ನೇರ ಫೋನ್- ಇನ್ ಕಾರ್ಯಕ್ರಮ (ಸಂಕ್ಷಿಪ್ತ ಸುದ್ದಿ)
ಗುಲ್ಬರ್ಗ: ಗುಲ್ಬರ್ಗ ಆಕಾಶವಾಣಿ ಕೇಂದ್ರವು ಏ.26ರಂದು ಸಂಜೆ 6.55ಕ್ಕೆ ಮತದಾರರ ಜಾಗೃತಿ ಕುರಿತು ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದೆ. ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುವರು. ಆಸಕ್ತ ಆಕಾಶವಾಣಿ ಶ್ರೋತೃಗಳು ಮತದಾರರ ಜಾಗೃತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದೂ. 08472- 241854 ಮತ್ತು 241855ಗಳಿಗೆ ಕರೆ ಮಾಡಿ ಕೇಳಬಹುದು ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಅಂಜನಾ ಯಾತನೂರು ಅವರು ಕೋರಿದ್ದಾರೆ.
ನಾಳೆ ನಾಯಿಗಳಿಗೆ ರೇಬಿಸ್ ಲಸಿಕೆ
ಗುಲ್ಬರ್ಗ: ವಿಶ್ವ ಪಶುವೈದ್ಯಕೀಯ ದಿನಾಚರಣೆ ಅಂಗವಾಗಿ ಇಲ್ಲಿನ ಪಶುವೈದ್ಯಕೀಯ ಸಂಘದವರು ಏ.27ರಂದು ನಗರದಲ್ಲಿರುವ ನಾಯಿಗಳಿಗೆ ಹುಚ್ಚುನಾಯಿ ರೋಗ(ರೇಬಿಸ್) ವಿರುದ್ಧ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಅವಕಾಶವನ್ನು ನಗರದಲ್ಲಿರುವ ಸಾಕುನಾಯಿಗಳ ಮಾಲೀಕರು ಇದರ ಉಪಯೋಗ ಪಡೆಯಲು ಪಶುವೈದ್ಯಕೀಯ ಸಂಘದ ಪ್ರ. ಕಾರ್ಯದರ್ಶಿ ಡಾ. ಸೈಯ್ಯದ್ ಅಲ್ತಾಫ್ ಕೋರಿದ್ದಾರೆ.
ಕೆಜೆಪಿಗೆ ನೇಮಕ
ಗುಲ್ಬರ್ಗ: ಕೈಲಾಸನಾಥ ಧೀಕ್ಷಿತ ಅವರನ್ನು ಕರ್ನಾಟಕ ಜನತಾ ಪಕ್ಷದ ಗುಲ್ಬರ್ಗ ಮಹಾನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ದೀಕ್ಷಿತ ಅವರು ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ಅಧಿಕಾರವಧಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡುವುದರೊಂದಿಗೆ ಪಕ್ಷದ ಎಲ್ಲ ಕಾರ್ಯ ಚಟುವಟಿಕೆಗಳನ್ನು ಉನ್ನತ ಮಟ್ಟಕೊಯ್ಯಲು ಸಹಕರಿಸಬೇಕು ಎಂದು ಮಹಾನಗರ ಜಿಲ್ಲಾಧ್ಯಕ್ಷ ಬಸವರಾಜ ಇಂಗಿನ್ ಸೂಚಿಸಿದ್ದಾರೆ.
ಚಿತ್ತಾಪುರ ವರದಿ: ಕೆಜೆಪಿ ತಾಲೂಕು ಯುವ ಘಟಕದ ಉಪಾಧ್ಯಕ್ಷರನ್ನಾಗಿ ರಮೇಶ ಬಡಿಗೇರ ಹಾಗೂ ಗುರುರಾಜ ಹೊನ್ನಾಪುರ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಜೆಪಿ ಯುವ ಘಟಕ ತಾಲೂಕು ಅಧ್ಯಕ್ಷ ಬಸವಂತರಾವ ಪಾಟೀಲ್(ಗುಂಡುಗೌಡ) ತಿಳಿಸಿದ್ದಾರೆ.
ಗುಲ್ಬರ್ಗಕ್ಕೆ ಅನಂತ
ಗುಲ್ಬರ್ಗ: ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅನಂತಕುಮಾರ ಅವರು ಏ.26 ರಂದು ಗುಲ್ಬರ್ಗ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಅಂದು ಹೆಲಿಕ್ಯಾಪ್ಟರ್ ಮೂಲಕ ಮಧ್ಯಾಹ್ನ 2.30ಕ್ಕೆ ಆಳಂದದಲ್ಲಿ ಹಾಗೂ ಸಂಜೆ 4ಕ್ಕೆ ಗುಲ್ಬರ್ಗದಲ್ಲಿ ಪಕ್ಷದ ಚುನಾವಣಾ ಪ್ರಚಾರ ಕುರಿತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆಂದು ಜಿಲ್ಲಾ ಕಾರ್ಯದರ್ಶಿ ನಾಮದೇವ ರಾಠೋಡ ತಿಳಿಸಿದ್ದಾರೆ.
ಹುಂಡೇಕರ್ ನೇಮಕ
ಗುಲ್ಬರ್ಗ: ಕೆಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಶಫೀಕ್ ಅಹ್ಮದ್ ಹುಂಡೇಕರ್ ನೇಮಕಗೊಂಡಿದ್ದಾರೆ. ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯಡಿಯೂರಪ್ಪ ಅವರ ಆದೇಶದ ಮೇರೆಗೆ ಹುಂಡೇಕರ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ತಿಪ್ಪಣಪ್ಪ ಕಮಕನೂರ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

