ಅಂಬೇಡ್ಕರ್ ಜಯಂತಿ ಆಚರಿಸಲು ಸೂಚನೆ
ಯಾದಗಿರಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಏ. 14ರಂದು ಡಾ. ಅಂಬೇಡ್ಕರ್ ಅವರ ಜಯಂತಿಯನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಸರಳ ರೀತಿಯಲ್ಲಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಸೂಚಿಸಿದ್ದಾರೆ. ವಿಧಾನಸಭೆಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಪ್ರಯುಕ್ತ ಚುನಾವಣೆ ಮುಕ್ತಾಯವಾಗುವವರೆಗೆ ಯಾವುದೇ ಸಭೆ ಸಮಾರಂಭಗಳನ್ನು ಏರ್ಪಡಿಸದೆ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ, ಗ್ರಾಪಂಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಹಾಗೂ ಕಡ್ಡಾಯವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗುರುಪಾಟೀಲ ನೇತೃತ್ವಕೆಜೆಪಿಗೆ ಸೇರ್ಪಡೆ
ಶಹಾಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪರ ಕೆಲಸಗಳನ್ನು ಮೆಚ್ಚಿ ಯುವ ನಾಯಕ ಹಾಗೂ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ನೇತೃತ್ವದಲ್ಲಿ ಇಲ್ಲಿಯ ದಿಗ್ಗಿ ಬೇಸ್ ತಳವಾರ ಓಣಿಯ ಹಲವು ಪ್ರಮುಖರು ಕೆಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಗುರು ಪಾಟೀಲ, ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಆದ್ದರಿಂದ ಎಲ್ಲೆಡೆ ತಮಗೆ ಅಭೂತವೂರ್ಪ ಸ್ವಾಗತ ದೊರೆಯುತ್ತಿದೆ. ಎಲ್ಲಾ ಗ್ರಾಮಗಳಲ್ಲಿ ಕೆಜೆಪಿಯನ್ನು ಬೆಂಬಲಿಸಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನತೆ ಮಾಜಿ ಸಿಎಂ ಯಡಿಯೂರಪ್ಪನವರ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಕೆಜೆಪಿ ಬಾವುಟ ಹಾರುವುದರಲ್ಲಿ ಸಂಶಯವಿಲ್ಲ ಎಂದರು. ಅಶೋಕ ತಳವಾರ, ಶರಣು ತಳವಾರ, ಶಿವಶರಣ ತಳವಾರ, ಪ್ರಕಾಶ, ಭೀಮರಾಯ, ದೇವಿಂದ್ರಪ್ಪ, ರಘು, ಮಲ್ಲಿನಾಥ ಬಡೆಗೇರಾ, ಮಂಜು, ಜೈಭೀಮ, ಈಶ್ವರ, ಶಿವು, ರಾಜು, ನಾಗು, ವಿಜಯ, ರವಿ, ಮಾನಪ್ಪ, ನಾಗು ಬಿ.ತಳವಾರ, ನಾಗೇಶ, ಈಶಪ್ಪ, ನಿಂಗು ಎನ್.ತಳವಾರ, ಶರಣು., ಭೀಮರಾಯ, ಶರಬಪ್ಪ ಬಿ, ಕಲ್ಯಾಣ ತಳವಾರ ಇತರರು ಕೆಜೆಪಿ ಸೇರಿದರು.
ಹಲವರು ಕರವೇಗೆ
ಶಹಾಪುರ: ವಿಧಾನಸಭೆ ಚುನಾವಣೆಗೆ ಕರವೇ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ ನೇತೃತ್ವದಲ್ಲಿ ದಿಗ್ಗಿ ಗ್ರಾಮದ ಹಲವು ಯುವಕರು ಕರವೇ ಸೇರ್ಪಡೆಯಾದರು. ನಾಡು- ನುಡಿ ಜಾಗೃತಿ, ಅಭಿವೃದ್ಧಿಯತ್ತ ಕಾಳಜಿ ವಹಿಸಲಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಕರಬಸಪ್ಪ ಬಿರಾಳ, ಅಬ್ದುಲ್, ಸತೀಶ ವೇಂಕಟೇಶ ಕಾಶಿರಾಜ ಇತರರಿದ್ದರು. ಸೋಮಶೇಖರ ಗುಡಿಮನಿ, ಶರಣು ಶಖಾಪುರ, ವಿಶ್ವನಾಥ, ಚನ್ನು, ರಘು ಕುಮಾರ, ಚಂದ್ರಶೇಖರ, ಶೇಖರ, ಸಾಯಬಣ್ಣ, ಪರಶು, ಚನ್ನು, ದೇವಪ್ಪ, ಶೇಖಪ್ಪ, ಭೀಮಪ್ಪ, ಅಂಬರೇಶ, ಭೀಮು ಸೇರ್ಪಡೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

