ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಅಕ್ರಮ ಮದ್ಯ ವಶ; ಒಬ್ಬನ ಬಂಧನ
ಯಾದಗಿರಿ
: ಜಿಲ್ಲಾ ಚುನಾವಣಾ ಅಧಿಕಾರಿಗಳ ಆದೇಶದನ್ವಯ ಅಬಕಾರಿ ಅಧಿಕಾರಿಗಳು ತಾಲೂಕಿನ ಮುದ್ನಾಳ ಕ್ರಾಸ್ ಹತ್ತಿರ ರಸ್ತೆ ಕಾವಲು ಮಾಡುತ್ತಿದ್ದಾಗ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಬಳಸಿದ ವಾಹನ 6 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ದೇವೇಂದ್ರ ಹೆಡಗಿಮದ್ರಿ ಬಂಧಿತ ಆರೋಪಿ. ಈತ ಕ್ರೂಸರ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದಾಗ ತಪಾಸಣೆ ನಡೆಸಿ ಮದ್ಯ ಹಾಗೂ ಸುಮಾರು 4 ಲಕ್ಷ ಮೌಲ್ಯದ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ನಿರೀಕ್ಷಕ ವಿಠ್ಠಲರಾವ್ ಎಂ.ವಾಲಿ, ಉಪನಿರೀಕ್ಷಕ ನೂರ ಮಹ್ಮದ್ ಹಾಗೂ ಸಿಬ್ಬಂದಿ ಶರಫೋದ್ದಿನ್, ಎನ್. ಸಾಯಪ್ಪ, ಭೀಮಸೇನ, ಅಶೋಕ ದಾಳಿಯಲ್ಲಿ ಪಾಲ್ಗೊಂಡಿದ್ದರು.

ನೂರಾರು ಯುವಕರು ಬಿಜೆಪಿ ಸೇರ್ಪಡೆ
ಗುರುಮಠಕಲ್
: ಅಶೋಕ್ ಕಲಾಲ್ ನೇತೃತ್ವದಲ್ಲಿ ಗುರುಮಠಕಲ್ ಪಟ್ಟಣದ ವಿವಿಧ ವಾರ್ಡುಗಳ ನೂರಾರು ಯುವಕರು ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಗಿರೀಶ ಮಟ್ಟಣ್ಣನವರ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಬಿಜೆಪಿ ಧ್ವಜ ನೀಡಿದರು. ಶರಣು ಬೈಂಡ್ಲಾ, ಕಾಶಪ್ಪ ಕಟೆಲಗೇರಾ, ಮೊಗಲಪ್ಪ ಕಟ್ಟಲಗೇರಾ, ಬುಗ್ಗಪ್ಪ ಕಟ್ಟಲಗೇರಾ, ಪ್ರಶಾಂತ್ ತಲಾರಿ, ಹರಿಪ್ರಸಾದ್ ಹಜಾರೆ, ನರಸಪ್ಪ ಯಾದವ್, ಮೊಗಲಪ್ಪ ಮನ್ನೆ, ವಿಜಯಕುಮಾರ್, ರಾಮುಲು ಮದ್ದೂರ್, ಬಸವರಾಜ್ ಗೌಡ, ಕಿಷ್ಟಪ್ಪ ಮಡಿವಾಳ, ಮಹ್ಮದ್ ಇಬ್ರಾಹೀಮ್ ಹಲವರು ಸೇರ್ಪಡೆಯಾದರು. ದಂತಾಪುರ  ಚಿಂತಕುಂಟಾ  ಗ್ರಾಮಗಳ ಅನೇಕರು ಅಲ್ಲದೆ ಕಾಕಲವಾರ ಗ್ರಾಮದಲ್ಲಿ ರಮೇಶ್, ಅನೀಲಕುಮಾರ್, ಗೋಪಾಲ, ಸಾಯಿಬಣ್ಣ, ಸೇರಿ ಮಹಿಳೆಯರು, ಯುವಕರು ಬಿಜೆಪಿ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.