ವಾಲ್ಮೀಕಿ, ಪ್ರಿಯಾಂಕ್, ಗುರುನಾಥ ಸೇರಿ 13 ಉಮೇದುವಾರಿಕೆ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.16
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ, ಕಾಂಗ್ರೆಸ್, ಕೆಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಇಲ್ಲಿಯವರೆಗೂ ಒಟ್ಟು 7 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಸಲಾಯಿತು.
ಕಾಂಗ್ರೆಸ್: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ 4 ನಾಮಪತ್ರಗಳು ಚುನಾವಣಾಧಿಕಾರಿ ಚಂದ್ರಶೇಖರ ದೊಡ್ಮನಿ ಅವರಿಗೆ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಭಾಗಣ್ಣಗೌಡ ಸಂಕನೂರ, ಅಜೀಜ್ ಸೇಟ್, ಶಿವರಾವ ಇದ್ದರು.
ಮೆರವಣಿಗೆ: ಕಾಂಗ್ರೆಸ್ ಕಚೇರಿಯಿಂದ ಹೊರಟ ಮೆರವಣಿಗೆಯಲ್ಲಿ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಡಾ. ಬಿ.ಜಿ. ಜವಳಿ, ಚಂದ್ರಶೇಖರ ಕಾಶಿ, ಬಸವರಾಜ ಪಾಟೀಲ್ ಬೆಳಗುಂಪಾ, ಸೈಯದ್ ಜಫರುಲ್ ಹಸನ, ಈರಪ್ಪ ಬೋಯಿ ಇದ್ದರು.
ಕೆಜೆಪಿ: ಮಾಜಿ ಸಚಿವ ಸಿ. ಗುರುನಾಥ ಅವರು ಕೆಜೆಪಿ ಅಭ್ಯರ್ಥಿಯಾಗಿ 4 ನಾಮಪತ್ರ ಸಲ್ಲಿಸಿದರು. ಕೆಜೆಪಿ ರಾಜ್ಯ ಕಾರ್ಯದರ್ಶಿ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ನಗರ ಅಧ್ಯಕ್ಷ ಬಸವರಾಜ ಇಂಗಿನ್, ತಾಲೂಕು ಅಧ್ಯಕ್ಷ ಗೋಪಾಲ್ ರಾಠೋಡ, ಚಂದ್ರಶೇಖರ ಅವಂಟಿ ಇದ್ದರು. ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ: ಶಾಸಕ ವಾಲ್ಮೀಕಿ ನಾಯಕ ಅವರು ಬಿಜೆಪಿ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದರು. ಜಿಲ್ಲಾ ಮುಖಂಡ ಮುಕುಂದ ದೇಶಪಾಂಡೆ, ಮಲ್ಲಿಕಾರ್ಜುನ ಎಮ್ಮೆನೊರ, ಚಂದ್ರಶೇಖರ ಪರಸರೆಡ್ಡಿ, ನೀಲಯ್ಯ ಸ್ವಾಮಿ, ಶರಣು ಜ್ಯೋತಿ ಇದ್ದರು.
ಅಕ್ಕಮಹಾದೇವಿ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ಶಂಕರ ಚವ್ಹಾಣ, ಶಶಿಕಲಾ ತೆಂಗಳಿ, ಬಸವರಾಜ ಪಂಚಾಳ, ಮಲ್ಲಿಕಾರ್ಜುನ ಶಿವಗೋಳ, ಶಶಿಕಾಂತ ಪಾಟೀಲ್, ತಮ್ಮಣ್ಣ ಡಿಗ್ಗಿ, ಡಾ. ಗುಂಡಣ್ಣ ಬಾಳಿ, ಸುರೇಶ ಬೆನಕನಳ್ಳಿ, ಬಾಲಾಜಿ ಬುರುಬುರೆ, ಅಶೋಕ ಸೂರ್ಯವಂಶಿ, ಸರ್ವೇಶ್ವರ ಹೂಗಾರ ಭಾಗವಹಿಸಿದ್ದರು.
ಪಕ್ಷೇತರ: ರಮಾದೇವಿ ರಾಜಕುಮಾರ ಮಾಡಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದರು. ಮಹೇಶ ಸಾಬಣ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದರು.
ಮಂಗಳವಾರ 2 ನಾಮಪತ್ರ: ಚಿತ್ತಾಪುರ ವಿಧಾನಸಭೆ ಮೀಸಲು ಕ್ಷೇತ್ರಕ್ಕೆ ಮಂಗಳವಾರ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ರವಿ ಯಲ್ಲಪ್ಪ ಕಾಂಬಳೆ ಅವರು ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಹಾಗೂ ಧನಲಕ್ಷ್ಮೀ ಫತೇಸಿಂಗ್ ರಾಠೋಡ ಅವರು ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ತಲಾ ಒಂದು ನಾಮಪತ್ರ ಸಲ್ಲಸಿದ್ದಾರೆ ಎಂದು ಚುನಾವಣಾಧಿಕಾರಿ ಚಂದ್ರಶೇಖರ ದೊಡ್ಮನಿ, ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಎಸ್.ಎಫ್. ಸಂಜೀವಣ್ಣನವರ್ ತಿಳಿಸಿದ್ದಾರೆ. ಇದುವರೆಗೆ 7 ಅಭ್ಯರ್ಥಿಗಳಿಂದ 13 ನಾಮಪತ್ರಗಳು ಸಲ್ಲಿಸಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

