ಮಠ ಆಧ್ಯಾತ್ಮ ಕೇಂದ್ರವಾಗಬೇಕು: ಶಾಂತರುದ್ರಮುನಿ ಸ್ವಾಮೀಜಿ ನುಡಿ
ಕೆಂಭಾವಿ: ಸರ್ವರಗೂ ಅಧ್ಯಾತ್ಮದ ಅವಶ್ಯವಿದೆ. ಆ ನಿಟ್ಟಿನಲ್ಲಿ ಮಠಗಳು ಅಧ್ಯಾತ್ಮದ ಕೇಂದ್ರಗಳಾಗಿ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದು ಎಲ್ಲ ಮಠಾಧೀಶರ ಕರ್ತವ್ಯ ಎಂದು ಕರಡಕಲ್ ಕೋರಿಸಿದ್ದೇಶ್ವರ ಮಠದ ಶಾಂತರುದ್ರಮುನಿ ಸ್ವಾಮಿ ನುಡಿದರು.
ಸಮಿಪದ ಕರಡಕಲ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ನಡೆದ 150ನೇ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅರ್ಚನ, ಅರ್ಪಣ ಮತ್ತು ಅನುಭವ ಎಂಬ ತ್ರಿವಿಧ ದಾಸೋಹದಿಂದ ಮನುಷ್ಯನ ತನು ಮನ ಶುದ್ಧಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆ ನೆರವೇರಿಸಿದರು. ಸಾಹಿತಿ ನಿಂಗನಗೌಡ ದೇಸಾಯಿ, ಕರವೇ ಕರಿಬಸವ ಬಿರಾಳ, ಅಬ್ದುಲ ಹಾದಿಮನಿ, ಸಾಯಬಣ್ಣ ಪುರ್ಲೆ, ಅತೀಶ ಬೆಂಗಳೂರ, ಅರುಣ ಬೆಂಗಳೂರ, ಶಂಕರಗೌಡ ಪೊಲೀಸ್ ಪಾಟೀಲ ಇದ್ದರು.
ಶಿವಪ್ರಕಾಶ ಸ್ವಾಗತಿಸಿದರು. ಮಲ್ಲಿಕಾರ್ಜುನ ನಿರೂಪಿಸಿ, ಡಾ. ನಂದಗಿರಿ ಕನ್ನಳ್ಳಿ ವಂದಿಸಿದರು. ನಂತರ ಶಾಂತಗೌಡ ಮಾಲಿಪಾಟೀಲ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
--
ಮನುಷ್ಯನಲ್ಲಿ ಆಂತರಿಕ ಪರಿವರ್ತನೆ ಮುಖ್ಯ
ಕೆಂಭಾವಿ: ಮನುಷ್ಯ ಜೀವನದಲ್ಲಿ ಪರಿವರ್ತನೆ ಕಾಣುವುದು ಬಹಳ ಮುಖ್ಯ. ಇಂದಿನ ಆಧುನಿಕ ಜಗತ್ತಿನಲ್ಲಿ ಬಾಹ್ಯ, ಭೌತಿಕ ಪರಿವರ್ತನೆಯ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದು ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಆದ್ದರಿಂದ ಮನುಷ್ಯ ಆಂತರಿಕ ಪರಿವರ್ತನೆ ಮಾಡಿಕೊಳ್ಳುವುದು ಅವಶ್ಯ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪುರಾಣ ಸುವರ್ಣ ಮಹೋತ್ಸವದ ಸಂಪನ್ನ ಕಾರ್ಯಕ್ರಮದಲ್ಲಿ 'ನಂಬು ಅಂಬಿಗನ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಹರಜನ್ಮ ಪಡೆಯುವುದೇ ಪರಿವರ್ತನೆ: ಪುರಾಣ ಶಾಸ್ತ್ರ ಕೇಳುವುದರಿಂದ ಮನುಷ್ಯ ಆಂತರಿಕ ಪರಿವರ್ತನೆಯಾಗಲು ಸಾಧ್ಯ. ಅಂಗಿಯ ಗುಣಗಳನ್ನು ಹೊಂದದೇ ಲಿಂಗಿಯ ಗುಣಗಳನ್ನು ಹೊಂದು, ನರಜನ್ಮದಿಂದ ಹರಜನ್ಮ ಪಡೆಯುವುದೇ ಪರಿವರ್ತನೆ ಎಂಬ ಅಕ್ಕಮಹಾದೇವಿಯ ವಚನದಂತೆ ಪ್ರತಿಯೊಬ್ಬರೂ ಜೀವನದಲ್ಲಿ ಪರಿಶುದ್ಧವಾದ ಮನಸ್ಸಿನಿಂದ ಪರಿವರ್ತನೆ ಹೊಂದಿ ದೇವರು ಹಾಗೂ ಗುರುಗಳ ಮೇಲೆ ಭಕ್ತಿಯ ನಂಬಿಕೆಯನ್ನಿಟ್ಟು ನಡೆದರೆ ನಮಗೆ ಜೀವನದ ಪ್ರತಿ ಕ್ಷಣಗಳೂ ಅಮೂಲ್ಯವಾಗುತ್ತದೆ. ಶರಣರ ವಚನದಂತೆ 'ಸೋಹಂ ಎನ್ನದೇ ದಾಸೋಹಂ' ಎಂದು ನಡೆಯಬೇಕು. ಮನುಷ್ಯ ಅಹಂ ಗುಣಗಳಿಂದ ಮುಕ್ತನಾಗಿ ದಾಸೋಹದ ಗುಣಗಳನ್ನು ಹೊಂದಬೇಕಾದರೆ ದೇವರನ್ನು ನಂಬಿ ಜೀವನ ಸಾಗಿಸಬೇಕೆಂದು ಹೇಳಿದರು.
ಸಮರೋಪ ಸಮಾರಂಭದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರೇಮಠದ ಚನ್ನಬಸವ ಸ್ವಾಮೀಜಿ, ಪಂ ಬಸವರಾಜ ಶಾಸ್ತ್ರಿಗಳು, ಅಮೊಗಪ್ಪ ಶರಣರು, ಖೈರಾವಡಗಿ ಶರಣರು, ಮಲ್ಲಯ್ಯ ಸ್ವಾಮೀಜಿ ಇದ್ದರು.
ಅಧ್ಯಕ್ಷತೆಯನ್ನು ಲಿಂಗನಗೌಡ ಮಾಲಿಪಾಟೀಲ ವಹಿಸಿದ್ದರು. ಸಿದ್ದನಗೌಡ ಪೊಲೀಸ್ ಪಾಟೀಲ, ಶಾಂತಗೌಡ ಪೊಲೀಸ್ ಪಾಟೀಲ ಇದ್ದರು. ವಾಮನರಾವ ದೇಶಪಾಂಡೆ ಸ್ವಾಗತಿಸಿದರು. ಡಾ. ವೆಂಕನಗೌಡ ನಿರೂಪಿಸಿದರು. ಮಲಕನಗೌಡ ಪೊಲೀಸ್ ಪಾಟೀಲ ವಂದಿಸಿದರು. ನಂತರ ಬೆಂಗಳೂರಿನ ವೆಂಕಟೇಶ ಆಲಕೋಡ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

