ಗುಲ್ಬರ್ಗಾ

ಚುನಾವಣೆಗೆ ವಿಡಿಯೋ ಕಣ್ಗಾವಲು ತಂಡ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.4
ವಿಧಾನಸಭೆ ಚುನಾವಣೆ- 2013ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ನಡೆಸುವ ಸಭೆ, ಮೆರವಣಿಗೆ ಮತ್ತು ಸೂಕ್ಷ್ಮ ಘಟನಾವಳಿಗಳನ್ನು ಚಿತ್ರೀಕರಿಸಲು ವಿಡಿಯೋ ಕಣ್ಗಾವಲು ತಂಡ ರಚಿಸುವಂತೆ ಭಾರತ ಚುನಾವಣಾ ಆಯೋಗವು ನಿರ್ದೇಶಿಸಿದೆ.
9 ವಿಧಾನಸಭಾ ಕ್ಷೇತ್ರಗಳಿಗೆ ಕಣ್ಗಾವಲು ತಂಡ ರಚಿಸಲಾಗಿದ್ದು, ಕ್ಷೇತ್ರ ಹಾಗೂ ನೋಡಲ್ ಅಧಿಕಾರಿಗಳ ವಿವರ... ಗುಲ್ಬರ್ಗ ಉತ್ತರ- ಸಿಡಿಪಿಒ ತಿಪ್ಪಣ್ಣ ಸಿರಸಗಿ, ಗುಲ್ಬರ್ಗ. ಗುಲ್ಬರ್ಗ ದಕ್ಷಿಣ- ಎಎಚ್‌ಒ ಮಲ್ಲೇಶಪ್ಪ. ಗುಲ್ಬರ್ಗ ಗ್ರಾಮೀಣ- ಎಎಚ್‌ಒ(ಆರ್‌ಎಸ್‌ಕೆ) ಲಾಲಪ್ಪ, ಪಟ್ಟಣ.
ಜೇವರ್ಗಿ- ಬಿಇಒ ಗುರಪ್ಪ ಗುಂಡಗುರ್ತಿ, ಜೇವರ್ಗಿ. ಆಳಂದ- ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ, ಆಳಂದ. ಅಫಜಲ್ಪುರ- ಶಂಕರ ಪಟವಾರಿ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಅಫಜಲ್ಪುರ. ಚಿತ್ತಾಪುರ- ಇಒ(ತಾಪಂ) ಸುರೇಶ ಬಿರಾದಾರ, ಚಿತ್ತಾಪುರ. ಸೇಡಂ- ಬಿಇಒ ಶಿವಶರಣಪ್ಪ ಕೋಬಾಳ, ಗುಲ್ಬರ್ಗ. ಚಿಂಚೋಳಿ- ಸಹಾಯಕ ಎಎಚ್‌ಒ ಮುನಿಚಲುವಯ್ಯ ಟಿ.ಇ. ಚಿಂಚೋಳಿ.
ತಂಡವು ಕಾಲಕಾಲಕ್ಕೆ ಫ್ಲೈಯಿಂಗ್ ಸ್ಕ್ವಾಡ್, ಲೆಕ್ಕಪತ್ರ ವೀಕ್ಷಣಾ ತಂಡ ಹಾಗೂ ಲೆಕ್ಕಪತ್ರ ತಪಾಸಣಾ ತಂಡ ಹಾಗೂ ಚುನಾವಣಾಧಿಕಾರಿಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ವಯ ಕಾರ್ಯನಿರ್ವಹಿಸುತ್ತದೆ.

ಮಾನಿಟರಿಂಗ್ ಸೆಲ್ ರಚನೆ
ಗುಲ್ಬರ್ಗ: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಮೇ 5ರಂದು ನಡೆಯಲಿದೆ. ಭಾರತ ಚುನಾವಣಾ ಆಯೋಗದ ಆದೇಶದಂತೆ ಸಾರ್ವಜನಿಕರಿಂದ ಬರುವ ದೂರು ಕರೆಗಳನ್ನು ಸ್ವೀಕರಿಸಿ ಕರೆಗಳ ವಿಷಯದ ಬಗ್ಗೆ ಅನುಬಂಧ-13ರಲ್ಲಿ ನಮೂದಿಸಿಕೊಂಡು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ದೂರು ಕರೆಗಳನ್ನು ಲೆಕ್ಕಪತ್ರ ವೀಕ್ಷಕರಿಗೆ ಹಾಗೂ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ದೂರುಗಳನ್ನು ಚುನಾವಣಾ ವೀಕ್ಷಕರಿಗೆ ತಕ್ಷಣ ತಿಳಿಸುವುದು ಮತ್ತು ದೂರುಗಳ ಒಂದು ಪ್ರತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಲಿದೆ.
ಈ ಕಾರ್ಯಕ್ಕಾಗಿ ಈ ಮುಂದೆ ತೋರಿಸಿದ ಅಧಿಕಾರಿಗಳನ್ನು ಚುನಾವಣಾ ಖರ್ಚು ಮಾನಿಟರಿಂಗ್ ಸೆಲ್ ಕಾರ್ಯ ನೋಡಿಕೊಳ್ಳಲು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಮೀಡಿಯಾ ಸರ್ಟಿಫಿಕೇಷನ್ ಸೆಂಟರ್- ಲಕ್ಷ್ಮೀನಾರಾಯಣ ಜಂಟಿ ಆಯುಕ್ತರು ಕಮರ್ಷಿಯಲ್ ಟ್ಯಾಕ್ಸ್ ಗುಲ್ಬರ್ಗ. ಮಾಧ್ಯಮ ಮತ್ತು ಮಾಹಿತಿ ಸೆಲ್- ಬಿರಾದಾರ ಎಸ್‌ಒ ಗುಲ್ಬರ್ಗ. ಜಿಲ್ಲಾ ಲೆಕ್ಕಪತ್ರ ವೀಕ್ಷಣಾ ಸೆಲ್- ಪಟ್ವೆಗಾರ ಸಿಎಒ ಜಿಲ್ಲಾ ಪಂಚಾಯಿತಿ, ಪ್ರವೀಣ ಪ್ರಿಯಾ ಜಂಟಿ ನಿರ್ದೇಶಕರು ಎಚ್‌ಕೆಡಿಬಿ ಮತ್ತು ಶ್ರೀಕಾಂತ ದೇಶಮುಖ ಎಸಿಎಫ್ ಎಚ್‌ಕೆಡಿಬಿ ಗುಲ್ಬರ್ಗ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.