'ಕಲಾವಿದರಲ್ಲಿ ಅಂತರ್ ದೃಷ್ಟಿ ಅಗತ್ಯ'
ಗುಲ್ಬರ್ಗ: ಕಲಾವಿದರಲ್ಲಿ ಅಂತರ್ ದೃಷ್ಟಿ ಅಗತ್ಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಮೂಹ ಮಾಧ್ಯಮ ಹಾಗೂ ದೃಶ್ಯಕಲೆ ವಿಭಾಗದ ಮುಖ್ಯಸ್ಥ ಡಾ. ಪಿ.ಕೆ. ಖಂಡೋಬಾ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಬಂಬೂ ಬಜಾರ್ನ ವ್ಹಿಟಿಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋದಲ್ಲಿ ದಿ ಇಂಡಿಯನ್ ರಾಯಲ್ ಅಕಾಡೆಮಿ, ತುಳಜಾರಾಂ ನಾಯಿಂದ್ರಕರ್ ವಿವಿಧೋದ್ದೇಶ ಸಹಕಾರ ಸೇವಾ ಸಂಘ ಹಾಗೂ ವ್ಹಿಟಿಎನ್ ಸ್ಟುಡಿಯೋ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಲಿಯೋನಾರ್ಡ್ ಡಾ. ವಿಂಚಿ ಜನ್ಮ ದಿನಾಚರಣೆ ನಿಮಿತ್ತ ವಿಶ್ವಕಲಾ ದಿನಾಚರಣೆ ಕಾರ್ಯಕ್ರಮದ ಚಿತ್ರಕಲಾ ಪ್ರದರ್ಶನ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಲೆಯಲ್ಲಿ ಆಕರ್ಷಣೆ ಶಕ್ತಿ ಇದೆ. ಯಾವುದೇ ಒಂದು ಕಲೆಯನ್ನು ನೋಡಿದರೆ ಅದರ ಕುರಿತು ಕಣ್ಣಿಗೆ ಕಟ್ಟುವಂತೆ ಎಲ್ಲ ಮರ್ಮವನ್ನು ತಿಳಿಸುತ್ತದೆ. ಆದ್ದರಿಂದ ಕಲಾವಿದರಲ್ಲಿ ಅಂತರ್ ದೃಷ್ಟಿ ಬೇಕು ಎಂದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಯಶವಂತ ಹಿಬಾರೆ ಮಾತನಾಡಿ, ಕಲಾವಿದರು ತುಂಬಾ ಪರಿಶ್ರಮ ಪಡಬೇಕು. ವಿಶ್ವಕಲಾ ದಿನವನ್ನು ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಹಿರಿಯ ಚಿತ್ರ ಕಲಾವಿದ ಹಾಗೂ ದಿ ಐಡಿಯಲ್ ಫೈನ್ ಆರ್ಟ್ ಕಾಲೇಜಿನ ಪ್ರಾಚಾರ್ಯ ಬಸವರಾಜ ಜಾನೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿತ್ರಕಲಾ ಪ್ರದರ್ಶನದಲ್ಲಿ ವಿಜೇತರಾದ ಚೇತನ್ ಕೆರೂರ್, ವೀರೇಶ ರಟಕಲ್, ದ್ರಾಕ್ಷಾಯಣಿ ಇನಾಂದಾರ, ಸೂಕ್ಷತಾ ಬಿರಾದಾರ, ತೇಜಸ್ವಿನಿ ರೆಡ್ಡಿ, ಮಹೇಶ ಅಂಗಡಿ, ನಿಜಲಿಂಗಪ್ಪ ಮುಗಳಿ, ಕೀರ್ತಿ ಮೋಹನ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರದರ್ಶನದಲ್ಲಿ ಪಾಲ್ಗೊಂಡ ಕಲಾವಿದರಿಗೆ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಂ. ನೀಲಾ, ನಾರಾಯಣರಾವ ಭೂಸಾಳೆ, ಮೊಹ್ಮದ್ ಅಯಾಜುದ್ದೀನ್ ಪಟೇಲ್, ಡಾ. ಕಾಶಿನಾಥ, ಡಾ. ಎಂ.ಡಿ. ಮಿಣಜಗಿ, ಡಾ. ವಿಶ್ವೇಶ್ವರಿ ತಿವಾರಿ, ಅಪ್ರೆಂಟಿಸಿಪ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಡಾ. ರೆಹಮಾನ್ ಪಟೇಲ್ ಸ್ವಾಗತಿಸಿದರು. ಎಂ. ಸಂಜೀವ ಕಾರ್ಯಕ್ರಮ ನಿರೂಪಿಸಿದರು. ಛಾಯಾಗ್ರಾಹಕ ನಾರಾಯಣ ಜೋಶಿ ವಂದಿಸಿದರು. ಕಲಾ ವಿದ್ಯಾರ್ಥಿಗಳು ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

