ನಾಲವಾರ ಶ್ರೀಗಳಿಗೆ ಗುರುವಂದನೆ
ಗುಲ್ಬರ್ಗ/ಶಹಾಬಾದ್: ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ನಾಲವಾರದ ಡಾ. ಸಿದ್ದತೋಟೇಂದ್ರ ಶಿವಾಚಾರ್ಯರಿಗೆ ಕುಲಕುಂದಿ ಗ್ರಾಮದ ವೀರೇಶ್ವರ ಜಾತ್ರೆ ಹಾಗೂ ದೀಪೋತ್ಸವ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಬೆಳ್ಳಿ ಕಿರೀಟ, ನಾಣ್ಯಗಳಿಂದ ತುಲಾಭಾರದ ಗುರುವಂದನೆ ಕಾರ್ಯಕ್ರಮ ಶುಕ್ರವಾರ ನಡೆಸಲಾಯಿತು.
ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಲು ಆಗಮಿಸಿದ ಶ್ರೀಗಳಿಗೆ ಗ್ರಾಮದ ವತಿಯಿಂದ ಪಾದಪೂಜೆ ನಡೆಸಿ, ಗ್ರಾಮದ ಮುಖ್ಯ ಬೀದಿಗಳಲ್ಲಿ ಕುದುರೆ ಮೇಲೆ ಮೆರವಣಿಗೆ ನಡೆಸಲಾಯಿತು.
ವೀರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೀಪೋತ್ಸವ ನಡೆಯಿತು.
ಗ್ರಾಮಸ್ಥರ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗ್ರಾಮಸ್ಥರು ಭಕ್ತಿಯಿಂದ ಅರ್ಪಿಸಿದ ಕಿರೀಟ, ತಲಾಭಾರದ ಭಾರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕುಲಕುಂದಿ ಕ್ಷೇತ್ರ ಅಭಿವೃದ್ಧಿಗೆ ನಾಲವಾರ ಮಠದಿಂದ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಸರ್ಕಾರದಿಂದ ಉತ್ತಮ ರಸ್ತೆ ನಿರ್ಮಾಣವಾಗಿದೆ.
ಮಠಕ್ಕೆ ಆಗಮಿಸುವ ಭಕ್ತರು ನದಿ ಸ್ನಾನಕ್ಕೆ ಬಂದು ವಿಶ್ರಾಂತಿ ತೆಗೆದುಕೊಳ್ಳಲು ಗಿಡಮರಗಳಿಂದ ಒಂದು ಸುಂದರ ತೋಟ, ಗೋವುಗಳಿಗಾಗಿ ಗೋಶಾಲೆ ನಿರ್ಮಿಸಲಾಗುವುದು ಎಂದು ಹೇಳಿದರು.
ಗ್ರಾಮದ ಮುಖಂಡರಾದ ವಿರುಪಾಕ್ಷರೆಡ್ಡಿ ಮಸ್ಟೂರ್, ಶಿವಕುಮಾರಗೌಡ ಕುಲಕುಂದಿ, ಶಿವರೆಡ್ಡಿಗೌಡ ಮಾಲಿಪಾಟೀಲ್, ಸಾಹೇಬಗೌಡ ಪೊಲೀಸ್ ಪಾಟೀಲ್, ಲಿಂಗಯ್ಯ ಸ್ವಾಮಿ, ವಿರುಪಾಕ್ಷಯ್ಯ ಗೌಡ, ವೀರೇಶ ಪೂಜಾರಿ, ಮಲ್ಲಾರೆಡ್ಡಿ ಕೆ.ಮಲ್ಲಾ, ಮಹಾದೇವ ಗವ್ಹಾರ, ಸಿದ್ದಲಿಂಗ ಸ್ವಾಮಿ ಯನಗುಂಟಿ, ಸೋಮಶೇಖರ ಲಾಡ್ಲಾಪುರ ಇದ್ದರು.
ಟಿ.ಎಂ. ಬಸವರಾಜಯ್ಯ ಶಾಸ್ತ್ರಿಗಳು ಗದಗ ಅವರಿಂದ ಪುರಾಣ ಮಂಗಲ ನಡೆಯಿತು. ಶರಣಕುಮಾರ ಜಾಲಹಳ್ಳಿ, ಕಾಶೀನಾಥ ಪ್ರಾರ್ಥಿಸಿದರು. ಗುರುನಾಥ ರೆಡ್ಡಿ ಸ್ವಾಗತಿಸಿದರು. ಶರಣಯ್ಯ ಕೊಂಚೂರ, ಶಂಕರ ಗವಾಯಿ ಕುಲಕುಂದಿ, ನಾರಾಯಣ ಅವರಿಂದ ಸಂಗೀತ ನಡೆಯಿತು.
ಚಂದ್ರಶೇಖರ ಗೋಗಿ, ಸಾಯಬಣ್ಣ ಭಜಂತ್ರಿ ಅವರಿಂದ ಕೊಳಲು ವಾದನ ನಡೆಯಿತು. ಚಂದ್ರಶೇಖರಯ್ಯ ಹಿರೇಮಠ ತಬಲಾ ಸಾಥ್ ನೀಡಿದರು. ಸಿದ್ದುಗೌಡ ಪಾಟೀಲ್ ನಿರೂಪಿಸಿದರು. ಕಾಂತಮ್ಮ ಮಲ್ಲಣ್ಣ ಹಲಕರ್ಟಿ ಅವರಿಂದ ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

