಕ್ಷಿ ಬಾಳಿ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಏ.1
ಮಹಿಳೆಯರಲ್ಲಿ ರಾಜಕೀಯ ಇಚ್ಛಾಶಕ್ತಿ ಜತೆಗೆ ರಾಜಕೀಯ ಮಾಡುವ ಸಾಮರ್ಥ್ಯ ಇದ್ದರೂ ಪುರುಷ ಪ್ರಧಾನ ಸಮಾಜ ರಾಜಕೀಯದಲ್ಲಿ ಹಿಮ್ಮೆಟ್ಟಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಮೀನಾಕ್ಷಿ ಬಾಳಿ ವಿಷಾದ ವ್ಯಕ್ತಪಡಿಸಿದರು.
ಅವರು ಸೋಮವಾರ ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ತಾಲೂಕು ಮಟ್ಟದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ರೂವಾರಿ ಜಿಪಂ ಸದಸ್ಯೆ ಶೋಭಾ ಬಾಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದೇವದಾಸಿ ಪದ್ಧತಿ ಧಿಕ್ಕರಿಸಿ ಹೊಸ ಜೀವನ ಆರಂಭಿಸಿದ ಮಹಿಳೆಯರು, ಪ್ರಗತಿಪರ ರೈತ ಮಹಿಳೆಯರು ವರದಕ್ಷಿಣೆ ಪಡೆಯದೆ ಮದುವೆಯಾದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ಪ್ರಜ್ಞಾ ಕಾನೂನು ಸಮಿತಿಯ ಶಾಂತಾ ಮಠ, ಗಂಗಮ್ಮ ಯತ್ನಾಳ, ನಾಗಮ್ಮ ನರಿಬೋಳ, ಪ್ರಭು ಖಾನಾಪುರೆ, ಜ್ಯೋತಿ ಪಾಟೀಲ್, ಮಹಾದೇವಿ ಸಜ್ಜನ್, ಮಲ್ಲಮ್ಮ ಆಲೂರು, ಶರಣಮ್ಮ ಬಳ್ಳುಂಡಗಿ, ಶಿವಪುತ್ರಪ್ಪ ಕೋಣಿನ್, ಶಂಕರ ಕಟ್ಟಿಸಂಗಾವಿ, ಶಿವಶರಣಪ್ಪ ಜಂಬೆರಾಳ, ಬೂತಾಳಿ ದಾವಜಿ ಪಾಲ್ಗೊಂಡಿದ್ದರು.
ಪಾರ್ವತಿ ಪಾಟೀಲ್ ಸ್ವಾಗತಿಸಿದರು. ಪೂಜಾ ಶಂಕರ ಕಟ್ಟಿಸಂಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭದ್ರಾ ಮಾಸ್ತರ್ ನಿರೂಪಿಸಿದರು.
ವೀರಶೈವ ಸಮಾಜದ ಅಧ್ಯಕ್ಷರ ಮುಂದುವರಿಕೆ
ಸುರಪುರ: ಕಕ್ಕೇರಾ ವೀರಶೈವ ಸಮಾಜದ ಅಧ್ಯಕ್ಷರಾಗಿದ್ದ ಚಂದ್ರಕಾಂತ ಸಕ್ರಿ ಅವರನ್ನು ಮತ್ತೆ ಮುಂದುವರಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ. ಪದಾಧಿಕಾರಿಗಳಾಗಿ ಈರಣ್ಣ ಕುಂಬಾರ(ಗೌರವಾಧ್ಯಕ್ಷ), ಚಂದ್ರಕಾಂತ ಸಕ್ರಿ(ಅಧ್ಯಕ್ಷ), ಶರಣು ಜಕಾತಿ(ಉಪಾಧ್ಯಕ್ಷ), ಬಸವರಾಜ ಗುಳಗಿ(ಕಾರ್ಯದರ್ಶಿ), ಶೇಖಪ್ಪ ಗುಳಗಿ(ಸಹ ಕಾರ್ಯದರ್ಶಿ), ಶರಣಯ್ಯಸ್ವಾಮಿ(ಖಜಾಂಚಿ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

