ಗುಲ್ಬರ್ಗಾ

'ಛಲವಿದ್ದರೆ ಗುರಿ ಸಾಧನೆ ಸಾಧ್ಯ'

Published On :

ಜೇವರ್ಗಿ: ಮನುಷ್ಯನಲ್ಲಿ ಛಲವಿದ್ದಾಗ ಗುರಿ ಹೊಂದಲು ಸಾಧ್ಯ. ಟಿಪ್ಪುಸುಲ್ತಾನ್ ಅವರು ಧೈರ್ಯ, ಸಾಹಸದ ಜೊತೆಗೆ ಛಲಗಾರರಾಗಿದ್ದರು. ಆ ನಿಟ್ಟಿನಲ್ಲಿ ಅವರು ತಮ್ಮ ಗುರಿ ತಲುಪಲು ಸಾಧ್ಯವಾಗಿದೆ ಎಂದು ಹುಸೇನ್ ಪಟೇಲ್ ಹೂಡಾ ಅಭಿಪ್ರಾಯಪಟ್ಟರು.
ತಾಲೂಕಿನ ಆಂದೋಲಾ ಗ್ರಾಮದಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತರಂಗದ ಆಂದೋಲಾ ಗ್ರಾಮ ಶಾಖೆ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಘಟನೆಯನ್ನು ಬೆಳೆಸಲು ಯುವಕರಲ್ಲಿ ಧೈರ್ಯ, ಛಲ, ಗುರಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಸೈಯದ್ ಇಸ್ಮಾಯಿಲ್ ಸಜ್ಜಾದೆ ನಶೀನ್ ಸಾನ್ನಿಧ್ಯ ವಹಿಸಿದ್ದರು. ಸಂಜಯಸಿಂಗ್ ಜ್ಯೋತಿ ಬೆಳೆಗಿಸಿದರು. ಗೌಡಪ್ಪಗೌಡ ಪೋಲಿಸ್ ಪಾಟೀಲ್, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್ ಆಂದೋಲಾ,ದಾವೂದ್ ಇಕ್ಬಾಲ್ ಅಹ್ಮದ್, ಕಾಸಿಂ ಪಟೇಲ್ ಜೇವರ್ಗಿ, ಭಗವಂತರಾಯ ಬೆಣ್ಣೂರ ಉಪನ್ಮಾಸ ನೀಡಿದರು. ಮಹಿಬೂಬ್ ಮನಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಸ್ಮಾನ ಸಿಪಾಯಿ, ಮುನೀರಪಾಶಾ ಕಳ್ಳಿ, ಅಮೀನ್ ಪಟೇಲ್, ಬಾಬಾ ಫರೀದ್, ರಜಾಕ್ ಮನಿಯಾರ್, ನಬಿ ಖ್ಯಾತನಾಳ, ಸೈಯದ್ ಹುಸೇನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.