ಗುಲ್ಬರ್ಗಾ

ಉಗಾದಿಯಂದೇ ಹೊಸ ವರ್ಷ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.8
ಉಗಾದಿ ಹಬ್ಬವು ಹಿಂದೂಗಳ ನೂತನ ವರ್ಷಾಚರಣೆಯ ದಿನವಾಗಿದ್ದು, ಸಾರ್ವತ್ರಿಕವಾಗಿ ಏ.11ರಂದು ಉಗಾದಿ ಆಚರಣೆಗೆ ಹಿಂದೂ ಜನಜಾಗೃತಿ ಸಮಿತಿ ನಿರ್ಧರಿಸಿದೆ.
ಈ ವಿಷಯವನ್ನು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಮಿತಿಯ ಪ್ರಮುಖರಾದ ಸುವರ್ಣ ಅವರು, ಪಾಶ್ಚಾತ್ಯರು ಜ.1 ರಂದು ಹೊಸ ವರ್ಷ ಆಚರಿಸುತ್ತಾರೆ. ಆದರೆ ಹಿಂದೂಗಳ ಸಂಪ್ರದಾಯದಲ್ಲಿ ಉಗಾದಿ ಹಬ್ಬವೇ ನೂತನ ವರ್ಷದ ಆರಂಭದವಾಗಿದೆ. ಈ ಹಿನ್ನೆಲೆಯಲ್ಲಿ ಉಗಾದಿ ಹಬ್ಬದ ಸಂಭ್ರಮದಲ್ಲಿಯೇ ನೂತನ ವರ್ಷಾಚರಣೆಗೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಜಾಗೃತಿ ಮೂಡಿಸುವ ಕಾರ್ಯಕ್ರಮ: ಸಾರ್ವತ್ರಿಕ ಉಗಾದಿ ಹಬ್ಬದ ಆಚರಣೆ ಸಂದರ್ಭದಲ್ಲಿ ಸಮಿತಿಯಿಂದ ನಗರದ ವಿವಿಧ ದೇವಾಲಯಗಳಲ್ಲಿ ಹೊಸ ವರ್ಷದ ಅಂಗವಾಗಿ ಧರ್ಮಧ್ವಜ ಹಾರಿಸುವುದು, ಹಬ್ಬವನ್ನು ಶಾಸ್ತ್ರೋಕ್ತ ರೀತಿಯಲ್ಲಿ ಸ್ವಾಗತಿಸುವುದು, ಹಿಂದೂಗಳಲ್ಲಿ ಹೊಸ ವರ್ಷದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ಉಗಾದಿ ಹಬ್ಬದಂದೇ ಹೊಸ ವರ್ಷ ಆರಂಭಗೊಳ್ಳುತ್ತದೆ ಎಂದು ಹೇಳಲು ಅನೇಕ ಐತಿಹಾಸಿಕ ಕಾರ್ಯಕ್ರಮಗಳಿವೆ. ಉಗಾದಿ ದಿನದಂದೇ ಶ್ರೀರಾಮನು ವಾಲಿಯನ್ನು ವಧಿಸಿದ್ದು, ಅದೇ ರೀತಿ ರಾವಣನನ್ನು ಸಂಹಾರ ಮಾಡಿ ಮರಳಿದ ದಿನವಿದು ಎಂದು ಅವರು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ಆರಂಭಿಸಿದ್ದು, ಕರಪತ್ರ ಹಂಚಿಕೆ, ಭಿತ್ತಿಪತ್ರ ಅಂಟಿಸುವುದು, ಪ್ರಚಾರ ಕಾರ್ಯ ನಡೆಸುವುದು ಜಾಗೃತಿ ಅಭಿಯಾನದ ಭಾಗವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿಜಯಶ್ರೀ, ಕೃಷ್ಣವೇಣಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.