ನಾಗಮ್ಮಾಳ್ರನ್ನು ಗೆಲ್ಲಿಸಿ: ಮನವಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.25
ವಿಭಾಗೀಯ ಕೇಂದ್ರವಾಗಿರುವ ಗುಲ್ಬರ್ಗದಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್, ಫಾರ್ಮಸಿ, ಹೋಮಿಯೋಪಥಿಕ್ ನಂತಹ ಮಹತ್ವದ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಾಗಿ ಕನಿಷ್ಟ ಭರವಸೆಯನ್ನು ನೀಡದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಆಳ್ವಿಕ ಪಕ್ಷಗಳನ್ನು ಸೋಲಿಸಲು ಎಸ್ಯುಸಿಐ(ಸಿ) ಪಕ್ಷದಿಂದ ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿಯಾಗಿರುವ ವಿ. ನಾಗಮ್ಮಾಳ್ ಅವರನ್ನು ಗೆಲ್ಲಿಸಬೇಕು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಮನವಿ ಮಾಡಿದರು.
ಗುಲ್ಬರ್ಗದ ಸಂತೋಷ ಕಾಲೋನಿ ಮತ್ತು ಹರಿಕೃಷ್ಣ ನಗರದಲ್ಲಿ ಪಕ್ಷದ ಅಭ್ಯರ್ಥಿ ವಿ. ನಾಗಮ್ಮಾಳ್ ಪರ ಮತ ಯಾಚಿಸಲು ಪಕ್ಷದ ಜಿಲ್ಲಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಾಗೂ ಅವರಿಂದ ಸಿಡಿದು ಹೊರಬಂದ ಇತರ ಎಲ್ಲ ಪಕ್ಷಗಳು ಕಳೆದ 60 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿವೆ. ಅವುಗಳಿಂದ ಹೇಳಿಕೊಳ್ಳುವಂತ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದರು.
ಇಂತಹ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿರುವ ನಮ್ಮ ಪಕ್ಷದ ಅಭ್ಯರ್ಥಿ ನಾಗಮ್ಮಾಳ್ ಅವರನ್ನು ಚುನಾಯಿಸಿದರೆ ಅವರು ಇಂತಹ ಸಮಸ್ಯೆಗಳನ್ನು ವಿಧಾನಸೌಧದಲ್ಲಿ ಚರ್ಚಿಸುತ್ತಾರೆ. ಆಳ್ವಿಕ ಸರ್ಕಾರ ಒಪ್ಪದಿದ್ದರೆ ವಿಧಾನಸೌಧದಿಂದ ಹೊರಬಂದು ಜನರನ್ನು ಸಂಘಟಿಸಿ ಹೋರಾಟ ಮಾಡುತ್ತಾರೆ. ಇದು ಜನತೆಗೆ ನಮ್ಮ ಪಕ್ಷದ ವಾಗ್ದಾನವಾಗಿದೆ ಎಂದರು.
ಕ್ಷೇತ್ರದ ಅಭ್ಯರ್ಥಿ ವಿ. ನಾಗಮ್ಮಾಳ್, ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕೆ.ಸೋಮಶೇಖರ, ಎಸ್. ಸಂದೀಪ, ಗೌಸ್ ಪಟೇಲ್, ಡಿ.ಉಮಾದೇವಿ, ಶರಣಗೌಡ ಗೂಗಲ್ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿ ಮತ ಯಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

