ಗುಲ್ಬರ್ಗಾ

ಲಿಂಗಾಯತ ಕಡೆಗಣನೆಗೈದ ವಲ್ಯಾಪುರೆ

Published On :

ಕ.ಪ್ರ. ವಾರ್ತೆ, ಚಿಂಚೋಳಿ, ಏ.24
ಚಿಂಚೋಳಿ ಮೀಸಲು ವಿಧಾನಸಭೆಗೆ ಸ್ಪರ್ಧಿಸಿದ ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರು ತಮ್ಮ ಅಧಿಕಾರಾವಧಿಯಲ್ಲಿ ಲಿಂಗಾಯತರನ್ನು ಸಂಪೂರ್ಣ ಮೂಲೆ ಗುಂಪು ಮಾಡಿ ತುಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ವೀರಶೈವ ಸಮಾಜದ ಮುಖಂಡ, ಹೈ.ಕ. ಹೋರಾಟ ಸಮಿತಿ ಸಂಚಾಲಕ ಚಿತ್ರಶೇಖರ ಪಾಟೀಲ್ ಆರೋಪಿಸಿದರು.
ವಲ್ಯಾಪುರೆ ಸೋಲೆ ಮುಖ್ಯ ಉದ್ದೇಶ: ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ ಅವರ ಪರವಾಗಿ ಚುನಾವಣಾ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ವಲ್ಯಾಪುರೆ ಸರ್ವಾಧಿಕಾರ ರಾಜಕಾರಣದಿಂದ ಬೇಸತ್ತು ವೈಜನಾಥ ಪಾಟೀಲ್ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕೆಜೆಪಿ ಅಭ್ಯರ್ಥಿ ವಲ್ಯಾಪುರೆ ಅವರನ್ನು ಸೋಲಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿಯ ಗೆಲುವಿನಲ್ಲಿ ಲಿಂಗಾಯತ ಸಮಾಜ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಆದರೆ 5 ವರ್ಷಗಳಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಕೆಜೆಪಿ ಅಭ್ಯರ್ಥಿ ಬಿಜಾಪುರ ಜೆಲ್ಲೆಯವರಾಗಿದ್ದಾರೆ. ಅವರ ಭ್ರಷ್ಟ ರಾಜಕಾರಣದಿಂದಾಗಿ ತಾಲೂಕಿನ 50ಕ್ಕಿಂತ ಹೆಚ್ಚು ಕೆಜೆಪಿ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಎಂದರು.
ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗಾಳಿ ಬೀಸುತ್ತಿದ್ದು ಕೆಜೆಪಿ, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ಕೆ.ಎಂ.ಬಾರಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಉಮೇಶ ಜಾಧವ ಮಾತನಾಡಿದರು. ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ, ಬಸಯ್ಯ ಗುತ್ತೇದಾರ, ಲಕ್ಷ್ಮಣ ಅವಂಟಿ, ಸುರೇಶ ಬಂಟಾ, ಜಗನ್ನಾಥ ಇದಲಾಯಿ, ನಾರಾಯಣ ಕೊಟ್ರಕಿ, ಹರ್ಷಾ ಗಾರಂಪಳ್ಳಿ, ಶ್ರೀನಿವಾಸ ಬಂಡಿ, ಈಶ್ವರ ನಾಯಕ, ಬಸವರಾಜ ಬಿರಾದಾರ, ಮೇಘರಾಜ ರಾಠೋಡ, ಬಸವರಾಜ ಮಲಿ, ಮೈನೋದ್ದೀನ್, ಜಗದೀಶ ಠಾಕೂರ, ದಿಲೀಪ್ ಜಾಧವ ಇತರರು ಪ್ರಚಾರದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.