ಸುಭಾಷ ಗುತ್ತೇದಾರ ಬಿರುಸಿನ ಪ್ರಚಾರ
ಆಳಂದ: ತಾಲೂಕಿನ ಹಲವು ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಸುಭಾಷ ಗುತ್ತೇದಾರ ಅವರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಅಧಿಕಾರವಧಿಯಲ್ಲಿ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಬಾಕಿ ಉಳಿದ ಕೆಲಸ ಮಾಡಲು ಮತದಾನದ ಮೂಲಕ ಅವಕಾಶ ನೀಡಬೇಕು. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಸುಧಾರಿಸಿಕೊಳ್ಳುತ್ತೇನೆ ಎಂದು ಶಾಸಕ ಗುತ್ತೇದಾರ ಅವರು ಮತದಾರರನ್ನು ಸೆಳೆಯಲು ಆರಂಭಿಸಿದ್ದಾರೆ.
ಖಜೂರಿ ವಲಯದ ತೆಲಾಕುಣಿ, ಚಿತಲಿ ಸಾಲೇಗಾಂವ, ಆಳಂದ, ಜಿಡಗಾ, ಕವಲಗಾ, ಮಾದನಹಿಪ್ಪರಗಾ ವಲಯದ ಮದಗುಣಕಿ, ಝಳಕಿ(ಬಿ), ಝಳಕಿ(ಕೆ)ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಮತ ನೀಡುವಂತೆ ಶಾಸಕರು ಮತದಾರರಲ್ಲಿ ಮನವಿ ಮಾಡಿದರು.
ಪ್ರಚಾರದಲ್ಲಿ ಮುಖಂಡರಾದ ಚಂದ್ರಾಮಪ್ಪ ಘಂಟೆ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಜಯಶ್ರೀ ಅಶೋಕ ಸಾವಳೇಶ್ವರ, ಮಾಜಿ ಸದಸ್ಯ ಸುಭಾಷ ರಾಠೋಡ, ಮುಖಂಡ ಶಿವುಪುತ್ರಪ್ಪ ಬೆಳ್ಳಿ, ತಾಪಂ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಸಿದ್ದಾರೂಢ ಸಮತಾಜೀವನ ಸುಭಾಷ ಫೌಜಿ ಸೇರಿದಂತೆ ಅನೇಕ ಮುಖಂಡರು ವಿವಿಧೆಡೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್ಗೆ ಸೇರ್ಪಡೆ: ಇದೇ ವೇಳೆ ಕಾಂಗ್ರೆಸ್-ಬಿಜೆಪಿ-ಕೆಜೆಪಿ ಪಕ್ಷಗಳ ಕೆಲ ಕಾರ್ಯಕರ್ತರು ಶಾಸಕ ಗುತ್ತೇದಾರ ಸಮ್ಮುಖದಲ್ಲಿ ಜೆಡಿಎಸ್ಗೆ ಸೇರ್ಪಡೆಯಾದರು. ತೆಲಾಕುಣಿಯಲ್ಲಿ ವಿಶ್ವನಾಥ ಎಂ.ಸಿಂಗೆ, ಶ್ರೀಕಾಂತ ಕಾಂಬಳೆ, ಸೂರ್ಯಕಾಂತ ಸಿಂಗೆ ಹಾಗೂ ಚಿತಲಿ, ಸಾಲೇಗಾಂವ ಗ್ರಾಮದಲ್ಲೂ ಕಾರ್ಯಕರ್ತರು ಹಾಗೂ ಕವಲಗಾ ಗ್ರಾಮದಲ್ಲಿ ಸತೀಶ ಮಠಪತಿ, ಲಕ್ಷ್ಮೀಪುತ್ರ ಬಿ. ಸಾಲೇಗಾಂವ, ಮೈನೋದ್ದೀನ್ ಬಬಲೇಶ್ವರ, ಶ್ರೀಶೈಲ್ ದೇಸಾಯಿ, ಬಾಳಪ್ಪ ಭೂಸನೂರ ಮುಂತಾದವರು ಜೆಡಿಎಸ್ ಸೇರ್ಪಡೆಯಾದರು.
ಝಳಕಿ ಗ್ರಾಮದಲ್ಲಿ ಶರಣಗೌಡ ನಿಂಬಾಣ, ಅಣ್ಣಾರಾಯ ಬಿರಾದಾರ, ಶಾಂತಪ್ಪ ಚಿತಲಿ, ವೀರಭದ್ರ ಬೀಳಗಿ, ಹಣಮಂತರಾಯ ದೇಗಾಂವ, ಮುಂಜುನಾಥ ದೇಗಾಂವ, ಭೋಗೇಶ ಪಡಶೆಟ್ಟಿ, ಸಂಜುಕುಮಾರ ಮುನ್ನಹಳ್ಳಿ, ಶ್ರೀಶೈಲ್ ಪಾಟೀಲ್ ಸೇರ್ಪಡೆಯಾದರು ಎಂದು ಜೆಡಿಎಸ್ ಪ್ರಚಾರ ಸಮಿತಿ ಕಾರ್ಯಕರ್ತ ಡಿ.ಕೆ. ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

