ಗುಲ್ಬರ್ಗಾ

'ಅಬ್ಬೆತುಮಕೂರು ಕರ್ನಾಟಕದ ಕಾಶಿ'

Published On :

ಯಾದಗಿರಿ: ವಿಶ್ವಾರಾಧ್ಯರು ಪಂಡಿತರಲ್ಲಿಯೇ ಘನ ಪಂಡಿತರು. ಅವರು ನಡೆದಾಡುವ ಕಾಶಿ ವಿಶ್ವರಾಧ್ಯರಾಗಿದ್ದರು.  ಅವರು ನೆಲೆಸಿದ ಅಬ್ಬೆತುಮಕೂರು ಇಂದು ಕರ್ನಾಟಕದ ಕಾಶಿಯಾಗಿದೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ನುಡಿದರು.
ಅಬ್ಬೆತುಮಕೂರಿನ ಸಿದ್ದ ಸಂಸ್ಥಾನದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಮಹಾ ರುದ್ರಯಾಗದ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಹಿಂದಿನ ಕಾಲದ ರಾಜಪ್ರಭುತ್ವದಲ್ಲಿ ಮಹಾರಾಜರು ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ ಎಂದು ಯಜ್ಞ ಯಾಗಗಳನ್ನು ಮಾಡುತ್ತಿದ್ದರು. ಇಂದಿನ ಪ್ರಜಾಪ್ರಭುತ್ವದಲ್ಲಿ ಅಬ್ಬೆತುಮಕೂರಿನ ಪೀಠಾಧಿಪತಿ ಡಾ.ಗಂಗಾಧರ ಶ್ರೀ  ಮನುಕುಲದ ಉದ್ಧಾರಕ್ಕಾಗಿ, ಲೋಕಕಲ್ಯಾಣಕ್ಕಾಗಿ ಮೂರು ದಿನದ ಮಹಾರುದ್ರಯಾಗ ಕೈಗೊಂಡಿರುವುದು ಸ್ತುತ್ಯಾರ್ಹ ಎಂದು ಜಗದ್ಗುರುಗಳು ತಿಳಿಸಿದರು.
ಪರೋಪಕಾರಿಗಳಾಗಬೇಕು: ಜಗವನ್ನು ಬೆಳಗುವ ಸೂರ್ಯ, ಶೀತವನ್ನು ನೀಡುವ ಚಂದ್ರ, ಮಳೆಯನ್ನು ಸುರಿಸುವ ಮೇಘಗಳು, ಪರೋಪಕಾರದ ಪ್ರತೀಕಗಳಾಗಿವೆ. ಪ್ರಕಾಶ, ಶೀತ, ಮತ್ತು ಮಳೆಯನ್ನು ಸುರಿಸುವ ಸೂರ್ಯ, ಚಂದ್ರ, ಮೇಘ ಗಳಂತೆ ಮನುಷ್ಯರಾದ ನಾವು ಪರೋಪಕಾರಿಗಳಾಗಬೇಕು. ಇಲ್ಲಿ ನಡೆಯುತ್ತಿರುವ ಸಮಾರಂಭ ಪರೋಪಕಾರದ ಸಂಕೇತವಾಗಿದೆ ಎಂದು ನುಡಿದರು.
ಸೌಹಾರ್ದತೆ: ಯಾಗಗಳು ವ್ಯರ್ಥವೆಂದು ಭಾವಿಸಬಾರದು. ಯಾಗಗಳನ್ನು ಕೈಗೊಳ್ಳುವುದರಿಂದ ಪರಿಸರದಲ್ಲಿ ಪಾವಿತ್ರ್ಯತೆ, ಮನಸ್ಸಿನ ಕಲ್ಮಷಗಳು ದೂರವಾಗುತ್ತವೆ  ಎಂದರು.
ಜ್ಞಾನಿಯ ಪೂಜೆಯಿಂದ ಭೋಗ, ಭ್ಯಾಗ್ಯಗಳು ಪ್ರಾಪ್ತವಾಗುತ್ತವೆ. ಭೇದ ಭಾವ ಮರೆತು ಐಕ್ಯ ಭಾವ ಹೊಂದಬೇಕು. ಕಾಯಕದಿಂದ ಗಳಿಸಿದ ಹಣ, ಧರ್ಮ ಕಾರ್ಯಕ್ಕೆ ದಾಸೋಹ ಮಾಡಿ ಪುಣ್ಯಾತ್ಮರಾಗಬೇಕೆಂದರು. ವೇದಿಕೆ ಮೇಲೆ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಾಧೀಶರು, ಪೂಜ್ಯರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ವಿಶ್ವಾರಾಧ್ಯರ 131ನೇ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು. ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.