ಗುಲ್ಬರ್ಗಾ

ಸುಲೇಪೇಟ್ ವಲಯದಲ್ಲಿ ಬಿಜೆಪಿ ಅಲೆ: ಪಾಟೀಲ್ (ಸಂಕ್ಷಿಪ್ತ ಸುದ್ದಿ)

Published On :

ಚಿಂಚೋಳಿ: ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಪರವಾಗಿ ಸುಲೇಪೇಟ್ ವಲಯದಲ್ಲಿ ಅನುಕಂಪ ಅಲೆ ಬೀಸುತ್ತಿದೆ ಎಂದು ಸೇಡಂ ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್ ಕರೆ ನೀಡಿದರು. ಸೇಡಂ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಸುಲೇಪೇಟ್ ಗ್ರಾಮದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ 2 ಸಲ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಎಲ್ಲೆಡೆ ಈಗ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲರ ಬಗ್ಗೆ ಅನುಕಂಪ ಅಲೆ ಹೆಚ್ಚುತ್ತಿದೆ ಎಂದರು. 5 ವರ್ಷಗಳಲ್ಲಿ ಬಿಜೆಪಿ ಅನೇಕ ಅಭಿವೃದ್ಧಿಯನ್ನು ಮಾಡಿದೆ ಎಂದರು. ಬಿಜೆಪಿ ಹಿರಿಯ ಧುರೀಣ ಡಾ. ವಿಶ್ವನಾಥ ಪವಾರ, ವಿಷ್ಣುರಾವ ಬಸುದೆ, ಶರಣು ಕುಂಬಾರ, ನಾಗರಾಜ, ಅತೀಶ ಪವಾರ, ಮಹೇಶ ಬೆಳಮಗಿ ಬಿಜೆಪಿ ಸರ್ಕಾರದ ಬಗ್ಗೆ ವಿವರವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರುದನೂರ, ಚಿಂತಪಳ್ಳಿ, ಸುಲೇಪೇಟ್, ಭೂತಪುರ, ಗಡಿಕೇಶ್ವರ ಗ್ರಾಮದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಸುಲೇಪೇಟ್ ಗ್ರಾಮದ ಹಿರಿಯ ವಕೀಲ ಮಾಣಿಕರಾವ ಗುಲಗುಂಜಿ ಜೆಡಿಎಸ್ ತೊರೆದು ಬಿಜೆಪಿ ಸೇರಿದರು.
ಕೆಜೆಪಿಗೆ ವಕೀಲರ ಸೇರ್ಪಡೆ
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎಸ್.ಕೆ. ಕಾಂತಾ ಅವರ ಪರವಾಗಿ ಪಕ್ಷದ ಗುಲ್ಬರ್ಗ ಮಹಾನಗರ ಜಿಲ್ಲಾ ವಕೀಲರ ಘಟಕದ ಅಧ್ಯಕ್ಷ ವೈಜನಾಥ ಝಳಕಿ ನೇತೃತ್ವದಲ್ಲಿ ಕಾರ್ಯಕರ್ತರು ವಾರ್ಡ ನಂ.33ರಲ್ಲಿ (ಬ್ರಹ್ಮಪುರ ಬಡಾವಣೆಯಲ್ಲಿ) ಮತಯಾಚನೆ ಮಾಡಿದರು. ಬಡಾವಣೆಗೆ ಆಗಮಿಸಿ ಎಸ್.ಕೆ. ಕಾಂತಾರವರಿಗೆ ಆರತಿ ಬೆಳಗಿ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಕೀಲರ ಘಟಕದ ಪದಾಧಿಕಾರಿ ಆರ್.ಎನ್. ಬೂಶೆಟ್ಟಿ, ಪ್ರಭು ಹೊಸಮನಿ, ಸುಂದರಕರ್, ಅಶೋಕ ನೂಲಾ, ಎಸ್.ಜಿ. ಪುರಾಣಿಕ ಮಠ ಮತ್ತು ಅನೇಕರು ಇದ್ದರು.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ
ಜೇವರ್ಗಿ: ಶಾಸಕ ದೊಡ್ಡಪ್ಪಗೌಡ ಪಾಟೀಲ್ ಸಮ್ಮುಖ ತಾಲೂಕಿನ ಯಡ್ರಾಮಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ನಜೀರ್ ಅಲ್ಲಾಕೋಳ, ಉಸ್ಮಾನ್ ಭಾಗವಾನ, ಮೌಲಾಲಿ ಯಾಳಗಿ, ಸಾಹೇಬ್ ಪಟೇಲ್, ಬಂದಗಿಸಾಬ್, ದೌವಲಸಾಬ್, ಮಹ್ಮದ್ ಶೇಟ್, ರಫಿಕ, ಮಶಾಕಸಾಬ್ ಬಿಜೆಪಿ ಸೇರ್ಪಡೆಗೊಂಡರು. ಖಾದರಸಾಬ್ ಭಾಸಗಿ ಇತರರು ಇದ್ದರು.
ಜೆಡಿಎಸ್‌ಗೆ ರಾಜಿನಾಮೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಜೆಡಿಎಸ್ ಅಧ್ಯಕ್ಷ ಸುಭಾಷ ಚೌಧರಿ ತಮ್ಮ ಅಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷ ಗುತ್ತೇದಾರ ಅವರಿಗೆ ಬರೆದ ರಾಜಿನಾಮೆ ಪತ್ರದಲ್ಲಿ ತಮ್ಮ ವೈಯಕ್ತಿಕ ಕಾರಣಕ್ಕೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ವಿವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.